ಮೈಸೂರು,ಅಕ್ಟೋಬರ್,27,2020(www.justkannada.in): ನಿನ್ನೆ ಸಿದ್ಧರಾಮಯ್ಯ ನೀಡಿದ್ದ ಹೀರೋ, ವಿಲನ್ ಹೇಳಿಕೆ ಕುರಿತು ಪ್ರತಿಕ್ರಿಯಿಸುವ ವೇಳೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಮಾತಿನ ಭರದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪರನ್ನ ವಿಲನ್ ಎಂದು ತಕ್ಷಣ ಆ ಹೇಳಿಕೆಯನ್ನ ಸರಿಪಡಿಸಿಕೊಂಡ ಪ್ರಸಂಗ ನಡೆಯಿತು.
ಹೌದು ಇಂದು ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡುತ್ತಿದ್ದ ಸಚಿವ ಎಸ್.ಟಿ ಸೋಮಶೇಖರ್ , ಹಿರೋ ವಿಲನ್ ಹೇಳಿಕೆಗೆ ಪ್ರತಿಕ್ರಿಯಿಸುವಾಗ ಬಾಯ್ತಪ್ಪಿನಿಂದ ಬಿಎಸ್‌ವೈರನ್ನ ವಿಲನ್ ಎಂದು ಕರೆದರು. ಇವರ್ಯ್ಯಾರು ಅಲ್ಲ ಯಡ್ಯೂರಪ್ಪರೇ ವಿಲನ್ ಎಂದು ಹೇಳಿದ ಸಚಿವ ಎಸ್.ಟಿ ಸೋಮಶೇಖರ್ ಗೆ ಸಹಾಯಕ್ಕೆ ಬಂದ ಶಾಸಕ ಎಸ್.ಎ ರಾಮದಾಸ್, ಸರ್ ಅದು ವಿಲನ್ ಅಲ್ಲ ಹೀರೋ ಎಂದು ಹೇಳಿ ಎಂದು ಸಲಹೆ ನೀಡಿದರು.
ತಕ್ಷಣ ಎಚ್ಚೆತ್ತ ಸಚಿವ ಎಸ್.ಟಿ.ಸೋಮಶೇಖರ್, ಈ ಕೋವಿಡ್ ಸಮಯದಲ್ಲಿ ಹಿರೋ, ವಿಲನ್ ಎಲ್ಲರನ್ನು ಸಿಎಂ ನಿಭಾಯಿಸಿದ್ದಾರೆ. 7 ತಿಂಗಳಿನಿಂದ ಯಡಿಯೂರಪ್ಪ ಕೆಲಸ ಮಾಡಿದ್ದಾರೆ. ಹೀಗಾಗಿ ಈ ಕೊರೋನಾ ಸಂದರ್ಭದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಒಬ್ಬರೆ ಹೀರೋ ಅವರೇ ವಿಲನ್ ಎಂದು ನುಡಿದರು.
ಸುಮ್ಮನೆ ನಮ್ ಧಮ್ ಯಾಕೇ ಟೆಸ್ಟ್ ಮಾಡ್ತೀರಾ?….
ಸಿದ್ಧರಾಮಯ್ಯರ ಧಮ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಎಸ್.ಟಿ ಸೋಮಶೇಖರ್, ಸಿದ್ದರಾಮಯ್ಯ ಧಮ್ ಹಾಗೂ ಆಡಳಿತ ಎರಡನ್ನು ನೋಡಿದ್ದೇನೆ. ಇವರು ಸದನದ ಹೊರಗೆ ಒಂದು ಮಾತನಾಡುತ್ತಾರೆ ಹೊರಗೆ ಒಂದು ಮಾತನಾಡುತ್ತಾರೆ. ತುರ್ತು ಸದನ ಕರೆದರೆ ಇವರು ಬಾಯ್ ಕಾಟ್ ಮಾಡಿ ಹೊರಗೆ ಹೋಗ್ತಾರೆ. ಅದಕ್ಯಾಕೆ ಸದನ ಕರಿಬೇಕು ಎಂದು ಪ್ರಶ್ನಿಸಿದರು.
ನಾನು ಇವರ ಜೊತೆ 5 ವರ್ಷ ಕೆಲಸ ಮಾಡಿದ್ದಾನೆ. ಇವರು ಸದನದಲ್ಲಿ ಏನು ಮಾತನಾಡುತ್ತಾರೆ ಹಾಗೂ ಯಾವುದಕ್ಕೆ ಮಾತನಾಡಲು ಅವಕಾಶ ಇದೆ ಅನ್ನೋದು ಗೊತ್ತಿದೆ. ಸುಮ್ಮನೆ ನಮ್ ಧಮ್ ಯಾಕೇ ಟೆಸ್ಟ್ ಮಾಡ್ತೀರಾ? ಎಂದು ಮಾಜಿ ಸಿಎಂ ಸಿದ್ಧರಾಮಯ್ಯಗೆ ಟಾಂಗ್ ನೀಡಿದರು.
ಮುನಿರತ್ನ ವಿರುದ್ಧ ಸೆಟ್ ಆಪ್ ಬಾಕ್ಸ್ ಉಚಿತವಾಗಿ ನೀಡಿದ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಎಸ್.ಟಿ ಸೋಮಶೇಖರ್, ಮುನಿರತ್ನ ನಾಲ್ಕು ವರ್ಷಗಳಿಂದ ಕೇಬಲ್ ಬಿಸಿನೆಸ್ ಮಾಡ್ತಿದ್ದಾರೆ. ಸೆಟ್ ಅಪ್ ಬಾಕ್ಸ್ ಕೊಡ್ತಿರೋದು ಇದೆ ಮೊದಲೇನಲ್ಲ. ನಾನು ಆ ಸೆಟ್ ಅಪ್ ಬಾಕ್ಸ್ ನೋಡಿದ್ದೇನೆ. ಅದರಲ್ಲಿ ಮುನಿರತ್ನ ಬಗ್ಗೆ ಮಾಹಿತಿ ಬರುತ್ತೆ. ಚುನಾವಣಾ ಆಯೋಗ ಇದನ್ನ ಗಮನಿಸುತ್ತೇ. ಮುನಿರತ್ನ ಸಿನಿಮಾದಲ್ಲಿರೋದರಿಂದ ಅವರು ಸೆಟ್ ಅಪ್ ಬಾಕ್ಸ್ ಕೊಟ್ರೆ ಅದರಲ್ಲೇನಿದೆ ಎಂದು ಹೇಳಿದರು.
Key words: Minister- ST Somashekhar – villain – CM BS Yeddyurappara-mysore