ವಕೀಲೆ ಮೇಲೆ ಪೋಲಿಸ್ ಇನ್ಸ್ ಪೆಕ್ಟರ್ ದರ್ಪ ಆರೋಪ : ಕೋರ್ಟ್ ಕಲಾಪದಿಂದ ಹೊರಗುಳಿದ ಮೈಸೂರು ಅಡ್ವೋಕೇಟ್ಸ್…

 

ಮೈಸೂರು, ಜೂ.11, 2019 : ( www.justkannada.in news ) ಪ್ರಕರಣವೊಂದರ ಸಂಬಂಧ ಮಾಹಿತಿಗೆಂದು ಠಾಣೆಗೆ ತೆರಳಿದ್ದ ವೇಳೆ ಪೋಲಿಸ್ ಇನ್ಸ್ಪೆಕ್ಟರ್ ಮಹಿಳಾ ವಕೀಲೆ ಜತೆಗೆ ಅನುಚಿತವಾಗಿ ವರ್ತಿಸಿದರು ಎಂದು ಆರೋಪಿಸಿ ಮೈಸೂರಿನ ವಕೀಲರು ಮಂಗಳವಾರ ಕೋರ್ಟ್ ಕಲಾಪದಿಂದ ಹೊರಗುಳಿದ ಘಟನೆ ನಡೆದಿದೆ.

ಮೈಸೂರಿನ ಕುವೆಂಪು ನಗರ ಠಾಣೆ ಇನ್ಸ್ಪೆಕ್ಟರ್ ರಾಜು ವಿರುದ್ದ ವಕೀಲೆ ಆರೋಪ ಮಾಡಿರುವುದು. ಜತೆಗೆ ಈ ಸಂಬಂಧ ವಕೀಲರ ಸಂಘಕ್ಕೂ ದೂರು ನೀಡಿದ್ದಾರೆ. ಭಾಗ್ಯ ಹೆಚ್‌.ಕೆ. ಎಂಬ ಮಹಿಳಾ ವಕೀಲೆ ದೂರು ನೀಡಿರುವವರು.

ಏನಿದು ಘಟನೆ:

ಜೂ.10ರಂದು ಮಧ್ಯಾಹ್ನ ಕುವೆಂಪುನಗರ ಪೊಲೀಸ್ ಠಾಣೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿಗೆ ವಕೀಲೆ ಭಾಗ್ಯ‌ ತೆರಳಿದ್ದರು. ಈ ವೇಳೆ ಇನ್ಸಪೆಕ್ಟರ್ ರಾಜು ಅವರನ್ನು ಮಾತನಾಡಿಸಲು ಮುಂದಾದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ನಿನ್ನಂತ ವಕೀಲರನ್ನು ನಾನು ಎಷ್ಟು ನೋಡಿಲ್ಲ. ನೀನು ಯಾವ ಸೀಮೆಯ ವಕೀಲೆ, ನೀನು ಮತ್ತು ನಿನ್ನಂತಹ ವಕೀಲರು ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಅವಾಜ್ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಅಲ್ಲದೆ, ನನ್ನ ಬಳಿ ಬಂದು ನನ್ನ ಎಡಕೈ ರಟ್ಟೆ ಹಿಡಿದೆಳೆದು ಆಚೆ ದಬ್ಬಿ ಮಹಿಳಾ ಪೊಲೀಸ್ ರನ್ನು ಕರೆಸಿ ಆಚೆ ತಳ್ಳಿದ್ದಾರೆ. ಮಹಿಳೆಯರಿಗೆ ಮತ್ತು ವಕೀಲೆರಿಗೆ ಸ್ವಲ್ಪವೂ ಗೌರವವನ್ನೇ ಕೊಡದೇ ನನ್ನ ಮೇಲೆ ಮಾನಸಿಕ ಮತ್ತು ದೈಹಿಕ ದೌರ್ಜನ್ಯ ನಡೆಸಿದ್ದಾರೆ. ನನ್ನ ವಕೀಲ ವೃತ್ತಿಗೆ ಅವಮಾನ ಮಾಡಿ, ಪೈಶಾಚಿಕ ಪ್ರವೃತ್ತಿ ಮೆರೆದಿದ್ದಾರೆ. ಇಂತಹ ಪ್ರವೃತ್ತಿ ಹೊಂದಿರುವ ಇನ್ಸಪೆಕ್ಟರ್ ರಾಜು ಅವರ ಮೇಲೆ ಮೈಸೂರು ವಕೀಲರ ಸಂಘ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು.
ಸಂಬಂಧಪಟ್ಟ ಮೇಲಾಧಿಕಾರಿಯವರ ಬಳಿ ಚರ್ಚಿಸಿ ನನ್ನ ಮೇಲೆ ದೈಹಿಕ ಮತ್ತು ಮಾನಸಿಕ ದೌರ್ಜನ್ಯ ಎಸಗಿರುವ  ಇನ್ಸಪೆಕ್ಟರ್ ರಾಜು ಅವರ ಮೇಲೆ ಕ್ರಮ ಕೈಗೊಳ್ಳುವಂತೆ ದೂರು.

key words :

mysore city police inspector misbehaves with lady advocate alleged by a women advocate. condemning this incident mysore city advocates boycott court today.