ಬೆಂಗಳೂರು,ಸೆಪ್ಟಂಬರ್,25,2020(www.justkannada.in): ಭೂ ಸುಧಾರಣೆ ಕಾಯಿದೆ, ಎಪಿಎಂಸಿ ಕಾಯಿದೆ ತಿದ್ಧುಪಡಿ ವಿರೋಧಿಸಿ ಸರ್ಕಾರದ ವಿರುದ್ಧ ಪ್ರತಿಬಟನೆಗಿಳಿದಿರುವ ರೈತರು ಇಂದು ರಾಜ್ಯಾದ್ಯಂತ ರಸ್ತೆ ತಡೆ ನಡೆಸಿ ಆಕ್ರೋಶ ಹೊರಹಾಕುತ್ತಿದ್ದಾರೆ.
ಬೆಂಗಳೂರಿನ ಮೌರ್ಯ ವೃತ್ತ, ಪ್ರೀಡಂ ಪಾರ್ಕ್, ಮೈಸೂರು ರಸ್ತೆ ಬಳಿ ರೈತರು ರಸ್ತೆ ತಡೆ ನಡೆಸಿ, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಇದೇ ವೇಳೆ ಗೊರಗುಂಟೆ ಪಾಳ್ಯದಲ್ಲಿ ರೈತರು ರಸ್ತೆಗೆ ಅಡ್ಡಲಾಗಿ ಕುಳಿತು ರೈತರು ಪ್ರತಿಭಟನೆಗೆ ಮುಂದಾಗಿದ್ದು ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ರೈತರನ್ನ ವಶಕ್ಕೆ ಪಡೆದು ಫ್ರೀಡಂಪಾರ್ಕ್ ಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.
ಭೂ ಸುಧಾರಣೆ ಕಾಯಿದೆ, ಎಪಿಎಂಸಿ ಕಾಯಿದೆ ತಿದ್ಧುಪಡಿ ವಿರೋಧಿಸಿ ಮೈಸೂರು, ದಾವಣಗೆರೆ, ಉತ್ತರಕನ್ನಡ, ಶಿವಮೊಗ್ಗ, ಸೇರಿ ರಾಜ್ಯಾದ್ಯಂತ ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ. ಹಾಗೆಯೇ ಕಲ್ಬುರ್ಗಿಯ ಅಫಜಲಪುರ ಬಳಿ ರೈತ ಮುಖಂಡರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರ. ಬೃಹತ್ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
Key words: Opposition – amendment – APMC-act-Land Reform Act- Protest- farmers -arrested – police