MY ’ಸೂರು’ ಆನ್ ಲೈನ್ ಅರ್ಜಿ ಸ್ವೀಕಾರಕ್ಕೆ ಚಾಲನೆ

ಮೈಸೂರು,ಅಕ್ಟೋಬರ್,14,2020(www.justkannada.in) : ಕೃಷ್ಣ ರಾಜ ಕ್ಷೇತ್ರದ ಜನತೆ ತಮ್ಮದೇ ಸ್ವಂತ ಸೂರಿನಲ್ಲಿ ವಾಸ ಮಾಡಬೇಕೆಂಬ ಉದ್ದೇಶಕ್ಕೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಆನ್ಲೈನ್ ಅರ್ಜಿಗಳನ್ನು ಸ್ವೀಕರಿಸುವ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ದೊರಕಿತು.jk-logo-justkannada-logo

ಕೆ.ಆರ್.ಕ್ಷೇತ್ರದಲ್ಲಿ ಹೌಸಿಂಗ್ ಫಾರ್ ಆಲ್ ಎಂಬ ಶೀರ್ಷಿಕೆಯಡಿ ಶಾಸಕ ಎಸ್.ಎ.ರಾಮದಾಸ್  ನೇತೃತ್ವದಲ್ಲಿ ನಡೆದ ಕಾರ್ಯಕ್ರಮಕ್ಕೆ ವಿಶೇಷ ಚೇತನ ಯುವಕ ಚಿರಂಜೀವಿ ಗುರುದೀಪ್ ಚಾಲನೆ ನೀಡಿದರು.

ಬಳಿಕ ಮಾತನಾಡಿ, ಪ್ರಾಣಿಗಳನ್ನು ಹಿಂಸಿಸಬೇಡಿ ಅವುಗಳನ್ನು ಪ್ರೀತಿಯಿಂದ ಕಾಣೋಣ ಕಾರ್ಯಕ್ರಮಕ್ಕೆ ನನ್ನನ್ನ ಕರೆದದ್ದು ನನ್ನ ಸೌಭಾಗ್ಯ ಇದಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದರು.accept-online-application-MY'SURE'ಶಾಸಕ ಎಸ್.ಎ. ರಾಮದಾಸ್ ಮಾತನಾಡಿ, ಪ್ರಧಾನ ಮಂತ್ರಿ ಆವಾಸ್ ಯೋಜನೆ ಹೈದರಾಬಾದ್ ನಲ್ಲಿ ಯಶಸ್ವಿಯಾಗಿ ನಡೆದಿದೆ. ಅಲ್ಲದೇ ಇಲ್ಲು ಕೂಡ ಯಶಸ್ವಿಯಾಗಲಿದೆ.  ಕ್ಷೇತ್ರದ ಎಲ್ಲರಿಗೂ ಮನೆ ನೀಡಲು ಮುಂದಾಗಿದ್ದೇವೆ. ಈ ವಿಷಯವಾಗಿ ಪ್ರಧಾನಿ ನರೇಂದ್ರಮೋದಿ ಅವರಿಗೆ ದೊಡ್ಡ ಧನ್ಯವಾದಗಳು ಎಂದರು.accept-online-application-MY'SURE'ಬೂತ್ ಅಧ್ಯಕ್ಷರೇ ನಿಮ್ಮ ಮನೆಗೆ ಬಂದು ಅಪ್ಲಿಕೇಶನ್ ಹಾಕಿಕೊಡುವ ಕೆಲಸ ಮಾಡುತ್ತಾರೆ. ಯಾರೂ ಗಾಬರಿಯಾಗುವ ಅವಶ್ಯಕತೆ ಇಲ್ಲ . ವಿಶೇಷವಾಗಿ ಕೊರೊನಾದಿಂದ ಮೃತಪಟ್ಟ ಕುಟುಂಬದ ಸದಸ್ಯರನ್ನು ಕರೆಸಿ ಅವರ ಹತ್ತಿರವೂ ಮನೆಗೆ ಅರ್ಜಿ ಸಲ್ಲಿಸಲಾಯಿತು,

ಪಾಲಿಕೆಯ ಆಯುಕ್ತ ಗುರುದತ್ ಹೆಗಡೆ, ಮೇಯರ್  ತಸ್ನಿಂ, ಪಾಲಿಕೆ ಸದಸ್ಯ ಬಿ.ವಿ. ಮಂಜುನಾಥ್ , ಆಶ್ರಯ ಸಮಿತಿ ಸದಸ್ಯ ಹೇಮಂತ್ ಕುಮಾರ್  ಹನ್ಸರಾಜ್ ಜೈನ್, ಗೌರಿ , ವಿದ್ಯಾ ಅರಸ್ , ಶಶಿ ಕುಮಾರ್, ಟೌನ್ ಪ್ಲಾನಿಂಗ್ ನಿರ್ದೇಶಕ ಜಯಸಿಂಹ ಇತರರು ಭಾಗವಹಿಸಿದ್ದರು.

key words : accept-online-application-MY’SURE’