ಮೈಸೂರು,ಅಕ್ಟೋಬರ್,13,2020(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು ಈ ನಡುವೆ ಅರಮನೆ ಆವರಣದಲ್ಲಿ ದಸರಾ ಆನೆಗಳಿಗೆ ತಾಲೀಮು ಜೋರಾಗಿದೆ. ಈ ಮಧ್ಯೆ ಇಂದಿನಿಂದ ಅಶ್ವರೋಹಿದಳಕ್ಕೂ ತಾಲೀಮು ನಡೆಸಲಾಗುತ್ತಿದೆ.
ಈ ಬಾರಿ ದಸರಾ ಜಂಬೂ ಸವಾರಿ ಅರಮನೆ ಆವರಣಕ್ಕೆ ಸೀಮಿತವಾಗಿದ್ದು, ಹೀಗಾಗಿ ದಸರಾ ಗಜಪಡೆಗಳಿಗೆ ಭಾರ ಹೊರುವ ತಾಲೀಮು ನಡೆಸಲಾಗುತ್ತಿದೆ. ಇನ್ನು ಆನೆಗಳ ಜೊತೆ ಹೊಂದಿಕೊಳ್ಳುವ ಸಲುವಾಗಿ ಇಂದಿನಿಂದ ಅಶ್ವರೋಹಿ ದಳಕ್ಕೂ ತಾಲೀಮು ನಡೆಸಲಾಗುತ್ತಿದೆ.
ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಆನೆಗಳು ವಿಚಲಿತವಾಗದಂತೆ ಕುದುರೆಗಳು ಹಿಂದೆಯಿಂದ ಹೆಜ್ಜೆ ಹಾಕಲಿದ್ದು, ಮೆರವಣಿಗೆಯ ಅಶ್ವರೋಹಿದಳ ಪ್ರಮುಖ ಆಕರ್ಷಣೆಯಾಗಿ ಕಾಣಿಸಿಕೊಳ್ಳುತ್ತದೆ. ಹೀಗಾಗಿ ವೈದ್ಯಾಧಿಕಾರಿ ಡಾ ನಾಗರಾಜ್ ಸಮ್ಮುಖದಲ್ಲಿ ಕೆ ಎಸ್ ಆರ್ ಪಿ ಮೌಂಟೆಡ್ ಪೋಲಿಸರಿಂದ ಕುದುರೆಗಳಿಗೆ ತಾಲೀಮು ನಡೆಸಲಾಯಿತು. ಕ್ಯಾಪ್ಟನ್ ಅಭಿಮನ್ಯು ಟೀಂ, ಕುದುರೆಗಳ ಜೊತೆ ನಿರರ್ಗಳವಾಗಿ ಹೆಜ್ಜೆ ಹಾಕಿದವು.
Key words: Mysore Dasara-gajapade-workout-cavalry -palace