ಮೈಸೂರು, ಮೇ 03, 2019 : (www.justkannada.in news ) ಪ್ರಸ್ತುತ, 2019ರ ಜುಲೈ ಆವೃತ್ತಿಗೆ ಸಂಬಂಧಿಸಿದಂತೆ ಕರ್ನಾಟಕರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮ, ಪಿ.ಜಿ.ಡಿಪ್ಲೋಮ ಹಾಗೂ ಸರ್ಟಿಫಿಕೇಟ್ ಕೋರ್ಸ್ ನ 55 ವಿವಿಧ ಕೋರ್ಸ್ ಗಳಿಗೆ ಆನ್ ಲೈನ್ ಪ್ರವೇಶ ಆರಂಭಿಸಿದೆ.
ವಿಶ್ವವಿದ್ಯಾನಿಲಯವು ವಿದ್ಯಾಥಿಗಳಿಗೆ ಯಾವುದೇ ಭೋಧನಾಶುಲ್ಕ ಹೆಚ್ಚಿಸದೆ ಈ ಹಿಂದೆ 2014-15ನೇ ಸಾಲಿನಲ್ಲಿ ಚಾಲ್ತಿಯಲ್ಲಿದ್ದ ಶುಲ್ಕಗಳನ್ನೇ ಪ್ರಸ್ತುತ ಅವಧಿಗೂ ಮುಂದುವರೆಸಿದೆ. ಈ ಸಂಬಂಧ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಕ್ತ ವಿವಿ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಅವರು ಹೇಳಿದಿಷ್ಟು….
ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಮಾನ್ಯತೆಗೆ ಸಂಬಂಧಿಸಿದಂತೆ ಯುಜಿಸಿ (ವಿಶ್ವವಿದ್ಯಾನಿಲಯಧನ ಸಹಾಯ ಆಯೋಗ) ಗ್ರೀನ್ ಸಿಗ್ನಲ್ ನೀಡಿ 2017ರ ನಿಯಮಾವಳಿಗಳ ಪ್ರಕಾರ 2018-19ನೇ ಸಾಲಿನಿಂದ 2022-23ನೇ ಸಾಲಿನವರೆಗೆ 05 ವರ್ಷಗಳ ಅವಧಿಗೆ ಮಾನ್ಯತೆ ದೊರಕಿದ ಬಳಿಕ ಮುಕ್ತ ವಿವಿಯಲ್ಲಿ ಪ್ರವೇಶಾತಿ ಚುರುಕಿನಿಂದ ಸಾಗಿದೆ.
ಪ್ರಸ್ತುತ 31 ಅಂತರ್ ಗೃಹ ತಾಂತ್ರಿಕೇತರ ಕಾರ್ಯಕ್ರಮಗಳನ್ನು ಪ್ರಾರಂಭಿಸಲು ಅನುಮೋದನೆ ದೊರಕಿರುತ್ತದೆ. ಅದರಂತೆ, 2018ರ ಜುಲೈ ಆವೃತ್ತಿಯಲ್ಲಿ ಪ್ರವೇಶಾತಿಗಳನ್ನು ಪ್ರಾರಂಭಿಸಲಾಗಿದ್ದು ವಿವಿಧ ಕಾರ್ಯಕ್ರಮಗಳಿಗೆ ಈಗಾಗಲೇ ಸುಮಾರು 12,000 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿರುತ್ತಾರೆ. ನಂತರ, 2019ರ ಜನವರಿ ಆವೃತ್ತಿಯಲ್ಲಿ ಬಿ.ಇಡಿ ಮತ್ತು ಎಂ.ಬಿ.ಎ ಗೆ ವಿದ್ಯಾರ್ಥಿಗಳನ್ನು ಪ್ರವೇಶ ಮಾಡಿಕೊಳ್ಳಲಾಗಿದೆ. ಈ ತತ್ಸಂಬಂಧದ ಅಂಕಿ-ಅಂಶಗಳನ್ನು ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗಕ್ಕೆ ಸಲ್ಲಿಸಲಾಗಿದೆ. ಇದೀಗ 2019 ರ ಜುಲೈ ಆವೃತ್ತಿಗೆ ಸಂಬಂಧಿಸಿದಂತೆ ಪ್ರವೇಶಾತಿ ಆರಂಭಿಸಲಾಗಿದೆ.
