ಮೈಸೂರು,ಸೆಪ್ಟಂಬರ್,15,2020(www.justkannada.in): ಪ್ರಾಧಿಕಾರ ಆಸ್ತಿಯನ್ನು ಅಕ್ರಮವಾಗಿ ಕಬಳಿಕೆ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ವಿಶ್ವ ವಿಖ್ಯಾತ ಮೈಸೂರು ದಸರಾಗೆ 5 ಕೋಟಿ ರೂ. ಗಳನ್ನ ಮೈಸೂರು ಅಭಿವೃದ್ಧಿ ಪ್ರಾಧಿಕಾರ ನೀಡುವ ಬಗ್ಗೆ ಅನುಮೋದನೆ ನೀಡಲಾಗಿದೆ ಎಂದು ಮುಡಾ ಅಧ್ಯಕ್ಷ ಹೆಚ್.ವಿ ರಾಜೀವ್ ತಿಳಿಸಿದರು.
ಮುಡಾ ಸಾಮಾನ್ಯ ಸಭೆ ಬಳಿಕ ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೀವ್, ಪ್ರಾಧಿಕಾರದ ಪ್ರಥಮ ಸಾಮಾನ್ಯ ಸಭೆ ನಡೆಲಾಗಿದೆ. ಇನ್ನು ನಗರಾಭಿವೃದ್ಧಿ ಪ್ರಾಧಿಕಾರದ ಅಭಿವೃದ್ಧಿ ವಿಷಯ ಚರ್ಚಿಸಿ ಅನುಮೋದನೆ ಪಡೆಯಲಾಗಿದೆ. ಗುಂಪು ವಸತಿ ಯೋಜನೆ ಬಡವರಿಗೆ ವಸತಿ ನೀಡುವ ಕುರಿತು ತೀರ್ಮಾನ ಮಾಡಲಾಗಿದೆ. ನಾವು ಅತಿ ದೊಡ್ಡ ಬಡಾವಣೆ ಮಾಡುವುದರ ಬಗ್ಗೆ ಚಿಂತನೆ ಮಾಡಲಾಗಿದೆ. ಗುಂಪು ವಸತಿ ಯೋಜನೆಯಲ್ಲಿ ಕಡಿಮೆ ದರದಲ್ಲಿ ವಿನ್ಯಾಸ ಸಿದ್ದಪಡಿಸಿ ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.
ಹಾಗೆಯೇ ಅಗತ್ಯವಿದ್ದಲ್ಲಿ ದಸರಾಗೆ 5 ಕೋಟಿ ರೂಗಳನ್ನ ಪ್ರಾಧಿಕಾರ ನೀಡುವ ಬಗ್ಗೆ ಅನುಮೋದನೆ ನೀಡಲಾಗಿದೆ. ಕೋವಿಡ್ ವಿರುದ್ದ ಹೋರಾಡಿದ ಕೊರೋನಾ ವಾರಿಯರ್ಸ್ ಗಳಿಗೆ ಚಿಕಿತ್ಸೆಗೆ ವಿಕ್ರಂ ಜೇಷ್ಠ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಈ ಸಂಬಂಧ ಎಲ್ಲಾ ಅಗತ್ಯ ಸೇವೆಗಳಿಗೆ ಖರ್ಚು ವೆಚ್ಚಕ್ಕೆ ಮೂಡದಿಂದ 90 ಲಕ್ಷ.ರೂ ಗಳನ್ನು ನೀಡುವ ಬಗ್ಗೆ ಅನುಮೋದನೆ ನೀಡಲಾಗಿದೆ ಗುಂಪು ಮನೆಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕುರಿತು ನಿರ್ಣಯ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
250 ಸಿಎ ನಿವೇಶನಗಳ ಹಂಚಿಕೆಗೆ ಪ್ರಕಟಣೆ ಹೊರಡಿಸಲು ಅನುಮೋದನೆ….
ಹಾಗೆಯೇ ಸಭೆಯಲ್ಲಿ ಪ್ರಾಧಿಕಾರದಿಂದ ಲಭ್ಯವಿರುವ 250 ಸಿಎ ನಿವೇಶನಗಳನ್ನು ನಿಯಮಾನುಸಾರ ಹಂಚಿಕೆ ಮಾಡಲು ಪ್ರಕಟಣೆ ಹೊರಡಿಸಲು ಅನುಮೋದನೆ ಮಾಡಲಾಗಿದೆ. ರೈತರ ಜಮೀನಿನ ಭೂ ಸ್ವಾದಿನಪಡಿಸಿಕೊಂಡಿದ್ದು ಭೂ ಮಾಲೀಕರಿಗೆ ಶಾಸನಬದ್ಧ ಪರಿಹಾರವನ್ನು ಬಡ್ಡಿ ಸಮೇತ ಒಂದೇ ಕಂತಿನಲ್ಲಿ ಪಾವತಿ ಮಾಡಲಾಗುವುದು ಎಂದು ಹೆಚ್.ವಿ ರಾಜೀವ್ ತಿಳಿಸಿದರು.
