ಮೈಸೂರು,ಅಕ್ಟೋಬರ್,6,2020(www.justkannada.in): ಕೊರೋನಾ ನಿಯಂತ್ರಣ ಮಾಡುವುದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಫಲವಾಗಿದೆ. ದೇಶದಲ್ಲಿಯೇ ಮೈಸೂರು ಎರಡನೇ ಸ್ಥಾನದಲ್ಲಿದೆ. ಈ ಸ್ಥಿತಿಗೆ ಬರಲು ಸರ್ಕಾರವೇ ಕಾರಣಇಷ್ಟೆಲ್ಲಾ ಆಗಿದ್ರು ನೀವು ದಸರಾ ಮಾಡಲು ಹೊರಟ್ಟಿದ್ದಿರಾ ಎಂದು ಸರ್ಕಾರದ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಕಿಡಿಕಾರಿದರು.
ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ಎರಡು ಸಾವಿರ ಜನ ಸೇರಿಸಿಕೊಂಡು ದಸರಾ ಮಾಡ್ತಿವಿ ಅಂತೀರಾ. ಎರಡು ಸಾವಿರ ಅಲ್ಲ ಸ್ವಾಮಿ ಹತ್ತು ಸಾವಿರ ಜನ ಸೇರುತ್ತಾರೆ. ಜಿಲ್ಲಾ ಉಸ್ತುವಾರಿ ಮಂತ್ರಿಗಳೆ ಎಲ್ಲಿದ್ದೀರಾ. ಇದಕ್ಕೆಲ್ಲಾ ಉತ್ತರ ನೀಡಿ. ನಿಮಗೆ ನಾಚಿಕೆ ಆಗಲ್ಲ ಬಿಜೆಪಿಯವರೇ ಎಂದು ಹರಿಹಾಯ್ದರು.
ಈಗ ಮಾಸ್ಕ್ ಹೆಸರಲ್ಲಿ ಹಣ ಮಾಡಲು ಹೊರಟ್ಟಿದ್ದಿರಾ….?
ಕೊರೋನಾ ಹೆಸರಲ್ಲಿ ಯಾವ ಯಾವ ರೀತಿ ಹಣ ಮಾಡುತ್ತೀರಾ. ಮೊದಲು ಹೆಣದ ಮೇಲೆ ಹಣ ಮಾಡಿದ್ರಿ. ಈಗ ಮಾಸ್ಕ್ ಹೆಸರಲ್ಲಿ ಹಣ ಮಾಡಲು ಹೊರಟ್ಟಿದ್ದಿರಾ. ಮುಂದೆ ಮನೆಗಳಿಗೆ ಪೋಲಿಸರನ್ನ ನುಗ್ಗಿಸಿ ಹಣ ಪಡೆಯುವ ಸ್ಥಿತಿಗೂ ಬರುತ್ತಿರಾ..? ಎಂದು ಬಿಜೆಪಿ ನಾಯಕರ ವಿರುದ್ಧ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ವಾಗ್ದಾಳಿ ನಡೆಸಿದರು.
ಮೂರು ದಿನಗಳಿಂದ ಕಮಿಷನ್ ದುಡ್ಡಿಗಾಗಿ ಮೈಸೂರಿನ ಉಳಿದುಕೊಂಡಿದ್ದೀರಾ- ಸಚಿವ ಡಾ.ಕೆ ಸುಧಾಕರ್ ಗೆ ಟಾಂಗ್
ಇದೇ ವೇಳೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ವಿರುದ್ದ ವಾಗ್ದಾಳಿ ನಡೆಸಿದ ಎಂ. ಲಕ್ಷ್ಮಣ್, ಮೂರು ದಿನಗಳಿಂದ ಕಮಿಷನ್ ದುಡ್ಡಿಗಾಗಿ ಮೈಸೂರಿನ ಉಳಿದುಕೊಂಡಿದ್ದೀರಾ. ಮೊದಲು ನೀವು ಶುದ್ಧರಾಗಿ ನಂತರ ಕಾಂಗ್ರೆಸ್ ಕಡೆ ಕೈ ತೋರಿಸಿ. ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡುವ ನೈತಿಕತೆ ನಿನಗೆ ಇಲ್ಲೆ ಡಿ.ಕೆಶಿ ರೀತಿ ದೊಡ್ಡ ನಾಯಕನಾಗುವನೆಂಬ ಭ್ರಮೆ ಇದ್ದರೆ ಅದನ್ನು ಬಿಟ್ಟುಬಿಡು ಎಂದು ಟಾಂಗ್ ನೀಡಿದರು.
ನಿನ್ನ ವಿರುದ್ಧ ಈಗಾಗಲೇ ಕೊರೊನಾ ವಿಚಾರದಲ್ಲಿ ಹಲವು ಆರೋಪಗಳಿವೆ. ಮೊದಲು ಆ ಆರೋಪಗಳು ಸುಳ್ಳು ಎಂದು ಸಾಬೀತು ಮಾಡು ಆಮೇಲೆ ನೀವನು ಬೇರೆಯವರ ಬಗ್ಗೆ ಮಾತನಾಡು ಎಂದು ಎಂ. ಲಕ್ಷ್ಮಣ್ ಕಿಡಿಕಾರಿದರು.
ಹತ್ರಾಸ್ ಅತ್ಯಾಚಾರ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ…
ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಖಂಡಿಸಿದ ಎಂ. ಲಕ್ಷ್ಮಣ್, ಉತ್ತರ ಪ್ರದೇಶದ ಹಾತ್ರಾಸ್ ನಲ್ಲಿ ಲೈಂಗಿಕ ದೌರ್ಜನ್ಯವನ್ನು ಸಿಬಿಐ ಬದಲಾಗಿ ನ್ಯಾಯಾಂಗ ತನಿಖೆ ನಡೆಸಬೇಕು. ಈ ಸಾವಿನ ಪ್ರಕರಣವನ್ನು ಸಿಬಿಐ ಬದಲು ನ್ಯಾಯಾಂಗಕ್ಕೆ ವಹಿಸಬೇಕು. ಕೇಂದ್ರ ಸರ್ಕಾರ ಸಿಬಿಐ ಇಡಿ ಐಟಿ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಸಂತ್ರಸ್ಥೆಯ ಶವ ಮಧ್ಯರಾತ್ರಿಯಲ್ಲಿ ಸುಟ್ಟು ಹಾಕಿರುವುದೇ ಇದಕ್ಕೆ ನಿದರ್ಶನ. ನಮ್ಮ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಸಂತ್ರಸ್ತರ ಕುಟುಂಬದ ಭೇಟಿಗೆ ಹೊರಟಾಗ ಪೊಲೀಸರು ಅವರನ್ನು ನಡೆಸಿಕೊಂಡ ರೀತಿ ಖಂಡನೀಯ. ದೇಶದ ಜನ ಇದನೆಲ್ಲಾ ಗಮನಿಸುತ್ತಿದ್ದಾರೆ ಎಂದು ಲಕ್ಷ್ಮಣ್ ಚಾಟಿ ಬೀಸಿದರು.
Key words: mysore dasara-Government -failed – control- Corona-spokeperson-M Laxman