ಬೆಂಗಳೂರು,ಜೂ,10,2019(www.justkannada.in): ಹೂಡಿಕೆದಾರರಿಗೆ ಐಎಂಎ ಜ್ಯುವೆಲರಿ ಕಂಪನಿ ಮಾಲೀಕ ಮನ್ಸೂರ್ ಖಾನ್ ವಂಚನೆ ಪ್ರಕರಣ ಕುರಿತು ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಎಂ.ಬಿ ಪಾಟೀಲ್ ಭರವಸೆ ನೀಡಿದ್ದಾರೆ.
ಪ್ರಕರಣ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಗೃಹ ಸಚಿವ ಎಂ.ಬಿ ಪಾಟೀಲ್, ಮನ್ಸೂರ್ ಖಾನ್ ಆಡಿಯೋ ವೈರಲ್ ಆದ ಬಳಿಕ ಡಿಜಿ ಜತೆ ಚರ್ಚಿಸಿದ್ದೇನೆ. ಪ್ರಕರಣ ಸಂಬಂಧ ಎಲ್ಲಾ ರೀತಿಯ ತನಿಖೆ ಕುರಿತು ಪೊಲೀಸ್ ಕಮಿಷನರ್ ಜತೆ ಚರ್ಚಿಸಿದ್ದೇನೆ. ಹಣಕಾಸಿನ ವ್ಯವಹಾರವಾಗಿರುವುದರಿಂದ ಉನ್ನತ ಮಟ್ಟದ ತನಿಖೆ ಅಗತ್ಯವಿದೆ. ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಹಾಗೆಯೇ ಈ ಹಿಂದೆ ಐಎಂಎ ವಿರುದ್ದ ಸಿಐಡಿ ತನಿಖೆ ನಡೆಸಿ ಆರ್ ಬಿಐ ಗಮನಕ್ಕೆ ತರಲಾಗಿತ್ತು. ಈ ವೇಳೆ ಆರ್ ಬಿಐ ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ ಎಂದಿತ್ತು. ಹಣ ದ್ವಿಗುಣ ಮಾಡುವುದಾಗಿ ಹೇಳಿ ಜನರಿಗೆ ಮೋಸಮಾಡುತ್ತಾರೆ. ವಂಚಕರನ್ನ ನಂಬಿ ಅಮಾಯಕ ಜನರು ಮೋಸ ಹೋಗುತ್ತಾರೆ. ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕುವ ಕುರಿತು ನಾಳೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆವರ ಜತೆ ಚರ್ಚಿಸುತ್ತೇನೆ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.
Key words: IMA owner Mansoor Khan fraud case for investors. Home Minister M.B. Patil promises appropriate action.
#IMAfraudcase #investors. #HomeMinister #MBPatil #action