ಮೈಸೂರು,ಅಕ್ಟೋಬರ್,6,2020(www.justkannada.in): ಮೈಸೂರು ನಗರಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಅನುದಾನ ವಿಚಾರವಾಗಿ ಆಯುಕ್ತರು ಮತ್ತು ಪಾಲಿಕೆ ಸದಸ್ಯರ ನಡುವೆ ಜಟಾಪಟಿ ನಡೆದಿದ್ದು, ಈ ವೇಳೆ ಆಯುಕ್ತರ ವಿರುದ್ಧ ಮೇಯರ್ ತಸ್ನೀಂ ಅಸಮಾಧಾನ ಹೊರ ಹಾಕಿದ್ದಾರೆ.
ಕಳೆದ ಎರಡು ತಿಂಗಳ ನಂತರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಮೈಸೂರು ನಗರ ಪಾಲಿಕೆ ಕೌನ್ಸಿಲ್ ಸಭೆ ಆರಂಭವಾಯಿತು. ಸಭೆ ಆರಂಭಕ್ಕೂ ಮುನ್ನ ಜನಪ್ರತಿನಿಧಿಗಳಾದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಸಚಿವ ಸುರೇಶ್ ಅಂಗಡಿ, ಸಂಗೀತಗಾರ ಎಸ್.ಪಿ ಬಾಲಸುಬ್ರಹ್ಮಣ್ಯ ಮತ್ತು ಕೊರೋನಾ ಮತ್ತು ಅನಾರೋಗ್ಯದಿಂದ ಅಗಲಿದವರಿಗೆ ಶ್ರದ್ಧಾಂಜಲಿ ಸಲ್ಲಿಕೆ ಮಾಡಲಾಯಿತು.
ಬಳಿಕ ಸಭೆಯಲ್ಲಿ ಅನುದಾನದ ವಿಚಾರದಲ್ಲಿ ಆಯುಕ್ತರು ಹಾಗೂ ಪಾಲಿಕೆ ಸದಸ್ಯರ ನಡುವೆ ಜಗ್ಗಾಟ ಉಂಟಾಗಿ ಜಟಾಪಟಿ ನಡೆಯಿತು. ಈ ವೇಳೆ ಆಯುಕ್ತರ ವಿರುದ್ಧ ಅಸಮಾಧಾನ ಹೊರ ಹಾಕಿದ ಮೇಯರ್ ತಸ್ನೀಂ, ಮೇಯರ್ ಸ್ಥಾನಕ್ಕೆ ತನ್ನದೇ ಆದ ಸ್ಥಾನ ಮಾನ ಇದೆ. ನಾನು ಪ್ರತಿ ವಾರ್ಡ್ 50ಲಕ್ಷ ಅನುದಾನ ವನ್ನು ಅದೇಶ ಮಾಡಿದ್ದೇನೆ. ಆದರೆ ಇನ್ನು ಹಣ ನೀಡಿಲ್ಲ. ಇದು ಮೇಯರ್ ಸ್ಥಾನಕ್ಕೆ ಆಗಿರುವ ಅವಮಾನ. ನನ್ನ ಮಾತಿಗೆ ನಗರ ಪಾಲಿಕೆ ಸದಸ್ಯರಿಗೆ ಬೆಲೆ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೌನ್ಸಿಲ್ ಸಭೆಯಲ್ಲೂ ಉತ್ತರ ಪ್ರದೇಶದ ಅತ್ಯಾಚಾರ ಕಿಚ್ಚು…
ಇನ್ನು ಕೌನ್ಸಿಲ್ ಸಭೆಯಲ್ಲೂ ಉತ್ತರ ಪ್ರದೇಶದ ಯುವತಿ ಮೇಲಿನ ಅತ್ಯಾಚಾರ ಪ್ರಕರಣದ ಕಿಚ್ವು ಪ್ರತಿಧ್ವನಿಸಿತು. ಸಭೆಯಲ್ಲಿ ಬಿಜೆಪಿ ಸರ್ಕಾರದ ವಿರುದ್ದ ಕಾಂಗ್ರೆಸ್ ಜೆ ಡಿ ಎಸ್ ಸದಸ್ಯರು ನೇರ ಆರೋಪ ಮಾಡಿದರು. ಸಭೆಯಲ್ಲಿ ಪಾಲಿಕೆ ಸದಸ್ಯೆ ಅರಿಫ್ ಹುಸೇನ್ ಚರ್ಚೆಗೆ ಅವಕಾಶ ಕೇಳಿದರು. ನಂತರ ಸಭೆಯಲ್ಲಿ ಹತ್ರಾಸ್ ಅತ್ಯಾಚಾರ ಪ್ರಕರಣ ಚರ್ಚೆಗೆ ಬಂದಿತು.
ಈ ವೇಳೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕಾಂಗ್ರೆಸ್ ಸದಸ್ಯರ ನಡುವೆ ನೇರ ವಾಗ್ವಾ ನಡೆದಿದ್ದು ಇದು ಬೇಡದ ವಿಚಾರ. ಇದು ಕೌನ್ಸಿಲ್ ಸಭೆ ಆಗಬೇಕಾದ ಕೆಲಸ ಚರ್ಚೆ ಮಾಡೋಣ ಎಂದು ಹೇಳಿ ವಿಪಕ್ಷಗಳ ಅರೋಪಕ್ಕೆ ಬಿಜೆಪಿ ಸದಸ್ಯರು ಅಕ್ರೋಶ ಹೊರಹಾಕಿದರು.
Key words: mysore- city corporation-mayor-Tasneem, – outraged -r commissioners.