ಮೈಸೂರು,ಜೂ,12,2019(www.justkannada.in): ಮೈಸೂರು ನಗರ ಪಾಲಿಕೆಯಲ್ಲಿ ಮಾಫಿಯಾ ನಡೆಯುತ್ತಿದ್ದು, ಇಲ್ಲಿ ಸೀನಿಯರ್ ಕಾರ್ಪೋರೇಟರ್ ಗಳೇ ಕಾರುಬಾರು ನಡೆಸುತ್ತಿದ್ದಾರೆ. ಕೌನ್ಸಿಲ್ ಮೀಟಿಂಗ್ ಕೇವಲ ನಾಮಕಾವಸ್ಥೆಗೆ ಮಾತ್ರ ನಡೆಯುತ್ತಿದೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಪ್ರತಿ ವರ್ಷ ಕೇಂದ್ರ ಸರ್ಕಾರದಿಂದ 14ನೇ ಹಣಕಾಸು ಆಯೋಗದಿಂದ ಪಾಲಿಕೆಗೆ ಅನುದಾನವನ್ನ ಕೊಡ್ತೇವೆ. ಈ ಬಾರಿಯೂ ಸಹ 68ಕೋಟಿ ರೂ ಹಣವನ್ನ ನೀಡಿದ್ದೇವೆ. ಆದರೆ ಪಾಲಿಕೆಯಲ್ಲಿ ಕೌನ್ಸಿಲ್ ಮೀಟಿಂಗ್ ಎಂದು ನಾಮಕಾವಸ್ಥೆಗೆ ಮಾಡಿತ್ತಾರೆ. ಕೆಲವು ಸೀನಿಯರ್ ಕಾರ್ಪೊರೇಟರ್ ಗಳು ಇದ್ದಾರೆ. ಅವರೆಲ್ಲಾ ತಮಗೆ ಬೇಕಾದ ಹಾಗೆ ಹೆಚ್ಚಿನ ಪಾಲನ್ನ ತೆಗೆದುಕೊಂಡು, ಕೆಲವು ವಾರ್ಡ್ ಗಳಿಗೆ ಅದನ್ನ ಸಮನಾಗಿ ಹಂಚದೆ ದೋರಣೆ ಮಾಡ್ತಿದ್ದಾರೆ. ಈ ಬಗ್ಗೆ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಅವರ ಗಮನಕ್ಕೂ ತಂದಿದ್ದೇನೆ. ಕೂಡಲೇ ಡಿಸಿ ಅವರಿಗೂ ಪತ್ರವನ್ನು ಬರೆಯುತ್ತೇನೆ ಎಂದು ಹೇಳಿದರು.
ಕೇಂದ್ರದ 14ನೇ ಹಣಕಾಸುನಿಧಿಯನ್ನ ಕುಡಿಯುವ ನೀರಿನ ಸಮಸ್ಯೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಮಾಫಿಯಾ ಮಾಡ್ಕೊಂಡು ನನಗಿಷ್ಟು – ತನಗಿಷ್ಟು ಎಂದು ಹಂಚಿಕೊಂಡು ಅದಕ್ಕೆ ಕೌನ್ಸಿಲ್ ಮೀಟಿಂಗ್ ನಲ್ಲಿ ಅನುಮತಿ ಪಡೆದುಕೊಂಡು ಕೆಲಸ ಮಾಡುವ ವ್ಯವಹಾರ ಮಾಡುತ್ತಿದ್ದಾರೆ. ಇಲ್ಲಿ ಶಾಮೀಲಾಗಿ ವ್ಯವಹಾರ ನಡೆಯುತ್ತಿದೆ. ಕುಡಿಯುವ ನೀರಿನ ಪೂರೈಕೆಗೆ ಹೆಚ್ಚು ಒತ್ತು ನೀಡಬೇಕು ಆದರೆ ಕೇವಲ 8ಕೋಟಿ ರೂ ಹಣವನ್ನ ಮಾತ್ರ ನೀಡಿದ್ದಾರೆ. 14ನೇ ಹಣಕಾಸು ಆಯೋಗದ ಅನುದಾನವನ್ನ ಶಾಶ್ವತ ನೀರಿನ ಪರಿಹಾರ ನೀಡಬೇಕು ನಂತರ ಉಳಿದ ಹಣವನ್ನ ಬೇರೆ ಕೆಲಸಕ್ಕೆ ಬಳಸಿಕೊಳ್ಳಲಿ ಎಂದು ಪ್ರತಾಪ್ ಸಿಂಹ ಸಲಹೆ ನೀಡಿದರು.
ನೆನ್ನೆ ನಡೆದ ಕೌನ್ಸಿಲ್ ಸಭೆಯ ಮಂಜೂರಾತಿ ತಡೆ ಹಿಡಿಯುವಂತೆ ಪಾಲಿಕೆ ಆಯುಕ್ತೆರಿಗೆ ಮನವಿ ಮಾಡಿದ್ದು, ಜಿಲ್ಲಾಧಿಕಾರಿಗಳಿಗೂ ಪತ್ರ ಬರೆಯಲಿದ್ದೇನೆ. ಮುಂದಿನ ಕೌನ್ಸಿಲ್ ಸಭೆಗೆ ನಾನೇ ಹಾಜರಾಗ್ತೀನಿ ಎಂದು ಸಂಸದ ಪ್ರತಾಪ್ ಸಿಂಹ ಕಿಡಿಕಾರಿದರು.
Key words: Only the nomination council meeting will take place: MP Pratap Simha outraged against Mysore city corporation.
#MPPratapSimha #outraged #against #Mysorecitycorporation.