ಬೆಂಗಳೂರು, ಸೆಪ್ಟೆಂಬರ್, 18, 2020(www.justkannada.in) : ಪ್ರಧಾನಿಯವರೊಂದಿಗಿನ ಭೇಟಿಯನ್ನು ಕುರ್ಚಿ ಉಳಿಸಿಕೊಳ್ಳುವುದಕ್ಕೆ ಬಳಸಿಕೊಳ್ಳದೇ, ರಾಜ್ಯದ ಹಿತರಕ್ಷಣೆ ಬಗ್ಗೆ ನಾಲ್ಕು ಮಾತನಾಡಿ, ರಾಜ್ಯದ ಜನ ನಿಮ್ಮೊಂದಿಗಿದ್ದಾರೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಕುಟುಕಿದ್ದಾರೆ.
ನವೆದೆಹಲಿಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಂದು ಭೇಟಿಯಾಗಿ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರಚನೆ ಸಂಬಂಧಿಸಿದಂತೆ ಚರ್ಚೆಗೆ ತೆರಳಿದ್ದಾರೆ. ಈ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್ ಮೂಲಕ ಪ್ರಧಾನಿ ಯವರೊಂದಿಗಿನ ಭೇಟಿಯನ್ನು ರಾಜ್ಯದ ಹಿತರಕ್ಷಣೆಗೆ ಸಂಬಂಧಿಸಿದಂತೆ ಬಳಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.
ಸಿಎಂ ಬದಲಾವಣೆ ಸಂಬಂಧಿಸಿದಂತೆ ಊಹಾಪೋಹಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ, ಪ್ರಧಾನಿಯವರೊಂದಿಗಿನ ಭೇಟಿಯನ್ನು ಕುರ್ಚಿ ಉಳಿಸಿಕೊಳ್ಳುವುದಕ್ಕೆ ಬಳಸಿಕೊಳ್ಳಬೇಡಿ. ರಾಜ್ಯದ ಜನ ನಿಮ್ಮೊಂದಿಗಿದ್ದಾರೆ. ರಾಜ್ಯದ ಹಿತರಕ್ಷಣೆ ಕುರಿತು ನಾಲ್ಕು ಮಾತನಾಡಿ, ನೆರೆಪರಿಹಾರವನ್ನ ಕೇಳಿ. ಪ್ರಧಾನಿ ಮೋದಿ ಅವರ ಜವಾಬ್ದಾರಿಯನ್ನ ನೆನಪಿಸಿ ಎಂದು ಹೇಳಿದ್ದಾರೆ.
key words : Don’t use-visit-Prime Minister-retain-chair-Former CM Siddaramaiah-tweeted