ಬೆಂಗಳೂರು,ಅಕ್ಟೋಬರ್,16,2020(www.justkannada.in) : ಹೈಕೋರ್ಟ್ ಏಕ ಸದಸ್ಯ ಪೀಠವು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ(ಕೆಎಸ್‌ಒಯು) ರಿಜಿಸ್ಟ್ರಾರ್ ಡಾ.ಲಿಂಗರಾಜ ಗಾಂಧಿ ವಿರುದ್ಧ ವಿಚಾರಣೆಗೆ ನೀಡಿದ್ದ ಆದೇಶಕ್ಕೆ ವಿಭಾಗೀಯ ಪೀಠ ತಡೆ ನೀಡಿದೆ.
ಕೆಎಸ್‌ಒಯು ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ.ಎ.ರಂಗಸ್ವಾಮಿ ಅವರು ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಮತ್ತು ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು.
ಈ ವಿಚಾರವಾಗಿ ಎ.ರಂಗಸ್ವಾಮಿ ವಿರುದ್ಧ ವಿಚಾರಣೆ ನಡೆಯುತ್ತಿದೆ ಎಂಬ ಸುಳ್ಳು ಮಾಹಿತಿಯನ್ನು ಲಿಂಗರಾಜ ಗಾಂಧಿ ನೀಡಿದ್ದರು ಎಂಬ ಆರೋಪದಲ್ಲಿ ಏಕ ಸದಸ್ಯ ಪೀಠ ವಿಚಾರಣೆಗೆ ಆದೇಶಿಸಿತ್ತು.ಇದಕ್ಕೆ ನ್ಯಾಯಮೂರ್ತಿ ಬಿ.ವಿ.ನಾಗರತ್ನ ನೇತೃತ್ವದ ವಿಭಾಗೀಯ ಪೀಠವು ತಡೆ ನೀಡಿದ್ದು, ಪ್ರತಿವಾದಿಗೆ ನೋಟಿಸ್ ನೀಡಿದೆ.
ವಿಶ್ವವಿದ್ಯಾಲಯ ತೆಗೆದುಕೊಳ್ಳುವ ನಿರ್ಧಾರಗಳನ್ನು ರವಾನೆ ಮಾಡುವುದಷ್ಟೇ ನನ್ನ ಕೆಲಸ. ನನ್ನ ಮಿತಿಯನ್ನು ಮೀರಿ ಏನನ್ನೂ ಮಾಡಿಲ್ಲ ಎಂದು ಲಿಂಗರಾಜ ಗಾಂಧಿ ಮೇಲ್ಮನವಿ ಸಲ್ಲಿಸಿದ್ದರು ಎಂದು ತಿಳಿದುಬಂದಿದೆ.
key words : Divisional-bench-blocked-proceedings-against-KSOU-registrar-Dr.Lingaraja Gandhi