ಬೆಂಗಳೂರು,ಸೆಪ್ಟಂಬರ್,23,2020(www.justkannada.in): ಮೆಡಿಕಲ್ ಕಿಟ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಇಂದು ರಾಜ್ಯ ವಿಧಾನ ಮಂಡಲ ಅಧಿವೇಶನದಲ್ಲಿ ಚರ್ಚೆಯಾಗುತ್ತಿದ್ದು ಈ ವೇಳೆ ವಿಪಕ್ಷ ನಾಯಕ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ನಡುವೆ ವಾಕ್ಸಮರ ನಡೆದಿದೆ.
ಸದನದಲ್ಲಿ ಕೊರೋನಾ ನಿರ್ವಹಣೆ ಕುರಿತು ಚರ್ಚೆಗೆ ಉತ್ತರ ನೀಡಿದ ಸಚಿವ ಸುಧಾಕರ್, ಗೊತ್ತಿದ್ದು ಗೊತ್ತಿಲ್ಲದೆಯೋ ನಮ್ಮ ಸರ್ಕಾರ ಭ್ರಷ್ಟಾಚಾರಕ್ಕೆ ಅವಕಾಶ ನೀಡಿಲ್ಲ. ಮೆಡಿಕಲ್ ಕಿಟ್ ಖರೀದಿಯಲ್ಲಿ ಹಗರಣ ನಡೆದಿಲ್ಲ ಎಂದು ಸಮರ್ಥಿಸಿಕೊಂಡರು.
ಸಚಿವರ ಉತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷ ನಾಯಕ ಸಿದ್ಧರಾಮಯ್ಯ, ನೀವು ಹಗರಣ ನಡೆದಿಲ್ಲ ಎಂದು ಹೇಳುತ್ತೀರಿ. ಆದರೆ ನಾವು ಹಗರಣ ನಡೆದಿದೆ ಎಂದು ಹೇಳುತ್ತೇವೆ. ವೆಂಟಿಲೇಟರ್ ಎಂದರೇ ಏನು..? ನನಗೆ ಗೊತ್ತಿರುವ ಪ್ರಕಾರ ವೆಂಟಿಲೇಟರ್ ಅನ್ನು ಉಸಿರಾಟದ ಸಮಸ್ಯೆ ಇರುವವರಿಗೆ ಕೃತಕ ಉಸಿರಾಟ ಮಾಡಲು ವೆಂಟಿಲೇಟರ್ ಬಳಕೆ ಮಾಡುತ್ತಾರೆ. ಐಸಿಯು ನಲ್ಲಿ ಚಿಕಿತ್ಸೆ ನೀಡಲು ವೆಂಟಿಲೇಟರ್ ಅವಶ್ಯಕತೆ ಎಂಬುದಾಗಿ ತಿಳಿದಿದ್ದೇನೆ. ಈ ವೆಂಟಿಲೇಟರ್ ಗಳನ್ನು ಒಂದಕ್ಕೆ ನಾಲ್ಕು ಲಕ್ಷ, ಮತ್ತೊಂದಕ್ಕೆ 18 ಲಕ್ಷ ರೂ. ಗೆ ಖರೀದಿ ಮಾಡಲಾಗಿದ್ದು ಎಷ್ಟು ಸರಿ ಎಂದು ಸಚಿವ ಸುಧಾಕರ್ ಗೆ ಪ್ರಶ್ನಿಸಿದರು.
ನಾಲ್ಕು ಲಕ್ಷ ರೂ, ವೆಂಟಿಲೇಟರ್ ಬಳಸುವ ರೋಗ ಯಾವುದು ಹಾಗೆಯೇ 10 ಲಕ್ಷ ರೂ. ನ ವೆಂಟಿಲೇಟರ್ ಬಳಸುವ ರೋಗ ಯಾವುದು…? ಎಂದು ಸಚಿವ ಸುಧಾಕರ್ ಅವರಿಗೆ ಸಿದ್ಧರಾಮಯ್ಯ ಪ್ರಶ್ನಿಸಿದರು.
Key words: Medical kit -purchase –scam-session-opposition leader-Siddaramaiah -Minister -Sudhakar.