89 ವರ್ಷದ ವೃದ್ಧ ಕೊಳಲು‌‌‌ ವಾದಕ ಸಿ.ಎಸ್. ನಾಗರಾಜ್  ಅವರನ್ನು ಗುಣಪಡಿಸಿದ ಮೈಸೂರು ಜಿಲ್ಲಾ ಕೋವಿಡ್ ಆಸ್ಪತ್ರೆ

ಮೈಸೂರು,ಸೆಪ್ಟೆಂಬರ್,23,2020(www.justkannada.in) : ಯಾವುದೇ ವಯಸ್ಸಿನ ಕೋವಿಡ್ ರೋಗಿಗಳನ್ನು ಗುಣಪಡಿಸಬಹುದು ಎಂಬುದನ್ನು ಮೈಸೂರು ಜಿಲ್ಲಾ ಕೋವಿಡ್ ಆಸ್ಪತ್ರೆ ವೈದ್ಯರು ಹಲವಾರು ಪ್ರಕರಣಗಳಲ್ಲಿ ಸಾಬೀತು ಮಾಡಿದ್ದಾರೆ. ಇದಕ್ಕೆ ಪೂರಕವಾಗಿ 89 ವರ್ಷದ ವೃದ್ಧ ಕೊಳಲು‌‌‌ ವಾದಕ ಸಿ.ಎಸ್.ನಾಗರಾಜ್  ಅವರನ್ನು ಗುಣಪಡಿಸಿ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.jk-logo-justkannada-logoಹುಣಸೂರು ತಾಲ್ಲೂಕು ಚಿಲ್ಕುಂದ ಗ್ರಾಮದವರಾದ 89 ವಯಸ್ಸಿನ ಕೊಳಲು ವಾದಕ ಸಿ.ಎಸ್.ನಾಗರಾಜು ಅವರು ಸೆಪ್ಟೆಂಬರ್ ಮೊದಲ ವಾರ ಜ್ವರಕ್ಕೆ ತುತ್ತಾಗಿದ್ದರು, ಸ್ಥಳೀಯ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆದರೂ ಗುಣವಾಗಿರಲಿಲ್ಲ. ಜ್ವರ ತೀವ್ರಗೊಂಡು ಮಾತನಾಡದ ಸ್ಥಿತಿಗೆ ಬಂದಾಗ ಹುಣಸೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿನ ವೈದ್ಯರು ತಕ್ಷಣ ಕೋವಿಡ್ ಪರೀಕ್ಷೆ ಮಾಡಿಸಿ, ಪಾಸಿಟಿವ್ ಬಂದ ಕೂಡಲೇ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಶಿಫಾರಸ್ಸು ಮಾಡಿದ್ದರು.

ಅದರಂತೆ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಆಸ್ಪತ್ರೆಗೆ ಅವರನ್ನು ದಾಖಲಿಸಿಕೊಳ್ಳಲಾಗಿತ್ತು. ಸೆಪ್ಟೆಂಬರ್ 10 ರಂದು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಇವರನ್ನು ದಾಖಲಿಸಿಕೊಂಡು ಸೂಕ್ತ ಚಿಕಿತ್ಸೆ ನೀಡಲಾಯಿತು. ವೈದ್ಯರು, ನರ್ಸ್ ಗಳು,  ಸಿಬ್ಬಂದಿ ಎಲ್ಲರೂ ಇವರನ್ನು ಅತ್ಯಂತ ಕಾಳಜಿಯಿಂದ ನೋಡಿಕೊಂಡಿದ್ದಾರೆ.

