ಬೆಂಗಳೂರು,ಸೆಪ್ಟಂಬರ್,25,2020(www.justkannada.in): ಭೂಸುಧಾರಣಾ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆ ವಿರೋಧಿಸಿ ರೈತರು ಇಂದು ರಾಜ್ಯ ಮತ್ತು ರಾಷ್ಟ್ರೀಯ ಹೆದ್ಧಾರಿ ತಡೆದು ಪ್ರತಿಭಟನೆ ನಡೆಸುತ್ತಿದ್ದರೇ ಸೆಪ್ಟಂಬರ್ 28ಕ್ಕೆ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ರಸ್ತೆ ತಡೆ ಕಾರ್ಯಕ್ರಮ ನಮ್ಮದಲ್ಲ. ನಾವು ಈ ಕಾರ್ಯಕ್ರಮದಲ್ಲಿ ಭಾಗವಹಿಸೋದಿಲ್ಲ. ಇದು ನಮ್ಮ ಹೋರಾಟ ಅಲ್ಲ ಹಾಗಾಗಿ ನಾವು ಭಾಗವಹಿಸುವುದಿಲ್ಲ. ಎರಡೆರೆಡು ಕಾರ್ಯಕ್ರಮ ಮಾಡುವುದು ಅವಶ್ಯಕತೆ ಇಲ್ಲ ಇವತ್ತು ರಸ್ತೆ ತಡೆ ಮಾಡಿದ್ರೆ ಮತ್ತೆ ಅರ್ಧಕರ್ಧ ಕರ್ನಾಟಕ ಬಂದ್ ಆಗುತ್ತೆ ಹಾಗಾಗಿ ನಾವು ರಸ್ತೆ ತಡೆಯಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇನ್ನು ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಇವತ್ತು ಎಲ್ಲ ರೈತ ಸಂಘಟನೆಗಳು ಸೇರಿ ಪ್ರತಿಭಟನೆ ಪಾಲ್ಗೊಳ್ಳಲು ನಿರ್ಧಾರಿಸಿದ್ದೇವೆ. ಸೆಪ್ಟಂಬರ್ 28 ನೇ ತಾರೀಖು ಬಹಳ ದೊಡ್ಡ ಸಂಖ್ಯೆಯಲ್ಲಿ ಬಂದ್ ಮಾಡಲಾಗುತ್ತದೆ. ಸೆಪ್ಟಂಬರ್ 28 ರ ಬಂದ್ ಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದೇವೆ. ರೈತರ ಹೋರಾಟವನ್ನು ನಿರ್ಲಕ್ಷ್ಯ ಮಾಡಿದ್ರೆ ಬಹಳ ಕೆಟ್ಟ ಪರಿಸ್ಥಿತಿಯನ್ನು ಸರ್ಕಾರ ಎದುರಿಸ ಬೇಕಾಗುತ್ತದೆ ಕನಿಷ್ಠ ಸೌಜನ್ಯಕಾದ್ರೂ ಸರ್ಕಾರ ರೈತರನ್ನು ಮಾತನಾಡಿಸುವ ಪ್ರಯತ್ನ ಮಾಡಿಲ್ಲ ಎಂದು ಕೋಡಿಹಳ್ಳಿ ಚಂದ್ರಶೇಖರ್ ಕಿಡಿಕಾರಿದರು.
Key words: farmer-leaders- Kodihalli Chandrasekhar -roadblock – not ours- protest