ಮೈಸೂರು,ಸೆಪ್ಟಂಬರ್, 19,2020(www.justkannada.in): ಇಂದಿನ ಅಧುನಿಕ ಯುಗದಲ್ಲಿ ವಯಸ್ಸಾದ ಹೆತ್ತ ತಂದೆ-ತಾಯಿಯನ್ನ ದೂರ ಮಾಡುವ ಮಕ್ಕಳಿರುವ ಈ ಕಾಲದಲ್ಲಿ ಮೈಸೂರಿನ ಇಲ್ಲೊಬ್ಬರು ತನ್ನ ತಾಯಿ ಆಸೆಯನ್ನ ಪೂರೈಸುವ ಮೂಲಕ ಆಧುನಿಕ ಶ್ರವಣಕುಮಾರ ಎಂದು ಖ್ಯಾತರಾಗಿದ್ದಾರೆ.
ತನ್ನ ತಾಯಿ ವ್ಯಕ್ತಪಡಿಸಿದ ಆಸೆಯನ್ನ ಪೂರೈಸುವ ಸಲುವಾಗಿ ಮೈಸೂರಿನ ಕೃಷ್ಣಕುಮಾರ್ ತನ್ನ ತಾಯಿಯ ಜತೆ ಹಳೇ ಸ್ಕೂಟರ್ ನಲ್ಲೇ ಇಡೀ ಭಾರತ ತೀರ್ಥಯಾತ್ರೆ ಮಾಡಿ ಮೊನ್ನೆಯಷ್ಟೇ ಮೈಸೂರಿಗೆ ಬಂದಿಳಿದಿದ್ದರು. ತಾಯಿಯ ಜತೆ ತೀರ್ಥಯಾತ್ರೆ ಕೈಗೊಂಡಿದ್ದ ಕೃಷ್ಣ ಕುಮಾರ್ ಅವರಿಗೆ ಮಹೇಂದ್ರ ಕಂಪನಿ ಕಡೆಯಿಂದ ಹೊಸ ಕಾರು ಗಿಫ್ಟ್ ಕೊಡುವುದಾಗಿ ಕಂಪನಿ ಮಾಲೀಕ ಆನಂದ್ ಮಹೇಂದ್ರ ತಿಳಿಸಿದ್ದರು.
ತೀರ್ಥಯಾತ್ರೆ ಮುಗಿಸಿ ಮೈಸೂರಿಗೆ ಆಗಮಿಸಿರುವ ಅಧುನಿಕ ಶ್ರವಣಕುಮಾರನ ಕೈಗೆ ಪ್ರೀತಿಯ ಉಡುಗೊರೆ ಸೇರಿದೆ. ಹೌದು ಕೃಷ್ಣ ಕುಮಾರ್ ಅವರನ್ನ ಮೈಸೂರಿನ ಮಹೇಂದ್ರ ಶೋರೂಂಗೆ ಕರೆಸಿ ಸಿಬ್ಬಂದಿಗಳು ಕಾರು ನೀಡಿದ್ದಾರೆ. ಇಡೀ ಭಾರತ ತೀರ್ಥಯಾತ್ರೆ ಮೂಲಕ ಎಲ್ಲಾ ಕ್ಷೇತ್ರಗಳನ್ನ ತಾಯಿಗೆ ತೋರಿಸಿ ತಾಯಿಯ ಆಸೆ ಪೂರೈಸಿದ ಕೃಷ್ಣ ಕುಮಾರ್ ಅವರಿಗೆ ಮಹೇಂದ್ರ ಕಂಪನಿ ಮಹೇಂದ್ರ kuv100 ಕಾರನ್ನ ಉಡುಗೊರೆಯಾಗಿ ನೀಡಿದೆ.
Key words: mysore-mother- modern- shravanakumar-mahendra –company-car-gift