ಸಿಇಓ ನೋಟೀಸ್ ಡೋಂಟ್ ಕೇರ್ : ಪ್ರತಿಭಟನೆ ಮುಂದುವರಿಕೆ

ಮೈಸೂರು,ಸೆಪ್ಟೆಂಬರ್,26,2020(www.justkannada.in) : ವಿವಿಧ ಬೇಡಿಕೆ ಈಡೇರಿಸುವಂತೆ ಆರೋಗ್ಯ ಇಲಾಖೆ ಗುತ್ತಿಗೆ ಹೊರ ಹಾಗೂ ಗುತ್ತಿಗೆ ನೌಕರರ ಪ್ರತಿಭಟನೆ ಮುಂದುವರಿದಿದ್ದು, ಸಿಇಓ ನೋಟೀಸ್ ಗೂ ಡೋಂಟ್ ಕೇರ್ ಎನ್ನಲಾಗಿದೆ.jk-logo-justkannada-logo

ಪ್ರತಿಭಟನೆ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆ ಜಿಪಂ ಸಿಇಒ ಭಾರತಿ ನೊಟೀಸ್ ನೀಡಿದರು. ನೋಟಿಸಿಗೂ ಡೋಂಟ್ ಕೇರ್ ಎಂದು ಕರ್ತವ್ಯಕ್ಕೆ ಹಾಜರಾಗದ ಸಿಬ್ಬಂದಿ ಪ್ರತಿಭಟನೆ ಮುಂದುವರಿಸಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ 927 ಮಂದಿ ನೌಕರರು ಗೈರು. ಯಾವುದೇ ನೋಟೀಸ್ ಗೂ ನಾವು ಬಗ್ಗುವುದಿಲ್ಲ. ನಮ್ಮ ವಜಾ ಮಾಡಿದರೆ ಬೀದಿಗಿಳಿಯುತ್ತೇವೆ. ನಾವೂ ಕಾನೂನು ಹೋರಾಟಕ್ಕೂ ಸಿದ್ದ. ನಮ್ಮ ಬೇಡಿಕೆ ಈಡೇರುವವರೆಗೂ ನಮ್ಮ ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಪ್ರತಿಭಟನಕಾರರು ತಿಳಿದ್ದಾರೆ.

CEO,Notice,Care,Protests,Continued

ನಮಗೆ ಸೇವಾಭದ್ರತೆ ನೀಡಲೇಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡವೇಕು. ವಿಮಾ ಸೌಲಭ್ಯ ನೀಡಬೇಕು. ಏಪ್ರಿಲ್ ಒಂದು ದಿನದ ವಿರಾಮ ಮತ್ತು ಬಾಂಡ್ ಪದ್ದತಿ ಕೈಬಿಡಬೇಕು. ನಿಜವಾದ ಕರೋನಾ ವಾರಿಯರ್ಸ್ ಗಳಾಗಿ ಸೇವೆ ಸಲ್ಲಿಸುತ್ತಿರುವವರು ನಾವು ಎಂದು ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಆಗ್ರಹಿಸಿದ್ದಾರೆ.

key words : CEO-Notice-Care-Protests-Continued