ಬೆಂಗಳೂರು,ಅಕ್ಟೋಬರ್,20,2020(www.justkannada.in) : ದುರ್ಗಾಪೂಜೆ ಹಿನ್ನೆಲೆ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ತಯಾರಾಗಿರುವ ವೈದ್ಯೆರೂಪದ ದುರ್ಗೆಯ ಪ್ರತಿಮೆಗೆ ಸಾಮಾಜಿಕ ಜಾಲತಾಣದಲ್ಲಿ ಜನ ಫಿದಾ ಆಗಿದ್ದಾರೆ.
ಕರ್ನಾಟಕದಲ್ಲಿ ದಸರಾ ಈಗಾಗಲೇ ಆರಂಭವಾಗಿದ್ದು, ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆ ಇನ್ನೆನ್ನು ಆರಂಭವಾಗಲಿದೆ. ದುರ್ಗಾಪೂಜೆಗೆ ಸಕಲ ಸಿದ್ಧತೆಗಳು ನಡೆಯುತ್ತಿದೆ. ದುರ್ಗಾ ಮೂರ್ತಿಗಳು ಸಿದ್ಧವಾಗುತ್ತಿದ್ದು, ವೈದ್ಯೆರೂಪದ ದುರ್ಗೆಯ ಪ್ರತಿಮೆ ಎಲ್ಲರೂ ಸೆಳೆಯುತ್ತಿದೆ.
ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯೆ
ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ತಯಾರಾಗಿರುವ ಈ ಮೂರ್ತಿ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಲವರು ಈ ಚಿತ್ರವನ್ನು ಹಂಚಿಕೊಂಡಿದ್ದಾರೆ. ದುರ್ಗೆಯನ್ನು ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯೆಯಾಗಿ ಚಿತ್ರಿಸಲಾಗಿದೆ. ಮೂರ್ತಿಯನ್ನು ನಿರ್ಮಿಸಿದ ಕಲಾವಿದನ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಮೂರ್ತಿಯ ವಿಶೇಷತೆ ಏನು?
ಮೂರ್ತಿಯಲ್ಲಿ ವೈದ್ಯರ ಕೋಟ್ ಧರಿಸಿ ಮಹಿಷಾಸುರ ಎಂಬ ರಾಕ್ಷಸನೊಂದಿಗೆ ಹೋರಾಡುವ ವೈದ್ಯನಾಗಿ ಚಿತ್ರಿಸಲಾಗಿದೆ. ಕೈಯಲ್ಲಿ ಸಿರೆಂಜ್ ನೀಡಲಾಗಿದ್ದು, ಅದು ಕೊರೊನಾಸುರನ್ನು ಕೊಲಲ್ಲು ಬಳಸುತ್ತಿದೆ. ಇತ್ತ ಕೊರೊನಾ ವಾರಿಯರ್ಸ್ ಗಳಿಗೆ ಗೌರವ ಸಲ್ಲಿಸಿದಂತಿದೆ.
ಗಣೇಶ, ಸುಬ್ರಹ್ಮಣ್ಯ ಅವರನ್ನು ಪೊಲೀಸ್ ಅಧಿಕಾರಿ ಮತ್ತು ನೈರ್ಮಲ್ಯ ಕೆಲಸಗಾರರೆಂದು, ಲಕ್ಷ್ಮೀ ಮತ್ತು ಸರಸ್ವತಿಯನ್ನು ನರ್ಸ್ ಮತ್ತು ಆರೋಗ್ಯ ಕಾರ್ಯಕರ್ತೆಯಾಗಿ ಚಿತ್ರಿಸಲಾಗಿದೆ. ಟ್ವೀಟರ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರವು ವೈರಲ್ ಆಗಿದೆ.
key words : Medicinal-Sculpture-Statue-social media-People-Fida