ಬ್ಯಾಂಕ್ ಗೆ ಕನ್ನಹಾಕಿ 1 ಕೋಟಿಗೂ ಹೆಚ್ಚು ಹಣ ದೋಚಿದ ದರೋಡೆಕೋರರು..

ಕೊಪ್ಪಳ,ಸೆಪ್ಟಂಬರ್, 24,2020(www.justkannada.in):  ಬ್ಯಾಂಕ್ ಗೆ ಕನ್ನಹಾಕಿದ ದರೋಡೆಕೋರರು 1 ಕೋಟಿಗೂ ಹೆಚ್ಚು ಹಣವನ್ನು ದೋಚಿ ಪರಾರಿಯಾಗಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.jk-logo-justkannada-logo

ಕೊಪ್ಪಳ ಜಿಲ್ಲೆ ಯಲ್ಬುರ್ಗ ತಾಲ್ಲೂಕಿನ ಬೇವೊರ ಗ್ರಾಮದಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಬರೋಬ್ಬರಿ 1 ಕೋಟಿಗೂ ಹೆಚ್ಚು ಹಣವನ್ನು ಕಳ್ಳರು ದರೋಡೆ ಮಾಡಿದ್ದಾರೆ. ಕರ್ನಾಟಕ ಗ್ರಾಮೀಣ ಬ್ಯಾಂಕ್ ನ ಶಟರ್ ಕಟ್ ಮಾಡಿರುವ ದರೋಡೆಕೋರರು ಬ್ಯಾಂಕ್ ನಲ್ಲಿದ್ಧ ಒಂದು ಕೋಟಿಗೂ ಅಧಿಕ ಹಣವನ್ನ ದೋಚಿ ಪರಾರಿಯಾಗಿದ್ದಾರೆ.koppal-bank-robbary-1 crore-money- theft

ಜತೆಗೆ ಬ್ಯಾಂಕ್ ನ ಸಿಸಿ ಕ್ಯಾಮರಾ ಹಾರ್ಡ್ ಡಿಸ್ಕ್ ಕೂಡ ಹೊತ್ತೊಯ್ದಿದ್ದಾರೆ ಎನ್ನಲಾಗಿದೆ. ಇದೀಗ ಘಟನಾ ಸ್ಥಳಕ್ಕೆ ಕೊಪ್ಪಳ ಎಸ್ಪಿ ಜಿ. ಸಂಗೀತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,  ಈ ಕುರಿತು ಪ್ರಕರಣ ದಾಖಲಾಗಿದೆ. ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ಧಾರೆ.

 

Key words: koppal-bank-robbary-1 crore-money- theft