ಮೈಸೂರು,ಸೆಪ್ಟಂಬರ್,17,2020(www.justkannada.in): ಮೈಸೂರು ತಾಲ್ಲೂಕು ಜಯಪುರ ಹೋಬಳಿಯ ಉದ್ಭೂರು ಗ್ರಾಮದಲ್ಲಿ ಮಾಗ್ನಸೈಟ್ ಗಣಿಗಾರಿಕೆಯಿಂದಾಗಿ ರೈತರ ಜಮೀನಿಗೆ ಅಪತ್ತು ಎದುರಾಗಿದೆ.
ಮಾಗ್ನಸೈಟ್ ಗಣಿಗಾರಿಕೆಯಿಂದ ಗ್ರಾಮದ ಅಕ್ಕಪಕ್ಕದ ಜಮೀನುಗಳಿಗೆ ದೂಳು ತುಂಬಿಕೊಳ್ಳುತ್ತಿದೆ. ಗಣಿಗಾರಿಕೆಯಿಂದ ಬಂದ ಮಣ್ಣಿನ ರಾಶಿಯಿಂದ ರೈತರ ಜಮೀನಿಗೆ ಅಪಾಯ ಉಂಟಾಗಿದೆ. ಧೂಳು ಆವರಿಸಿ ಬೆಳೆ ಕೈಗೆ ಸಿಗುತ್ತಿಲ್ಲವೆಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ.
ಕಳೆದ 15 ವರ್ಷಗಳಿಂದಲೂ ಇಲ್ಲಿ ಗಣಿಗಾರಿಕೆ ನಡೆಯುತ್ತಿದ್ದು ರಾಶಿ ರಾಶಿ ಮಣ್ಣಿನಿಂದ ಬರುತ್ತಿರುವ ಧೂಳು ಫಸಲನ್ನ ನಾಶ ಪಡಿಸುತ್ತಿದೆ. ಇದರಿಂದಾಗಿ ರೈತರು 15 ವರ್ಷಗಳಿಂದ ಬೆಳೆ ಕಾಣದೆ ಕಂಗಾಲಾಗಿದ್ದು ಗಣಿಗಾರಿಕೆ ಮೇಲೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ರೂ ಯಾವುದೇ ಪ್ರಯೋಜನವಿಲ್ಲ ಎನ್ನುತ್ತಿದ್ದಾರೆ ಗ್ರಾಮಸ್ಥರು.
ಗಣಿಗಾರಿಕೆ ವಿರುದ್ದ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ದ ರೈತರು ಆಕ್ರೋಶ ವ್ಯಕ್ತಪಡಿಸಿದ್ದು ಎದೆ ಬಾಯಿ ಬಡಿದುಕೊಂಡು ಹಿಡಿಶಾಪ ಹಾಕುತ್ತಿದ್ದಾರೆ. ಇನ್ನು ಅಧಿಕಾರಿಗಳು ಸ್ಥಳಪರಿಶೀಲನೆಗೆ ಬಂದಾಗ ಗ್ರಾಮಸ್ಥರ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಗಣಿಗಾರಿಕೆಯಿಂದ ನೂರಾರು ಎಕರೆ ಜಮೀನಿನ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಗ್ರಾಮಸ್ಥರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಹೀಗಾಗಿ ಗಣಿಗಾರಿಕೆಯಿಂದ ಆಗುತ್ತಿರುವ ತೊಂದರೆಗೆ ಪರಿಹಾರ ಸೂಚಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದು, ಇಲ್ಲದಿದ್ದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಜತೆಗೆ ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಆಗ್ರಹಿಸಿದ್ದಾರೆ.
Key words: Destroy -crop – mining-mysore- udbur-villagers