ಮೈಸೂರು,ಅಕ್ಟೋಬರ್,20,2020(www.justkannada.in): ಕೊರೋನಾ ಸೋಂಕಿಗೆ ತುತ್ತಾಗಿದ್ಧ ರೈತ ನಾಯಕ ಮಾರುತಿ ಮಾನ್ಪಡೆ(65) ಇಂದು ಸಾವನ್ನಪ್ಪಿದ್ದಾರೆ.
ಇತ್ತೀಚೆಗೆ ಕೃಷಿ ಮಸೂದೆ ವಿರೋಧಿಸಿ ನಡೆದಿದ್ದ ಪ್ರತಿಭಟನೆ ಹಾಗೂ ಹಲವು ಪ್ರತಿಭಟನೆಗಳಲ್ಲಿ ಮುಂಚೂಣಿಯಲ್ಲಿದ್ದ ಮಾರುತಿ ಮಾನ್ಪಡೆ ಅಕ್ಟೋಬರ್ 3 ರಂದು ಕೊರೋನಾ ಸೋಂಕಿಗೆ ತುತ್ತಾಗಿದ್ದರು. ಇವರನ್ನ ಸೊಲ್ಲಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆದರೆ ಚಿಕಿತ್ಸೆ ಫಲಿಸದೆ ರೈತನಾಯಕ ಮಾರುತಿ ಮಾನ್ಪಡೆ ನಿಧನರಾಗಿದ್ದಾರೆ.
ಇನ್ನು ಮಾರುತಿ ಮಾನ್ಪಡೆ ಅವರ ನಿಧನಕ್ಕೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಸಂತಾಪ ಸೂಚಿಸಿದ್ದಾರೆ. ಶ್ರೀಯುತ ಮಾರುತಿ ಮಾನ್ಪಡೆಯವರು ಪ್ರಾಂತ ರೈತ ಸಂಘದ ಅಧ್ಯಕ್ಷರು ಸಾವಿನಿಂದ ನನಗೆ ತುಂಬಾ ದುಃಖವಾಗಿದೆ, ನಾವು ಬೆಂಗಳೂರಿನಲ್ಲಿ ಕಳೆದ ತಿಂಗಳು ಐಕ್ಯ ಹೋರಾಟ ಮಾಡಿದ ದಿನಗಳನ್ನು ನೆನೆದು, ಮನುಷ್ಯನಿಗೆ ಯಾವುದು ಶಾಶ್ವತವಲ್ಲ ಅನ್ನುವಂತಾಗಿದೆ. ರೈತ ದಲಿತ ಕಾರ್ಮಿಕ ಐಕ್ಯ ಹೋರಾಟಕೆ ಸ್ಪೂರ್ತಿ ನೀಡಿದ ಮಾರುತಿ ಮಾನ್ಪಡೆ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬವರ್ಗಕ್ಕೆ ಸಾವಿನ ದುಃಖ ಭರಿಸುವ ಶಕ್ತಿ ಬರಲಿ. ಹೈದರಾಬಾದ್ ಕರ್ನಾಟಕದ ಭಾಗದಲ್ಲಿ ಒಳ್ಳೆಯ ರೈತಪರ ಹೋರಾಟಗಾರರನ್ನು ಕಳೆದುಕೊಂಡಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
Key words: Farmer leader -Maruti Manpade -passes away-Kuruburu Shantakumar -condolences.