ಜಿಲ್ಲೆಯ ಜಯಪುರ, ಇಲವಾಲ, ವರುಣಾ ಹೋಬಳಿ ಮತ್ತು ಶ್ರೀರಂಗಪಟ್ಟಣ ಹಾಗೂ ನಂಜನಗೂಡು ತಾಲ್ಲೂಕು ವ್ಯಾಪ್ತಿಯ 33 ಗ್ರಾಮಗಳನ್ನು ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಗೆ ಸೇರಸಲಾಗಿದೆ. ಕುಡಿಯವ ನೀರು, ಒಳಚರಂಡಿ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಕಲ್ಪಿಸಲು ಯೋಜನ ವರದಿ ತಯಾರಿಸಲಾಗುವುದು. ನಿವೃತ್ತ ಇಂಜಿನೀಯರ್ ಗಳನ್ನು ಯೋಜನಾ ವರದಿ ತಯಾರಿಸಲು ನೇಮಿಸಲಾಗುವುದು. ಖಾಸಗಿ ಬಡಾವಣೆಗಳಲ್ಲೂ ಹಸರೀಕರಣಗೊಳಿಸಲು ಉದ್ಯಾನವನ, ಮಳೆ ನೀರನ ಕೊಯ್ಲು ನಿರ್ಮಾಣ ಮಾಡಲು ಅನುಮೋದನೆ ಪಡೆಯಲಾಗಿದೆ ಎಂದು ಹೆಚ್.ವಿ ರಾಜೀವ್ ತಿಳಿಸಿದರು.
ಆನ್ ಲೈನ್ ನಲ್ಲಿ ಟ್ಯಾಕ್ಸ್ ವ್ಯವಸ್ಥೆಗೆ ಚಿಂತನೆ…
ಪ್ರಾಧಿಕಾರಕ್ಕೆ ಬರುವ ಜನರಿಗೆ ತ್ವರಿತವಾಗಿ ಕೆಲಸ ಆಗಬೇಕು ಎನ್ನುವ ನಿಟ್ಟಿನಲ್ಲಿ ಕ್ರಮ ವಹಿಸಿಕೊಳ್ಳಲಾಗಿದೆ. ಜನಸ್ಪಂದನಾ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಮತ್ತೆ ಪ್ರಾರಂಭ ಮಾಡಲಾಗುವುದು. ಆನ್ ಲೈನ್ ನಲ್ಲಿ ಟ್ಯಾಕ್ಸ್ ವ್ಯವಸ್ಥೆ ಮಾಡವುದು. ಪ್ಲಾನ್ ಅಪ್ರೂವಲ್ ಗಳನ್ನು ತ್ವರಿತವಾಗಿ ಮಾಡುವಂತೆ ಮುಡಾ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೆಚ್.ವಿ ರಾಜೀವ್ ತಿಳಿಸಿದರು.
ಒಂದಷ್ಟು ವ್ಯಕ್ತಿಗಳು ಖಾಲಿ ನಿವೇಶನ ವಸಪಡಿಸಿಕೊಂಡು ಸಾರ್ವಜನಿಕರಿಗೆ ವಂಚಿಸುತ್ತಿರುವ ಪ್ರಕರಣ ತಿಳಿದುಬಂದಿದೆ. ಹೀಗಾಗಿ ಸಾರ್ವಜನಿಕರು ವಂಚನೆಗೆ ಒಳಗಾಗಬಾರದು. ನಗರದ ಬಡವಾಣೆಗಳಲ್ಲಿ ಮುಡಾ ಜಾಗ ಯಾವುದು ಏನು ಅಂತ ತಿಳಿದಿಕೊಳ್ಳಬೇಕು. ಆಸ್ತಿ ಕೊಳ್ಳುವವರು ಎಚ್ಚರಿಕೆಯಿಂದ ಇರಬೇಕು. ಮುಡಾ ಸಂಬಂಧ ಆಕ್ರಮ ಪ್ರಕರಣಗಳು ಈ ಹಿಂದೆ ಲಕ್ಷ್ಮೀಪುರಂ ಠಾಣೆಯಲ್ಲಿ ಮಾತ್ರ ದಾಖಲಾಗುತ್ತಿತ್ತು. ಇನ್ಮುಂದೆ ಎಲ್ಲಾ ಠಾಣೆಗಳಲ್ಲೂ ಪ್ರಕರಣಗಳನ್ನ ದಾಖಲು ಮಾಡುವ ಬಗ್ಗೆ ಪೋಲಿಸ್ ಇಲಾಖೆಯೊಂದು ಚರ್ಚಸಿಲಾಗುವುದು. ಈ ಬಗ್ಗೆ ಪೊಲೀಸ್ ಇಲಾಖೆ ಕಮಿಷನರ್ ಜೊತೆ ಮಾತನಾಡಿದ್ದೇವೆ. ಮುಂದಿನ ದಿನಗಳಲ್ಲಿ ವಂಚನೆ ಪ್ರಕರಣಗಳಿಗೆ ಕಡಿವಾಣ ಹಾಕಲಾಗುವುದು. ಸಾರ್ವಜನಿಕರು ಸಹ ಆಸ್ತಿ ಕೊಳ್ಳುವಾಗ ಮಾರುವಾಗ ಎಚ್ಚರಿಕೆ ವಹಿಸಬೇಕು ಎಂದು ಹೆಚ್.ವಿ ರಾಜೀವ್ ಸಾರ್ವಜನಿಕರಿಗೆ ಮನವಿ ಮಾಡಿದರು.
Key words: 5 crore – Muda – Mysore Dasara- Approval -MUDA -President -HV Rajeev.