ಬೆಂಗಳೂರು,ಸೆಪ್ಟಂಬರ್,25,2020(www.justkannada.in): ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯ ನಿಧನರಾದ ಹಿನ್ನೆಲೆ ನಾಳೆ ರಾಜ್ಯಾದ್ಯಂತ ಶೋಕಾಚರಣೆ ಮಾಡಲು ಘೋಷಣೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇಂದು ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಖ್ಯಾತ ಗಾಯಕ ಎಸ್ ಬಿ ಬಾಲಸುಬ್ರಹ್ಮಣ್ಯಂ ಅವರ ಅಂತ್ಯಕ್ರಿಯೆ ನಾಳೆ ಬೆಳಿಗ್ಗೆ 11 ಗಂಟೆಗೆ ಚೆನ್ನೈನ ತಾಮರೈ ಪಾಕಂನಲ್ಲಿ ನಡೆಯಲಿದೆ. ಈ ನಡುವೆ ನಾಳೆ ಬೆಳಿಗ್ಗೆ 9 ಗಂಟೆವರೆಗೆ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಇನ್ನು ನಾಳೆ ರಾಜ್ಯಾದ್ಯಂತ ಶೋಕಾಚರಣೆ ಮಾಡುವುದು ಮತ್ತು ಎಲ್ಲಾ ಸಭೆ ಸಮಾರಂಭಗಳನ್ನು ರದ್ಧು ಮಾಡಲಾಗಿದೆ. ಹಾಗೆಯೇ ರಾಷ್ಟ್ರಧ್ವಜವನ್ನು ಅರ್ಧಕ್ಕಿಳಿಸಿ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಗೌರವ ಸಲ್ಲಿಸಲು ನಿರ್ಧರಿಸಲಾಗಿದೆ.
Key words: singer- S P Balasubramanyam- death-Declaration – mourning- tomorrow