ಶೋಕಿಗಾಗಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳರ ಬಂಧನ

ಮೈಸೂರು,ಸೆಪ್ಟೆಂಬರ್,26,2020(www.justkannada.in) : ಶೋಕಿಗಾಗಿ ಕಳ್ಳತನ ಮಾಡಿದ್ದ ಖತರ್ನಾಕ್ ಕಳ್ಳರನ್ನು ಭರ್ಜರಿ ಕಾರ್ಯಚರಣೆ ನಡೆಸುವ ಮೂಲಕ ಕೆ.ಆರ್.ಠಾಣೆ ಪೊಲೀಸರು ಬಂಧಿಸಿದ್ದಾರೆ.

jk-logo-justkannada-logo

ಕೆ.ಆರ್.ಠಾಣೆ ಆರಕ್ಷಕ ನೀರಿಕ್ಷಕ ಶ್ರೀನಿವಾಸ್, ಉಪನೀರೀಕ್ಷಕ ಸುನೀಲ್ ನೇತೃತ್ವದ ತಂಡವು ಸೂಕ್ತ ಕಾರ್ಯಚರಣೆ ನಡೆಸುವ ಮೂಲಕ ಕಳ್ಳತನ ಮಾಡಿ ಜೈಲಿಗೆ ಹೋಗುವುದನ್ನೆ ಹವ್ಯಾಸವಾಗಿಸಿಕೊಂಡಿದ್ದ ಖತರ್ನಾಕ್ ಗ್ಯಾಂಗ್ ಅನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕಳ್ಳರು ಜೈಲಿನಲ್ಲಿದ್ದಾಗಲೇ ಖರ್ತನಾಕ್ ಗ್ಯಾಂಗ್ ಕಟ್ಟಿ ಕಳ್ಳತನಕ್ಕೆ ಸಂಚು ರೂಪಿಸುತ್ತಿದ್ದರು ಎಂದು ತಿಳಿದು ಬಂದಿದೆ. ಎ1 ಬಂಧಿತನ ಮೇಲೆ ಬರೋಬ್ಬರಿ 50ಕ್ಕೂ ಹೆಚ್ಚು ಕೇಸ್ ಗಳಿದೆ. ಮೈಸೂರು, ಬೆಂಗಳೂರು ಸೇರಿದಂತೆ ವಿವಿಧ ಕಡೆ ನಡೆದಿರುವ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ 4 ಆರೋಪಿಗಳ ಬಂಧಿಸಲಾಗಿದೆ.

Qatarnak-robbers-arrested-shoplifting

6 ಸರಗಳ್ಳತನ ಮತ್ತು 7 ವಿವಿಧ ಮಾದರಿಯ ದ್ವಿಚಕ್ರ ವಾಹನಗಳ ಕಳ್ಳತನದಲ್ಲಿ ಭಾಗಿಯಾಗಿದ್ದು, ಬಂಧಿತರಿಂದ 14 ಲಕ್ಷ ಮೌಲ್ಯದ ವಸ್ತುಗಳು ವಶಕ್ಕೆ ಪಡೆಯಲಾಗಿದೆ. ಎ1 ಮಹಮ್ಮದ್ ಫರಾಜ್,ಎ2 ಅರ್ಬಾಜ್ ಖಾನ್, ಎ3 ಜಿಬ್ರಾನ್ ಖಾನ್, ಎ4 ಇಮ್ರಾನ್ ಖಾನ್ ಬಂಧಿತ ಆರೋಪಿಗಳು ಎಂದು ಸುದ್ದಿಗೋಷ್ಟಿಯಲ್ಲಿ ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತೆ ಗೀತಾ ಪ್ರಸನ್ನ ತಿಳಿಸಿದ್ದಾರೆ.

key words : Qatarnak-robbers-arrested-shoplifting