ಬೆಂಗಳೂರು,ಅಕ್ಟೋಬರ್,1,2020(www.justkannada.in): ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚಾಗಿದ್ದು ಈ ಹಿನ್ನೆಲೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಹಾಗೆಯೇ ಮಾಸ್ಕ್ ಧರಿಸದೇ ಸಾರ್ವಜನಿಕ ಸ್ಥಳದಲ್ಲಿ ಓಡಾಡುವವರಿಗೆ ದಂಡ ಹಾಕಲಾಗುತ್ತಿದ್ದು ಇದೀಗ ದಂಡದ ಮೊತ್ತವನ್ನು ಏರಿಕೆ ಮಾಡಲಾಗಿದೆ.
ಮಾಸ್ಕ್ ಧರಿಸದೇ ಓಡಾಡುವರಿಗೆ ಬೆಂಗಳೂರು ಸೇರಿ ನಗರ ಪ್ರದೇಶಗಳಲ್ಲಿ ಒಂದು ಸಾವಿರ ರೂ. ಗ್ರಾಮೀಣ ಭಾಗದಲ್ಲಿ 500 ರೂ ದಂಡ ವಿಧಿಸಲು ಸರ್ಕಾರ ನಿರ್ಧರಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಡಿಸಿಎಂ ಅಶ್ವಥ್ ನಾರಾಯಣ್ ಜನರ ಸುರಕ್ಷತೆಗಾಗಿ ದಂಡ ಏರಿಕೆ ಮಾಡಲಾಗಿದೆ.ನಾವು ಕೊರೋನಾ ನಡುವೆ ಬದುಕಬೇಕಿದೆ. ಮಾಸ್ಕ್ ಕೊರೋನಾಗೆ ರಾಮಬಾಣವಾಗಿದೆ. ಯಾರೂ ಸಹ ಮಾಸ್ಕ್ ತೆರೆದು ಓಡಾಡಬಾರದು. ಈ ವಿಚಾರವನ್ನು ಹಗುರವಾಗಿ ತೆಗೆದುಕೊಳ್ಳಬೇಡಿ ಎಂದು ಸಲಹೆ ನೀಡಿದ್ದಾರೆ.
ಇನ್ನು ಆರ್ ಆರ್ ನಗರ ಮತ್ತು ಶಿರಾ ಕ್ಷೇತ್ರ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ಆಯ್ಕೆ ಕುರಿತು ಪ್ರತಿಕ್ರಿಯಸಿದ ಡಿಸಿಎಂ ಅಶ್ವಥ್ ನಾರಾಯಣ್, ಬಿಜೆಪಿ ಅಭ್ಯರ್ಥಿ ಬಗ್ಗೆ ಚರ್ಚಿಸಿ ತೀರ್ಮಾನ ಮಾಡಲಾಗುತ್ತದೆ. ಪಕ್ಷದಿಂದ ಅಭ್ಯರ್ಥಿಗಳ ಹೆಸರು ಘೋಷಣೆಯಾಗಲಿದೆ. ಹೀಗಾಗಿ ವೈಯಕ್ತಿಕವಾಗಿ ಅಭಿಪ್ರಾಯ ಹೇಳೊದು ಸರಿಯಲ್ಲ ಎಂದು ನುಡಿದರು.
Key words: Mask -Ramabana –Corona-Penalties – DCM- Ashwath Narayan.