ಮೈಸೂರು,ಸೆಪ್ಟಂಬರ್,29,2020(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು ಈ ಹಿನ್ನೆಲೆ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸುವುದನ್ನ ಜಿಲ್ಲಾಡಳಿತ ಕಡ್ಡಾಯಗೊಳಿಸಿದೆ.
ಈ ನಡುವೆ ಇಂದು ಬೆಳ್ಳಂ ಬೆಳೀಗ್ಗೆ ಮಾಸ್ಕ್ ಹಾಕದೆ ಮಾರ್ಕೆಟ್ ಗೆ ಬಂದವರಿಗೆ ಮೈಸೂರು ಮಹಾಮನಗರ ಪಾಲಿಕೆ ಅರೋಗ್ಯ ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ದಂಡ ವಿಧಿಸಿದ್ದಾರೆ. ಪಾಲಿಕೆಯಿಂದ ಎಂ ಜಿ ರೋಡ್ ಮಾರ್ಕೆಟ್ ಬಳಿ ಮಾಸ್ಕ್ ಡ್ರೈವ್ ಮಾಡಿದ್ದು, ಮಾಸ್ಕ್ ಧರಿಸದೆ ಬಂದ ಸಾರ್ವಜನಿಕರಿಗೆ ಪಾಲಿಕೆ ಅಧಿಕಾರಿಗಳು ಎಚ್ಚರಿಕೆ ನೀಡಿ ದಂಡ ವಿಧಿಸಿದ್ದಾರೆ.
ಮೈಸೂರಿನಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿದ್ದು ಈ ಹಿನ್ನೆಲೆ ಕೊರೋನಾ ನಿಯಮಗಳನ್ನ ಪಾಲಿಕೆ ಕಠಿಣಗೊಳಿಸಿದ್ದು ಸಾರ್ವಜನಿಕರು ಮಾಸ್ಕ್ ಧರಿಸದೆ ಎಲ್ಲಂದರಲ್ಲಿ ಓಡಾಡಿದರೇ ದಂಡ ಬೀಳೋದು ಖಚಿತ.
key words: mysore- city corporation-fine-mask- public