ಯಾವ ಕೋರ್ಸ್ ಗೆ ಪ್ರವೇಶಾತಿ :
ಸ್ನಾತಕ ಪದವಿ ಕಾರ್ಯಕ್ರಮಗಳು : ಬಿ.ಎ, ಬಿ.ಕಾಂ ಮತ್ತು ಬಿ.ಲಿಬ್.ಐ.ಎಸ್ಸಿ
ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳು: (1) ಎಂ.ಎ- ಕನ್ನಡ, ಇಂಗ್ಲೀಷ್, ಹಿಂದಿ, ಉರ್ದು, ಸಂಸ್ಕೃತ,ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಾರ್ವಜನಿಕ ಆಡಳಿತ, ಸಮಾಜಶಾಸ್ತ್ರ, ಪ್ರಾಚೀನಇತಿಹಾಸ ಮತ್ತು ಪುರಾತತ್ವ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ
(2) ಎಂ.ಕಾಂ, ಎಂ.ಬಿ.ಎ
(3) ಎಂ.ಎಸ್ಸಿ-ಜೀವರಸಾಯನಶಾಸ್ತ್ರ, ಜೈವಿಕತಂತ್ರಜ್ಞಾನ, ರಸಾಯನಶಾಸ್ತ್ರ, ಕ್ಲಿನಿಕಲ್ ನ್ಯೂಟ್ರಿಷಿಯನ್ ಅಂಡ್ಡ ಯಟಿಟಿಕ್ಸ್, ಪರಿಸರ ವಿಜ್ಞಾನ, ಕಂಪ್ಯೂಟರ್ ವಿಜ್ಞಾನ, ಭೂಗೋಳಶಾಸ್ತ್ರ, ಮಾಹಿತಿ ವಿಜ್ಞಾನ, ಗಣಿತಶಾಸ್ತ್ರ, ಸೂಕ್ಷ್ಮಜೀವಶಾಸ್ತ್ರ, ಭೌತಶಾಸ್ತ್ರ, ಮನೋವಿಜ್ಞಾನ,
(4) ಎಂ.ಲಿಬ್.ಐ.ಎಸ್ಸಿ
ಪಿ.ಜಿ ಡಿಪ್ಲೋಮ ಕೋರ್ಸ್ ಗಳು:
ಇಂಗ್ಲೀಷ್, ಕಮ್ಯುನಿಕೇಟಿವ್ ಇಂಗ್ಲೀಷ್, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಕುವೆಂಪು ಸಾಹಿತ್ಯ, ವ್ಯವಹಾರಿಕ ಕಾನೂನು, ಮಾನವ ಸಂಪನ್ಮೂಲ ನಿರ್ವಹಣೆ, ಫೈನಾನ್ಷಿಯಲ್ ಮ್ಯಾನೇಜ್ಮೆಂಟ್, ವ್ಯವಹಾರಿಕ ನಿರ್ವಹಣೆ, ಮಾರುಕಟ್ಟೆ ನಿರ್ವಹಣಾ ಶಾಸ್ತ್ರ, ಅಂಬೇಡ್ಕರ್ಅಧ್ಯಯನ, ನ್ಯೂಟ್ರಿಷಿಯನ್ಅಂಡ್ಡಯಟಿಟಿಕ್ಸ್, ಇನ್ಫಾರ್ಮೇಷನ್ ಸೈನ್ಸ್, ಕಂಪ್ಯೂಟರ್ಅಪ್ಲ್ಲಿಕೇಷನ್.
ಡಿಪ್ಲೋಮ ಕೋರ್ಸ್ ಗಳು:
ಕನ್ನಡ, ಪತ್ರಿಕೋದ್ಯಮ, ನ್ಯೂಟ್ರಿಷನ್ಅಂಡ್ ಹೆಲ್ತ್ಎಜುಕೇಷನ್, ಇನ್ಫಾರ್ಮೇಷನ್ ಸೈನ್ಸ್, ಕಂಪ್ಯೂಟರ್ಅಪ್ಲ್ಲಿಕೇಷನ್.
