ಕಲ್ಬರ್ಗಿ,ಅಕ್ಟೋಬರ್,17,2020(www.justkannada.in): ಭಾರಿ ಮಳೆಯಿಂದಾಗಿ ಭೀಮಾ ನದಿ, ಕೃಷ್ಣಾ ನದಿಗಳು ತುಂಬಿಹರಿಯುತ್ತಿದ್ದು, ಉತ್ತರ ಕರ್ನಾಟಕ ಅಕ್ಷರಶಃ ಪ್ರವಾಹ ಸ್ಥಿತಿಯಲ್ಲಿ ಮುಳುಗಿದೆ. ನದಿ ನೀರು ಗ್ರಾಮಕ್ಕೆ ನುಗ್ಗಿ ಗ್ರಾಮಗಳು ನಡುಗಡ್ಡೆಯಂತಾಗಿದ್ದು ಆ ಭಾಗದ ಜನರು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.
ಈ ನಡುವೆ ಭೀಮಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬಂದಿದ್ದು ಕಲ್ಬರ್ಗಿ ಜಿಲ್ಲೆ ಅಫಜಲಪುರ ತಾಲ್ಲೂಕಿನ ಸೊನ್ನ ಗ್ರಾಮ ಪ್ರವಾಹಕ್ಕೆ ಸಿಲುಕಿ ನಡುಗಡ್ಡೆಯಂತಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಸಂತ್ರಸ್ತರ ಸಮಸ್ಯೆ ಆಲಿಸಲು ಬಂದ ಸ್ಥಳೀಯ ಕಾಂಗ್ರೆಸ್ ಶಾಸಕ ಬಿ.ವೈ ಪಾಟೀಲ್ ಗೆ ಗ್ರಾಮಸ್ಥರು ತರಾಟೆ ತೆಗೆದುಕೊಂಡಿದ್ದಾರೆ.
ಸೊನ್ನ ಗ್ರಾಮ ನೀರಿನಿಂದ ಆವೃತ್ತವಾಗಿದ್ದು ನಾವು ಸಂಕಷ್ಟಕ್ಕೆ ಸಿಲುಕಿದ್ದೇವೆ. ಈವರೆಗೆ ಅಧಿಕಾರಿಗಳು ಜನಪ್ರತಿನಿಧಿಗಳು ಯಾರೂ ಬಂದಿಲ್ಲ. ಎಲ್ಲಾ ಮುಗಿದ ಬಳಿಕ ಈಗ ಬಂದಿದ್ದೀರಾ…? ಎಂದು ಶಾಸಕ ಬಿ.ವೈ ಪಾಟೀಲ್ ಗೆ ಗ್ರಾಮಸ್ಥರು ತರಾಟೆ ತೆಗೆದುಕೊಂಡಿದ್ದಾರೆ.
ಈ ವೇಳೆ ಶಾಸಕ ಬಿವೈ ಪಾಟೀಲ್ ಗ್ರಾಮಸ್ಥರ ಬಳಿ ಅಸಹಾಯಕತೆ ತೋರಿಕೊಂಡಿದ್ದಾರೆ. ನಾನು ಕಾಂಗ್ರೆಸ್ ಶಾಸಕ. ನನ್ನ ಮಾತನ್ನ ಯಾರೂ ಕೇಳುತ್ತಿಲ್ಲ ಎಂದು ಅಸಹಾಯಕತೆ ಹೇಳಿಕೊಂಡಿದ್ದಾರೆ.
Key words: kalburgi- villagers -scold –flood-class-MLA