ಬೆಂಗಳೂರು,ಸೆಪ್ಟಂಬರ್,17,2020(www.justkannada.in): ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ಹಿನ್ನೆಲೆ ತೋಟಗಾರಿಕೆ ಹಾಗೂ ರೇಷ್ಮೆಇಲಾಖೆ ಸಚಿವ ಡಾ. ನಾರಾಯಣಗೌಡ ಅವರು ಪೌರಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಿದರು.
ಬೆಂಗಳೂರಿನ ತಮ್ಮ ನಿವಾಸಕ್ಕೆ ಆರ್ ಎಮ್ ವಿ ಬಡಾವಣೆ ವ್ಯಾಪ್ತಿಯ ಪೌರ ಕಾರ್ಮಿಕರನ್ನ ಆಹ್ವಾನಿಸಿದ ಸಚಿವ ನಾರಾಯಣಗೌಡ, ದಿನ ಬಳಕೆ ವಸ್ತುಗಳಿರುವ ಕಿಟ್ ಅನ್ನು ನೀಡಿದರು. ಇದೆ ವೇಳೆ ಮಾತನಾಡಿದ ಪೌರಕಾರ್ಮಿಕ, ತೋಟಗಾರಿಕೆ ಹಾಗೂ ರೇಷ್ಮೆಇಲಾಖೆ ಸಚಿವ ಡಾ. ನಾರಾಯಣಗೌಡ, ವಿಶ್ವದಲ್ಲೆ ಮೊದಲ ಬಾರಿಗೆ ಸಫಾಯಿ ಕರ್ಮಚಾರಿಗಳ ಪಾದ ತೊಳೆದ ಪ್ರಧಾನಿ ನಮ್ಮ ಮೋದಿ. ಸ್ವಚ್ಚತೆಯ ಪರಿಪಾಲಕರು ಎಂದು ನಮ್ಮ ಪೌರಕಾರ್ಮಿಕರನ್ನ ಕರೆದು, ಗೌರವಿಸಿದರು.
ಕೊರೊನಾ ವಾರಿಯರ್ಸ್ ಗಳಿಗೆ ಚಪ್ಪಾಳೆ ತಟ್ಟಿ , ದೀಪ ಬೆಳಗಿ, ಹೆಲಿಕಾಪ್ಟರ್ ಮೂಲಕ ಪುಷ್ಪಮಳೆ ಸುರಿಸಿ ಗೌರವಿಸಿದ್ದು ಪ್ರಧಾನಿ ಮೋದಿಯವರಿಗೆ ಪೌರಕಾರ್ಮಿಕರ ಮೇಲೆ ಇರುವ ಗೌರವವನ್ನ ತೋರಿಸುತ್ತದೆ. ಇಂತ ಮೇರು ವ್ಯಕ್ತಿತ್ವದ ಪ್ರಧಾನಿ ಮೋದಿ ಅವರಿಗೆ ಜನುಮದಿನದ ಶುಭಾಶಯ ಹೇಳುತ್ತಾ, ಅದರ ಅಂಗವಾಗಿ ಸಾಂಕೇತಿವಾಗಿ ಪೌರ ಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಿ ಗೌರವ ಸೂಚಿಸುತ್ತಿದ್ದೇನೆ ಎಂದು ಸಚಿವ ನಾರಾಯಣಗೌಡ ಹೇಳಿದರು.
Key words: Prime Minister Modi’s- Birthday-Minister -Narayana Gowda- distribute- kit