ಸರ್ಟಿಫಿಕೇಟ್ ಕೋರ್ಸ್ ಗಳು:
ಕನ್ನಡ, ಪಂಚಾಯತ್ ರಾಜ್ಯ ವ್ಯವಸ್ಥೆ, ಆಹಾರ ಮತ್ತು ಪೌಷ್ಟಿಕತೆ.
ಮೇಲ್ಕಂಡ ಕಾರ್ಯಕ್ರಮಗಳಿಗೆ ಪ್ರವೇಶ ಪಡೆಯಲು ಆ.31 ಕಡೆಯ ದಿನ. ವಿದ್ಯಾರ್ಥಿಗಳು ಪ್ರವೇಶಾತಿಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಕೆಎಸ್ಒಯು ಅಧಿಕೃತ ವೆಬ್ ಸೈಟ್ (www.ksoumysore.karnataka.gov.in) ನಿಂದ (ಪ್ರವೇಶಾತಿ ಶುಲ್ಕ, ನಿಗದಿಪಡಿಸಿರುವ ವಿದ್ಯಾರ್ಹತೆ, ಕಾರ್ಯಕ್ರಮಗಳು, ವಿವರಣಾ ಪುಸ್ತಕ ಮುಂತಾದ ವಿವರಗಳನ್ನು) ಪಡೆಯಬಹುದಾಗಿದೆ.
ಪ್ರೂಸೆಸಿಂಗ್ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿ ಮಾಡಬೇಕಾಗಿರುತ್ತದೆ., ಅರ್ಜಿಯನ್ನು ಆನ್ಲೈನ್ ಮೂಲಕ ಭರ್ತಿ ಮಾಡಿದ ನಂತರ ಅದರ ಒಂದು ಪ್ರತಿಯನ್ನು ಪ್ರಿಂಟ್ ಮಾಡಿಕೊಂಡು ವಿದ್ಯಾರ್ಥಿಗಳು ಅವರ ಆಯ್ಕೆಯ ಪ್ರಾದೇಶಿಕ ಕೇಂದ್ರದಲ್ಲಿ/ಕರಾಮುವಿಯ ಸಂಬಂಧಿಸಿದ ವಿಭಾಗಗಳ ಮುಖ್ಯಸ್ಥರುಗಳಿಗೆ ಎರಡು ಸೆಟ್ ಪ್ರಿಂಟ್ ಅರ್ಜಿ ಜೊತೆಗೆ ಎರಡು ಸ್ಟಾಂಪ್ ಹಾಗೂ ಎರಡು ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳು, ಮೂಲ ಅಂಕಪಟ್ಟಿಗಳು ಮತ್ತು ಅವುಗಳ ಎರಡು ಸೆಟ್ ಜೆರಾಕ್ಸ್ ಪ್ರತಿಗಳನ್ನು ಸಲ್ಲಿಸಬೇಕು.
ಪರಿಶೀಲನೆಯ ನಂತರ ಪ್ರಾದೇಶಿಕ ಕೇಂದ್ರದ ಅಧಿಕಾರಿಗಳು/ಸಂಬಂಧಪಟ್ಟ ವಿಭಾಗದ ಮುಖ್ಯಸ್ಥರು/ಕರಾಮುವಿ ಪ್ರವೇಶಾತಿ ವಿಭಾಗದನಿರ್ದೇಶಕರು, ನೀಡುವ ಬ್ಯಾಂಕ್ ಚಲನ್ ಮೂಲಕ ಶುಲ್ಕವನ್ನು ಪಾವತಿಸಿ ಅದರ ಒಂದು ಪ್ರತಿಯನ್ನು ಅದೇ ಪ್ರಾದೇಶಿಕ ಕಛೇರಿಯಲ್ಲಿ/ಕರಾಮುವಿ ಪ್ರವೇಶಾತಿ ವಿಭಾಗದಲ್ಲಿ ಸಲ್ಲಿಸಿ ಪ್ರವೇಶಾತಿ ಪಡೆಯಬಹುದಾಗಿರುತ್ತದೆ.
