ರೈತ , ಕಾರ್ಮಿಕ ವಿರೋಧಿ ಕಾನೂನುಗಳ ವಿರುದ್ಧ ಮೈಸೂರಿನಲ್ಲಿ ಪ್ರತಿಭಟನೆ

ಮೈಸೂರು,ಸೆಪ್ಟೆಂಬರ್,16,2020(www.justkannada.in) : ರೈತ ,ಕಾರ್ಮಿಕ ವಿರೋಧಿ ಸುಗ್ರಿವಾಜ್ಞೆಗಳ ವಿರುದ್ಧ ರೈತ, ದಲಿತ ಕಾರ್ಮಿಕರಿಂದ ಐಕ್ಯ ಹೋರಾಟ ಸಮಿತಿ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.

jk-logo-justkannada-logo

ನಗರದ ಜಲದರ್ಶಿನಿ ಸಮೀಪವಿರುವ ಶಾಸಕರ ಕಚೇರಿ ಎದುರು ಜಮಾವಣೆಗೊಂಡ ಪ್ರತಿಭಟನಕಾರರು ಸರಕಾರದ ರೈತ, ಕಾರ್ಮಿಕ ವಿರೋಧಿ ಕಾನೂನುಗಳ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

Farmer-anti-labor-laws-Protest-against

ಪ್ರತಿಭಟನಾ ಸ್ಥಳಕ್ಕೆ ಶಾಸಕ ಎಲ್.ನಾಗೇಂದ್ರ ಭೇಟಿ ನೀಡಿ, ರೈತರಿಂದ ಮನವಿ ಪತ್ರ  ಸ್ವೀಕರಿಸಿದರು. ಈ ಸಂದರ್ಭ ರೈತ ಮುಖಂಡರು,  ನಮ್ಮ ಪರ ನೀವು ಅಧಿವೇಶನದಲ್ಲಿ ಮಾತನಾಡಬೇಕು. ನಾವು ಯಾವುದೇ  ಕಾರಣಕ್ಕೂ ರೈತ ವಿರೋಧಿ ಕಾಯ್ದೆಗಳ ಜಾರಿಗೆ ತರಲು ಬಿಡಬಾರದು ಎಂದು ಒತ್ತಾಯಿಸಿದರು.

ನಾವು ಈಗಾಗಾಲೇ ಹಲವು ಹೋರಾಟಗಳನ್ನ ಮಾಡಿದ್ದೇವೆ‌. ಆದರು ಕೇಂದ್ರ ಸರ್ಕಾರ ಚರ್ಚೆ ಮಾಡದೆ ಕಾಯ್ದೆಗಳನ್ನ ಜಾರಿಗೆ ತರಲು ಹೊರಟಿದೆ. ಈ ಕುರಿತು ನೀವು ಅಧಿವೇಶನದಲ್ಲಿ ಕಾಯ್ದೆಗಳ ಬಗ್ಗೆ ಚರ್ಚೆ ಮಾಡಬೇಕು ಎಂದು ಆಗ್ರಹಿಸಿದರು. ಶಾಸಕ ಎಲ್.ನಾಗೇಂದ್ರ ಮನವಿ ಪತ್ರವನ್ನು ಸರ್ಕಾರಕ್ಕೆ ತಲುಪಿಸುವುದಾಗಿ ತಿಳಿಸಿದರು.

key words ; Farmer-anti-labor-laws-Protest-against