ಬೆಂಗಳೂರು,ಸೆಪ್ಟೆಂಬರ್,22,2020(www.justkannada.in) : ವಿಧಾನಸಭೆಯಲ್ಲಿ ಹಾಜರಾಗುವ ಎಲ್ಲಾ ಸದಸ್ಯರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚಿಸಿದ್ದಾರೆ.
ನೆನ್ನೆ ಅಧಿವೇಶನದಲ್ಲಿ ಅನೇಕರು ಮಾಸ್ಕ್ ಧರಿಸದ ಕಾರಣ ಅಧಿವೇಶನದಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂದು ಸೂಚಿಸಿರುವುದಾಗಿ ತಿಳಿದು ಬಂದಿದೆ.
ಶನಿವಾರದವರೆಗೆ ಅಧಿವೇಶನ ನಡೆಯಲಿದ್ದು, ವಿಧಾನಸೌಧದೊಳಗೆ ಪ್ರವೇಶಿಸುವ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮಾತನಾಡುವಾಗ ಮಾಸ್ಕ್ ಹಾಕ್ಕೋಂಡೇ ಮಾತನಾಡಬೇಕು. ಯಾರಿಗಾದರೂ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಆದ್ರೂ ನಿರ್ಲಕ್ಷ್ಯ ಮಾಡದೇ ಮೆಡಿಕಲ್ ತಪಾಸಣೆಗೊಳಗಾಗಬೇಕು ಎಂದು ಹೇಳಿದರು.
ವಿಧಾನಸೌಧ ಪ್ರವೇಶಿಸುವ ಎಲ್ಲರೂ ತಮಗೆ ಕೊರೊನಾ ನೆಗೆಟಿವ್ ಎಂದು ಸೂಚಿಸುವ ಐಡಿ ಟ್ಯಾಗ್ ಧರಿಸುವುದು ಕಡ್ಡಾಯ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚನೆ ನೀಡಿದ್ದಾರೆ.
key words : Mandatory-mask-during-session-Dress-Speaker Kaggery-Note