ಪ್ರವೇಶಾತಿ ಪಡೆದ ದಿನವೇ ಗುರುತಿನ ಪತ್ರವನ್ನು ಮತ್ತು ಸಿದ್ಧಪಾಠಗಳನ್ನು ಕರಾಮುವಿಯ ಸಿದ್ಧಪಾಠ ವಿಭಾಗದ ಅಧಿಕಾರಿಗಳು/ಪ್ರಾದೇಶಿಕ ಕಛೇರಿಯ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ವಿತರಿಸುವರು.ಪ್ರವೇಶಾತಿ ಪಡೆಯುವ ಉದ್ದೇಶದಿಂದ ವಿದ್ಯಾರ್ಥಿಗಳು ಮೈಸೂರಿಗೆ ಬರುವ ಅಗತ್ಯವಿರುವುದಿಲ್ಲ.
ಪ್ರಾದೇಶಿಕ ಕೇಂದ್ರಗಳ ಸ್ಥಳಗಳು :
(1)ಮೈಸೂರು,(2) ಬೆಂಗಳೂರು(2 ಪ್ರಾದೇಶಿಕ ಕಛೇರಿಗಳು)(3) ಬಳ್ಳಾರಿ,(4)ಚಾಮರಾಜನಗರ(5) ಚಿಕ್ಕಮಗಳೂರು (6) ದಾವಣಗೆರೆ(7) ಧಾರವಾಡ (8) ಹಾಸನ, (9)ಕಲ್ಬುಗರ್ಿ (10) ಕಾರವಾರ (11)ಕೋಲಾರ (12) ಮಂಡ್ಯ (13)ಮಂಗಳೂರು (14) ರಾಮನಗರ (15) ಶಿವಮೊಗ್ಗ (16) ತುಮಕೂರು (17)ಉಡುಪಿ.
ವಿದ್ಯಾರ್ಥಿಗಳಿಗೆ ರಿಯಾಯಿತಿಗಳು:
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮತ್ತು ಬಡತನರೇಖೆಗಿಂತ ಕೆಳಗಡೆ ಇರುವ ಮಹಿಳಾ ವಿದ್ಯಾರ್ಥಿಗಳಿಗೆ ಸರ್ಕಾರದ/ ಕರಾಮುವಿ ನಿಯಮಗಳನ್ವಯ ಶುಲ್ಕ ವಿನಾಯಿತಿಯನ್ನು ನೀಡಲಾಗುವುದು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟೀಕರಣದ ಅಗತ್ಯವಿದ್ದ ಪಕ್ಷದಲ್ಲಿ ವಿದ್ಯಾರ್ಥಿಗಳು ಅವರ ಆಯಾಯ ಪ್ರಾದೇಶಿಕ ಕೇಂದ್ರದಲ್ಲಿ/ ಕರಾಮುವಿ ಪ್ರವೇಶಾತಿ ವಿಭಾಗದ ನಿರ್ದೇಶಕರಿಂದ ಪಡೆಯಬಹುದಾಗಿರುತ್ತದೆ.
ಸಾಂಪ್ರದಾಯಿಕ ವಿಶ್ವವಿದ್ಯಾನಿಲಯಗಳಿಂದ ಪಡೆಯುವ ಪದವಿಗಳಿಗೂ ಹಾಗೂ ಮುಕ್ತ ವಿಶ್ವವಿದ್ಯಾನಿಲಯದಿಂದ ಪಡೆಯುವ ಪದವಿಗಳಿಗೂ ಯಾವುದೇ ವ್ಯತ್ಯಾಸವಿರುವುದಿಲ್ಲ ಎಂದು ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಕ್ತ ವಿವಿ ರಿಜಿಸ್ಟ್ರಾರ್ ಪ್ರೊ. ರಮೇಶ್, ಡೀನ್ ಪ್ರೊ.ಜಗದೀಶ್ ಹಾಗೂ ಇತರರು ಹಾಜರಿದ್ದರು.
–
prof.d. shivalingaiah stated that, karnataka state open university (KSOU) started admissions for the 2019 cycle without enhancing the tution fee.