 89 year-old-flute-player-cured-Nagaraj-Mysore-District-Kovid-Hospital

89 ವರ್ಷದ‌ ವ್ಯಕ್ತಿಯನ್ನು ಗುಣಪಡಿಸಿದ್ದು ಹೆಮ್ಮೆ

ಐ.ಸಿ.ಯು. ಮಟ್ಟಕ್ಕೆ ಹೋಗುವ ರೋಗಿಯನ್ನು ಗುಣಪಡಿಸುವುದು ಕಷ್ಟಕರವಾದ ಸ್ಥಿತಿ. ಅಂತಹದರಲ್ಲಿ ಇವರು 10 ದಿನಗಳ ಕಾಲ ಐ.ಸಿ.ಯು.ನಲ್ಲಿ ಇದ್ದರು. ಆ ಸ್ಥಿತಿಯಲ್ಲಿ ರೋಗಿಯನ್ನು ಗುಣಪಡಿಸಿ ಐ.ಸಿ.ಯು.ನಿಂದ‌ ಹೊರತರುವುದು ಅತ್ಯಂತ ಸವಾಲಿನ ಕೆಲಸ. ಈ ಸವಾಲನ್ನು ಸ್ವೀಕರಿಸಿ 89 ವರ್ಷದ‌ ವ್ಯಕ್ತಿಯನ್ನು ಗುಣಪಡಿಸಿದ್ದು ಹೆಮ್ಮೆಯಾಗಿದೆ. ನಮ್ಮ ವೈದ್ಯಕೀಯ ತಂಡ ಹಾಗೂ ಸಿಬ್ಬಂದಿಗಳಿಗೆ ಅಭಿನಂದಿಸುತ್ತೇನೆ ಎಂದು ಕೋವಿಡ್ ಆಸ್ಪತ್ರೆ ಜಿಲ್ಲಾ ಸರ್ಜನ್ ಡಾ.ರಾಜೇಶ್ವರಿ ತಿಳಿಸಿದ್ದಾರೆ.

 

ತಂದೆಗೆ ಮಗನಿಂದ ಧೈರ್ಯ

ಸಿ.ಎಸ್. ನಾಗರಾಜ್ ಪಾರ್ಕಿನ್ಸನ್ ಕಾಯಿಲೆ‌ ಇತ್ತು. ಜೊತೆಗೆ ತೀವ್ರ ಜ್ವರದಿಂದ ಬಳಲಿದ್ದರು. ಇಂತಹ ಪರಿಸ್ಥಿತಿಯಲ್ಲೂ ನಮ್ಮ ವೈದ್ಯರು ಯಶಸ್ವಿಯಾಗಿ ಚಿಕಿತ್ಸೆ ಮಾಡಿದ್ದಾರೆ. ಕೋವಿಡ್ ರೋಗಿ ಜೊತೆ ಕೇರ್ ಟೇಕರ್ ಆಗಿ ಇರಲು ಬಹುತೇಕರು ಒಪ್ಪುವುದಿಲ್ಲ. ಅಂತಹದರಲ್ಲಿ ಸಿ.ಎಸ್.ನಾಗರಾಜ್ ಅವರ ಮಗ 53 ವರ್ಷದ ವೆಂಕಟೇಶ್ ಮೂರ್ತಿ ಅವರು ರೋಗಿಯೊಂದಿಗೆ ಆಸ್ಪತ್ರೆಯಲ್ಲೇ ಇದ್ದು ತಂದೆಗೆ ಧೈರ್ಯ ತುಂಬಿದ್ದಾರೆ.

ಧೈರ್ಯಗೆಡದೆ ವೈದ್ಯರ ಮಾರ್ಗದರ್ಶನ, ಚಿಕಿತ್ಸೆ ಪಡೆದುಕೊಂಡರೆ ಗುಣಮುಖ

 89 year-old-flute-player-cured-Nagaraj-Mysore-District-Kovid-Hospital

ಗುಣವಾಗಿ ಸೆಪ್ಟೆಂಬರ್ 22 ರಂದು ಆಸ್ಪತ್ರೆಯಿಂದ ಬಿಡುಗಡೆ ಆಗುವಾಗ ಎಲ್ಲರೂ ಸಂಭ್ರಮಿಸಿದ್ದಾರೆ. ನಮ್ಮ ಕುಟುಂಬದವರಿಗೆಲ್ಲಾ ಸಂತೋಷವಾಗಿದೆ ಎಂದು ಅವರ ಮಗ ವೆಂಕಟೇಶ್ ಮೂರ್ತಿ ಸಂತೋಷವ್ಯಕ್ತಪಡಿಸಿದ್ದಾರೆ.  ಕೋವಿಡ್ ಬಂದ ಕೂಡಲೇ ಧೈರ್ಯಗೆಡದೆ ವೈದ್ಯರ ಮಾರ್ಗದರ್ಶನ ಹಾಗೂ ಚಿಕಿತ್ಸೆ ಪಡೆದುಕೊಂಡರೆ ಗುಣವಾಗಬಹುದು ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ.

key words : 89 year-old-flute-player-cured-Nagaraj-
Mysore-District-Kovid-Hospital