ಮೈಸೂರು, ಅ.08, 2020 : (www.justkannada.in news) : ಕೋವಿಡ್ ಪರೀಕ್ಷೆ ನಡೆಸುವ ನಿಟ್ಟಿನಲ್ಲಿ ಮೈಸೂರು ಇದೀಗ ನಿಗಧಿತ ಗುರಿಯನ್ನು ಮೀರಿ ಸಾಧನೆ ಮಾಡಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದ್ದಾರೆ.
ಈ ಸಂಬಂಧ ಮೈಸೂರು ವಾರ್ತ ಇಲಾಖೆಯ ವಾಟ್ಸ್ ಅಪ್ ಗ್ರೂಪ್ ನಲ್ಲಿ ಇಂದು ಮಧ್ಯಾಹ್ನ 2.34 ರಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಜಿಲ್ಲಾಧಿಕಾರಿ ಹೇಳಿರುವುದಿಷ್ಟು…
ಸೆಪ್ಟೆಂಬರ್ ತಿಂಗಳಲ್ಲಿ ಕೋವಿಡ್ ಪರೀಕ್ಷೆ ಪೂರ್ತಿ ಅತೃಪ್ತಿಕರವಾಗಿತ್ತು. ನಿಗಧಿತ ಗುರಿಯಲ್ಲಿ ಕೇವಲ ಶೇ 45 ರಷ್ಟು ಮಾತ್ರ ಪರೀಕ್ಷೆ ನಡೆಸುವ ಮೂಲಕ ಗುರಿ ತಲುಪಲು ವಿಫಲವಾಗಿತ್ತು. ಕೋವಿಡ್ ರೋಗಿಗಳನ್ನು ಮೊದಲೇ ಗುರುತಿಸಲು ಮತ್ತು ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲು ಪರೀಕ್ಷೆಯು ನಿರ್ಣಾಯಕವಾಗಿದೆ. ಇದರಿಂದ ಕೋವಿಡ್ ಹರಡುವಿಕೆ ತಡೆಗಟ್ಟಬಹುದು.
ಈಗ ಮೈಸೂರಿನಲ್ಲಿ ಕೋವಿಡ್ ಪರೀಕ್ಷೆ ನಡೆಸುವ ನಿಟ್ಟಿನಲ್ಲಿ ಪ್ರತಿದಿನ ಶೇ. 100 ಕ್ಕಿಂತ ಹೆಚ್ಚು ಗುರಿಯನ್ನು ಮುಟ್ಟುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 7 ರಂದು ಶೇ 124 ರ ಗುರಿ ಸಾಧಿಸಲಾಗಿದೆ.
ವಿಶೇಷ ಪರೀಕ್ಷಾ ತಂಡಗಳು ಮತ್ತು ಅಧಿಕಾರಿಗಳನ್ನು ಮೈಸೂರು ನಗರ ಮತ್ತು ಜಿಲ್ಲೆಯ ಉಳಿದ ಭಾಗಗಳಿಗೆ ಕೋವಿಡ್ ಕಾರ್ಯಕ್ಕಾಗಿ ನಿಯೋಜಿಸಲಾಗಿದೆ.
ಮೈಸೂರು ನಗರವನ್ನು ಕೋವಿಡ್ ನಿರ್ವಹಣೆಗಾಗಿ 4 ವಲಯಗಳಾಗಿ ವಿಂಗಡಿಸಲಾಗಿದೆ ಮತ್ತು ಹಿರಿಯ ಅಧಿಕಾರಿಗಳನ್ನು ತಂಡದೊಂದಿಗೆ ನೇಮಿಸಲಾಗಿದೆ. ಈ ಪರಿಣಾಮ ಇದೀಗ ಟೆಸ್ಟಿಂಗ್ ಸಂಖ್ಯೆ ಹೆಚ್ಚಳಗೊಳಿಸಲು ಸಾಧ್ಯವಾಗಿದೆ. ಅದೇ ರೀತಿ ಮುಂದಿನ ದಿನಗಳಲ್ಲೂ ಕೋವಿಡ್ 19 ನಿಯಂತ್ರಣಕ್ಕಾಗಿ ಎಲ್ಲಾ ಪ್ರಯತ್ನಗಳನ್ನು ಮುಂದುವರಿಸಲಾಗುವುದು ಎಂದು ಜಿಲ್ಲಾಧಿಕಾರಿ ರೋಹಿಣಿ ಆಶ್ವಾಸನೆ ನೀಡಿದ್ದಾರೆ.
ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಗೆ, ಕೈ ನೈರ್ಮಲ್ಯ ಕಾಪಾಡಿ ಮತ್ತು ಜನಸಂದಣಿಯಿಂದ ದೂರವಿರುವಂತೆ ಜಿಲ್ಲಾಧಿಕಾರಿ ಮೈಸೂರಿನ ಸಮಸ್ತ ನಾಗರಿಕರನ್ನು ವಿನಂತಿಸಿದ್ದಾರೆ.
KEY WORDS : Turnaround in Testing in Mysuru- Rohini Sindhuri- IAS- DC Mysuru
ENGLISH SUMMARY :
Turnaround in Testing in Mysuru
Mysuru testing for covid was unsatisfactory throughout September. Against target about 45% was being done. Testing is critical to identify covid patients early and give them medical treatment. Also it prevents spread of covid .Now Mysuru has ramped up and started doing more than 100% target daily.
On 7th Oct 124% was achieved. Special testing teams and Officers posted for Mysuru city and also rest of the district. Mysuru city is divided into 4 zones for COVID management and senior officers posted with team. Mysuru will continue to do all efforts for COVID19 control.
District Administration requests all citizens to (1) Wear Masks (2) Observe Social Distance & avoid crowds (3) Maintain hand hygiene.
Rohini Sindhuri IAS, DC Mysuru