ಕಲಬುರುಗಿ,ಅಕ್ಟೋಬರ್,18,2020(www.justkannada.in): ಭಾರಿ ಮಳೆಯಾದ ಹಿನ್ನೆಲೆ ಉತ್ತರ ಕರ್ನಾಟಕದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು ಭೀಮಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದೆ.
ಭೀಮಾ ನದಿ ನೀರು ನುಗ್ಗಿ ಕಲಬುರುಗಿ ಜಿಲ್ಲೆ ಅಫಜಲಪುರ ತಾಲ್ಲೂಕಿನ ಗಾಣಗಾಪುರದಲ್ಲಿ ಹಲವು ಮನೆಗಳು ಮತ್ತು ದೇಗುಲಗಳು ಜಲಾವೃತವಾಗಿದೆ. ಕಲ್ಲೇಶ್ವರ ದೇಗುಲ ಸೇರಿ ಹಲವು ದೇಗುಲ ಮತ್ತು ಗ್ರಾಮದ ಮನೆಗಳಿಗೆ ನೀರು ನುಗ್ಗಿದ್ದು ಗ್ರಾಮದ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹಾಗಯೇ ಅಫಜಲಪುರ ತಾಲ್ಲೂಕಿನ ಕೆರಕನಹಳ್ಳಿ ಗ್ರಾಮವೂ ಸಹ ಭೀಮಾ ನದಿ ನೀರಿನಿಂದ ಜಲಾವೃತವಾಗಿದ್ದು ಜನ ಆತಂಕಕ್ಕೆ ಒಳಗಾಗಿದ್ದಾರೆ. ಭೀಮಾನದಿ ಕೃಷ್ಣಾ ನದಿ ತುಂಬಿ ಹರಿಯುತ್ತಿದ್ದು ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ.
Key words: Bhima River- flows –danger-kalburgi-Village -flood