ರಾಜ್ಯದಲ್ಲಿ ಹಣಕಾಸಿನ ಪರಿಸ್ಥಿತಿ ಶೋಚನೀಯ-ಶ್ವೇತಪತ್ರ ಹೊರಡಿಸಲು ಮಾಜಿ ಸಂಸದ ಧ್ರುವನಾರಾಯಣ್ ಆಗ್ರಹ…

ಮೈಸೂರು,ಅಕ್ಟೋಬರ್,17,2020(www.justkannada.in):  ರಾಜ್ಯದಲ್ಲಿ ಹಣಕಾಸಿನ ಪರಿಸ್ಥಿತಿ ಶೋಚನೀಯವಾಗಿದೆ. ರಾಜ್ಯದ ಜನತೆಗೆ ಹಾಗೂ ರೈತರಿಗೆ ಸರ್ಕಾರ ತಪ್ಪು ಮಾಹಿತಿ ನೀಡುತ್ತಿದೆ. ರಾಜ್ಯದ ಹಣಕಾಸಿನ ಬಗ್ಗೆ ಸಿಎಂ ಶ್ವೇತಪತ್ರ ಹೊರಡಿಸಬೇಕು ಎಂದು ಮಾಜಿ ಸಂಸದ ಆರ್.ಧೃವನಾರಾಯಣ್ ಆಗ್ರಹಿಸಿದ್ದಾರೆ.jk-logo-justkannada-logo

ಮೈಸೂರಿನಲ್ಲಿ ಇಂದು ಮಾತನಾಡಿದ  ಮಾಜಿ ಸಂಸದ ಧ್ರುವನಾರಾಯಣ್, ಪ್ರವಾಹ ಹಾನಿಗೆ ಸೂಕ್ತ ಪರಿಹಾರ ನೀಡುತ್ತೇವೆಂದು ಸಿಎಂ ಹೇಳಿದ್ದಾರೆ. ಆದರೆ ಸರ್ಕಾರದ ಖಜಾನೆ ಖಾಲಿಯಾಗಿದೆ. 2019ರಲ್ಲಿ ಪ್ರವಾಹದಿಂದ  35160 ಕೋಟಿ ರೂ. ನಷ್ಟವಾಗಿದೆ. ಆದರೆ ಕೇಂದ್ರ ಸರ್ಕಾರದಿಂದ ಕೇವಲ 3891 ಕೋಟಿ ರೂ ಪರಿಹಾರ ಬಂದಿದೆ. 2020-21 ರಲ್ಲಿ ಉಂಟಾದ ಪ್ರವಾಹದಿಂದ 9440ಕೋಟಿ ನಷ್ಟವಾಗಿದೆ. ಆಗಲೂ ಕೇಂದ್ರ ಸರ್ಕಾರ ಕೇವಲ 755ಕೋಟಿ ಪರಿಹಾರ ನೀಡಿ ಕೈತೊಳೆದು ಕೊಂಡಿದೆ. ಇದರಿಂದ ರಾಜ್ಯಕ್ಕೆ ಹೆಚ್ಚಿನ ಹೊರೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದ ಬೊಕ್ಕಸ ಖಾಲಿಯಾಗಿ ಹಣಕಾಸಿನ ಪರಿಸ್ಥಿತಿ ಹದಗೆಟ್ಟಿದೆ. ಆದರೆ ಸಿಎಂ ಹಣಕಾಸಿನ ಕೊರತೆ ಇಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಹಣಕಾಸಿನ ಪರಿಸ್ಥಿತಿ ಶೋಚನೀಯವಾಗಿದ್ದು ಹಣಕಾಸಿನ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಧೃವನಾರಾಯಣ್ ಆಗ್ರಹಿಸಿದರು.

Key words: financial situation -state – miserable-Former MP -Dhruvanarayan -mysore