ಮುಂಬೈ,ಜೂ,10,2019(www.justkannada.in): ಭಾರತೀಯ ಕ್ರಿಕೆಟ್ ನ ಪ್ರಖ್ಯಾತ ಅಲ್ ರೌಂಡರ್ 2007ರ ಟ್ವಿ-20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಹೀರೋ ಎಂದೇ ಕರೆಸಿಕೊಳ್ಳುವ ಯುವರಾಜ್ ಸಿಂಗ್ ಇಂದು ಎಲ್ಲಾ ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್ ನಿವೃತ್ತಿ ಘೋಷಿಸಿದ್ದಾರೆ.
ಸಿಕ್ಸರ್ ಕಿಂಗ್ ಯುವರಾಜ್ ಇಂದು ನಿವೃತ್ತಿ ಹೇಳಲಿದ್ದಾರೆಂದು ಸಾಮಾಜಿಕ ತಾಣಗಳಲ್ಲಿ ಭಾರೀ ಸುದ್ದಿಯಾಗಿತ್ತು. ಅಂತೆಯೇ ಇಂದು ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿ ಯುವರಾಜ್ ಸಿಂಗ್ ತಮ್ಮ ಕ್ರಿಕೆಟ್ ಜೀವನದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಂಡು ಎಲ್ಲಾ ಮಾದರಿಯ ಅಂತರಾಷ್ಟ್ರಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ.
ಯುವರಾಜ್ ಸಿಂಗ್ ಕೀನ್ಯಾ ತಂಡದ ವಿರುದ್ಧ 2000 ರಲ್ಲಿ ಅಂತರಾಷ್ಟ್ರೀ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಈ ನಡುವೆ ತನ್ನ ಕೊನೆಯ ಪಂದ್ಯವನ್ನು ವೆಸ್ಟ್ ಇಂಡೀಸ್ ವಿರುದ್ಧ 2017 ರಲ್ಲಿ ಆಡಿದ್ದರು. ಈವರೆಗೆ ಯುವರಾಜ್ ಸಿಂಗ್ ಒಟ್ಟು 304 ಏಕದಿನ ಪಂದ್ಯಗಳನ್ನಾಡಿ 8701 ರನ್ ಗಳಿಸಿದ್ದಾರೆ. ಇದರಲ್ಲಿ 52 ಅರ್ಧಶತಕ ಹಾಗೂ 14 ಶತಕಗಳು ಸೇರಿವೆ.
ಹಾಗೆಯೇ 40 ಟೆಸ್ಟ್ ಪಂದ್ಯಗಳನ್ನಾಡಿರುವ ಯುವಿ 3277 ರನ್ ಕಲೆಹಾಕಿದ್ದಾರೆ. 58 ಟಿ-20 ಪಂದ್ಯಗನ್ನಾಡಿರುವ ಅವರು ಪಂದ್ಯಗಳಲ್ಲಿ 1177 ರನ್ ಬಾರಿಸಿದ್ದಾರೆ.
ಯುವರಾಜ್ ಸಿಂಗ್ ಆಲ್ರೌಂಡರ್ ಆಗಿ ಭಾರತದ ತಂಡದಲ್ಲಿ ಹಲವು ವರ್ಷಗಳ ಕಾಲ ಕ್ರಿಕೆಟ್ ವೃತ್ತಿಯಲ್ಲಿ ಮಿಂಚಿದ್ದರು. 2007ರ ಟಿ20 ವಿಶ್ವಕಪ್ ಹಾಗೂ 2011ರ ವಿಶ್ವಕಪ್ನಲ್ಲಿ ಆಡಿದ್ದ ಯುವರಾಜ್ ವಿಶ್ವಕಪ್ ಹೀರೋ ಎಂದು ಕರೆಸಿಕೊಂಡಿದ್ದರು.
Key words: All rounder Yuvraj Singh has announced his retirement from international cricket.
#YuvrajSingh #announced #retirement #internationalcricket.