ದುಬೈ, ಸೆಪ್ಟೆಂಬರ್ 17, 2020 (www.justkannada.in): ಸೆಪ್ಟೆಂಬರ್ 19ರಿಂದ ಐಪಿಎಲ್ ಆರಂಭಗೊಳಲ್ಲಿದೆ. ಈ ನಡುವೆ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಆಟಗಾರರು ಯುಎಇಗೆ ಆಗಮಿಸಿದ ವೇಳೆ ಕ್ವಾರಂಟೈನ್ ಅವಧಿ ಕಡಿತಗೊಳಿಸುವಂತೆ ಮನವಿ ಮಾಡಿದ್ದಾರೆ.
ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ರನ್ನರ್ ಅಪ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆಡಲಿವೆ. ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ 3ನೇ ಏಕದಿನ ಪಂದ್ಯ ಸೆಪ್ಟೆಂಬರ್ 16ರಂದು ನಡೆಯಲಿದೆ.
ಬಯೋಬಬಲ್ನಲ್ಲಿರುವ 2 ದೇಶಗಳ ಆಟಗಾರರು ಕ್ವಾರಂಟೈನ್ ಅವಧಿಯನ್ನು 3 ದಿನಗಳಿಗೆ ಇಳಿಸಲು ಬಿಸಿಸಿಐಗೆ ಮನವಿ ಮಾಡಿದ್ದಾರೆ.
ಯುಎಇಗೆ ಆಗಮಿಸಿದ ನಂತರ ಆರು ದಿನಗಳ ಕ್ವಾರಂಟೈನ್ನಲ್ಲಿ ಇರಬೇಕಾಗುತ್ತದೆ. ಅಂದರೆ ನಾವು ಮೊದಲ ಪಂದ್ಯದಿಂದ ಆಡಲು 6 ದಿನಗಳ ಮುಂಚಿತವಾಗಿ ಅಲ್ಲಿರಬೇಕು. ಆದರೆ, ಅದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕ್ವಾರಂಟೈನ್ ಅವಧಿ ಕಡಿಮೆ ಮಾಡುವಂತೆ ಕೆಲವು ಆಟಗಾರರು ಮನವಿ ಮಾಡಿದ್ದಾರೆ.