ಮೈಸೂರು,ಅಕ್ಟೋಬರ್,16,2020(www.justkannada.in): ಸುರಿದ ಭಾರಿ ಮಳೆಯಿಂದಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿ ರೈತರ ಬೆಳೆ, ಆಸ್ತಿ ನಷ್ಟ ಉಂಟಾಗಿದ್ದು ನೆರೆಗೆ ಸಿಲುಕಿ ಜನರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಆದರೆ ಪ್ರವಾಹದಿಂದಾಗಿ ಉಂಟಾಗಿರುವ ಬೆಳೆ ಹಾನಿ ಬಗ್ಗೆ ಕೃಷಿ ಸಚಿವರಿಗೆ ಮಾಹಿತಿಯೇ ಇಲ್ಲವಂತೆ.
ಹೌದು, ಇಂದು ಬೆಳೆ ಹಾನಿ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಬಿಸಿ ಪಾಟೀಲ್ ತಡವರಿಸಿದ ಪ್ರಸಂಗ ನಡೆಯಿತು. ಬೆಳೆ ಹಾನಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಬಿ.ಸಿ ಪಾಟೀಲ್, ಅಕ್ಟೋಬರ್ ಮಳೆಯ ಹಾನಿ ಬಗ್ಗೆ ಮಾಹಿತಿ ಇಲ್ಲ. ಕಳೆದ ಎರಡು ತಿಂಗಳ ಹಿಂದಿನ ಪ್ರವಾಹದ ಹಾನಿ ಮಾಹಿತಿ ಮರೆತು ಹೋಗಿದೆ ಹೇಳಿದರು. ಈ ವೇಳೆ ಸಚಿವ ಬಿ.ಸಿ ಪಾಟೀಲ್ ಕೇವಲ ಬೆಳೆ ಸಮೀಕ್ಷೆ ವಿವರಗಳನಷ್ಟೇ ನೀಡಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಭಾರಿ ಮಳೆಯಿಂದಾಗಿ ಭೀಮಾ ನದಿ ಮತ್ತು ಕೃಷ್ಣ ನದಿ ಉಕ್ಕಿಹರಿಯುತ್ತಿದ್ದು ಕಲ್ಬುರ್ಗಿ, ಯಾದಗಿರಿ, ವಿಜಯಪುರ ಸೇರಿ ಹಲವು ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಇಂದು ಕಂದಾಯ ಸಚಿವ ಆರ್.ಅಶೋಕ್ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ಪರಿಶೀಲನೆ ನಡೆಸುತ್ತಿದ್ದಾರೆ.
Key words: Flood –north Karnataka -Agriculture Minister –BC Patil-no information- crop damage.