ರಂಗಭೂಮಿ ಕಲಾವಿದ ಆರ್.ಎಸ್.ಪದ್ಮನಾಭ್(ಪದ್ದು) ನಿಧನ

ಮೈಸೂರು,ಅಕ್ಟೊಂಬರ್,01,2020(www.justkanada.in) :  ನಿರಂತರ ಸೇರಿದಂತೆ ಹಲವು ರಂಗ ತಂಡಗಳೊಂದಿಗೆ ಅನೇಕ ನಾಟಕಗಳಲ್ಲಿ ಅಭಿನಯಿಸಿದ ರಂಗಭೂಮಿ ಕಲಾವಿದ ಆರ್.ಎಸ್.ಪದ್ಮನಾಭ್(49) ಗುರುವಾರ ನಿಧನರಾದರು.jk-logo-justkannada-logo

1996ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ MCA ಪದವಿ ಪಡೆದಿದ್ದು, ನಟನೆಯಲ್ಲಿ ತುಂಬ ಆಸಕ್ತಿಯಿದ್ದ ಕಾರಣ M.Sc ಓದುವಾಗ ಜನಮನ ಮತ್ತು ನಿರಂತರ  ರಂಗತಂಡಕ್ಕೆ ಆರ್.ಎಸ್.ಪದ್ಮನಾಭ್ ಸೇರಿದ್ದರು.

ಬಳಿಕ ಬೆಂಗಳೂರಿನ siemens company ಯಲ್ಲಿ ಒಂದು ವರ್ಷದ ತರಬೇತಿಗೆ ಹೋಗಿದ್ದರು. ಈ ಸಂದರ್ಭ ಲೋಕೇಶ್ ಎಂಬ ಗೆಳೆಯನ ಮದುವೆಗೆಂದು ಮೈಸೂರಿಗೆ ಬಂದು ಮತ್ತೆ ನಿರಂತರ ಸೇರಿಕೊಂಡವರು siemens company ಗೆ ಮರಳಿ ಹೋಗಲಿಲ್ಲ. ನಿರಂತರಕ್ಕೆ ಸೇರುವುದಕ್ಕೆ ಮುಂಚೆ ನಾಗಮಂಗಲದ ಕನ್ನಡಸಂಘದಲ್ಲಿ ಮಂಡ್ಯರಮೇಶರ ನಿರ್ದೇಶನದ ಅನೇಕ ನಾಟಕದಲ್ಲಿ ಅಭಿನಯಿಸಿದ್ದರು ಎಂದು ರಂಗಭೂಮಿ ಕಲಾವಿದ ಶ್ರೀನಿವಾಸ್ ಸ್ಮರಿಸಿದ್ದಾರೆ.

ಪದ್ಮನಾಭ್ ಸುಮಾರು 12 ವರ್ಷಗಳು ಕಲಾವಿದರಾಗಿ ನಿರಂತರ ರಂಗತಂಡದೊಂದಿಗೆ ಗುರುತಿಸಿಕೊಂಡಿದ್ದರು. ಬಹುಮುಖ್ಯ ನಾಟಕಗಳಾದ ಕೂಡಲಸಂಗಮ, ಜಂಬೆಸರ್ ನಿರ್ದೇಶನದ ಟೀ ಹೌಸ್, ಜನ್ನಿಸರ್ ನಿರ್ದೇಶನದ ಜಲಗಾರ, ಶರೀಫ್, ಬಿಂಬ ಇನ್ನೂ ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದರು.

ಸ್ನೇಹ ಜೀವಿ, ಭಾವಜೀವಿಯಾಗಿದ್ದ ಪದ್ಮನಾಭ್ ಅವರ ನಿಧನಕ್ಕೆ ನಿರಂತರ ತಂಡದ ಸದಸ್ಯರು ಸೇರಿದಂತೆ ಅನೇಕ ರಂಗಭೂಮಿ ಕಲಾವಿದರು ಸಂತಾಪ ಸೂಚಿಸಿದ್ದಾರೆ.

key words : Theater-artist-R.S.Padmanabh(Paddy)-passed-away