ಬೆಂಗಳೂರು,ಅಕ್ಟೋಬರ್,ಅಕ್ಟೋಬರ್,28,2020(www.justkannada.in): ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಜಾತಿ ರಾಜಕಾರಣ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು, ಕೆಲವರು ಜಾತಿ ರಾಜಕಾರಣ ಮಾಡಿಕೊಂಡೆ ಬಂದಿದ್ದಾರೆ , ಜಾತಿ ರಾಜಕಾರಣದ ಬಗ್ಗೆ ಮಾತಾಡೋದಲ್ಲ, ಅಭಿವೃದ್ಧಿ ಬಗ್ಗೆ ಮಾತಾಡಲಿ, ಜಾತಿ ರಾಜಕಾರಣದ ಬಗ್ಗೆ ಮಾತಾನಾಡೊದು ಮೊದಲು ಬಿಡಲಿ ಎಂದು ಟಾಂಗ್ ನೀಡಿದರು.
ಬೆಂಗಳೂರಿನ ಜೆಡಿಎಸ್ ಕಛೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್ ಡಿ ದೇವೆಗೌಡ ಅವರು ಹೇಳಿದ್ದಿಷ್ಟು…
ಜಾತಿ ರಾಜಕಾರಣ ಹೊಸದೇನಲ್ಲ ಬಿಡಿ, ನನ್ನನ್ನ 1989ರಲ್ಲಿ ಪಕ್ಷದಿಂದ ಹೊರಹಾಕಿದ್ರು, ಆಗ ನನ್ನ ಜೊತೆಗೆ ಬಂದವರು ದತ್ತಾ, ಬಿ.ಎಲ್.ಶಂಕರ್ , ಆಗ ಏನೇನ್ ಆಯ್ತು ಅದು ಎಲ್ಲರಿಗೂ ಗೊತ್ತಿದೆ. ಆಗಿನಿಂದಲೂ ಕೆಲವರು ಜಾತಿ ರಾಜಕಾರಣ ಮಾಡಿಕೊಂಡೆ ಬಂದಿದ್ದಾರೆ , ಜಾತಿರಾಜಕಾರಣದ ಬಗ್ಗೆ ಮಾತಾಡೋದಲ್ಲ ಅಭಿವೃದ್ಧಿ ಬಗ್ಗೆ ಮಾತಾಡಲಿ, ಜಾತಿ ರಾಜಕಾರಣದ ಬಗ್ಗೆ ಮಾತಾನಾಡೊದು ಮೊದಲು ಬಿಡಲಿ ಎಂದರು.
ನಾಲ್ಕು ವಿಧಾನಪರಿಷತ್ ಚುನಾವಣೆಯಲ್ಲಿ ಪ್ರಾಮಾಣಿಕವಾಗಿ ನಮ್ಮ ಹೋರಾಟ ಮಾಡಿದ್ದೇವೆ , ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗೆ ನಮ್ಮ ಬೆಂಬಲ ನೀಡಿದ್ದೀವಿ. ಇದರ ಜವಾಬ್ದಾರಿಯನ್ನು ಬಸವರಾಜ ಹೊರಟ್ಟಿ ಅವರಿಗೆ ನೀಡಿದ್ದೀವಿ.
ನಾನು ಮತ್ತೊಂದು ಸುತ್ತು ಶಿರಾದಲ್ಲಿ ಪ್ರಚಾರ ಮಾಡ್ತೇನೆ. ನಾವು ಮಾಡ್ತಿರೋ ಹೋರಾಟ ಯಾರ ವಿರುದ್ಧದ ಚಾಲೆಂಜ್ ಗೆ ಅಲ್ಲ , ಈ ರಾಜ್ಯದ ಏಳಿಗೆಗಾಗಿ ಕೊನೆವರೆಗೂ ಹೋರಾಡುತ್ತೀನಿ ಮತ್ತು ಪ್ರಾದೇಶಿಕ ಪಕ್ಷವನ್ನು ಈ ರಾಜ್ಯದಲ್ಲಿ ಗಟ್ಟಿಯಾಗಿ ಉಳಿಸಲು ಕೊನೆವರೆಗೂ ಹೋರಾಡುತ್ತೀನಿ.
ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಈ ದೇಶದ ಚುಕ್ಕಾಣಿ ಇಡಿದಿತ್ತು , ನಾಯಕರ ನಡುವಿನ ವ್ಯತ್ಯಾಸದಿಂದ ಒಡೆದು ಹೋಗಿದೆ, ಉದಾಹರಣೆಗೆ ಬಿಹಾರದಲ್ಲಿ ಅದನ್ನು ಕಾಣಬಹುದಾಗಿದೆ, ಬಿಹಾರದಲ್ಲಿ ದೊಡ್ಡ ಜನಬೆಂಬಲ ಲಾಲೂ ಪ್ರಸಾದ ಅವರ ಪಕ್ಷಕ್ಕೆ ಸಿಗುತಿತ್ತು , ಬೇರೆ ಬೇರೆ ನಾಯಕರು ಬೇರೆ ಬೇರೆ ಪಕ್ಷ ಮಾಡಿಕೊಂಡರು, ಹೀಗಾಗಿ ಈಗ ಸಣ್ಣ ಸಣ್ಣ ಬಣಗಳಾದ ಉದಾಹರಣೆ ಕಾಣಬಹುದಾಗಿದೆ. ಜೆಡಿಎಸ್ ಅಸ್ತಿತ್ವ ದಲ್ಲಿ ಇರಲ್ಲ ಅಂತ ಕೆಲವರು ( ಸಿದ್ದರಾಮಯ್ಯ) ಹೇಳ್ತಾರೆ, ಇಂಥ ಹೇಳಿಕೆ ನೀಡುವವರು ಇಲ್ಲಿ ಇದ್ದು ಅಧಿಕಾರ ಅನುಭವಿಸಿ ಹೋಗಿದ್ದಾರೆ, ಅಂತವರ ಹೇಳಿಕೆ ಕೇಳಿ ಸ್ವಲ್ಪ ಬೇಸರ ಆಯ್ತು. ನಿಖಿಲ್ ಕುಮಾರಸ್ವಾಮಿ ಅವರು ಈಗ ಎಲ್ಲಾ ಕಡೆ ಪ್ರಚಾರ ಮಾಡ್ತಿದ್ದಾರೆ, ಉತ್ತಮ ಬೆಂಬಲ ಸಿಗ್ತಾ ಇದೆ. ಆರ್ ಆರ್ ನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಪ್ರಚಾರಕ್ಕೆ ಬಹಳ ಬೆಂಬಲ ಸಿಗುತ್ತಿದೆ.
ಸುಮ್ಮನೆ ಮೊಸಳೆ ಕಣ್ಣಿರು ಹಾಕುವ ಕೆಲಸ ಯಾರು ಮಾಡಬಾರದು..
ಬೆಂಗಳೂರಿನಲ್ಲಿ ಈಗ ಮಳೆ ಹಾನಿ ಆಗ್ತಿದೆ. ಇದಕ್ಕೆ ಕಾರಣ ಎನು ಅಂತ ಎಲ್ಲರಿಗೂ ಗೊತ್ತಿದೆ. ರಾಜಾಕಾಲುವೆ ಒತ್ತುವರಿ ಇದಕ್ಕೆ ಕಾರಣವಾಗಿದೆ. ಒತ್ತುವರಿ ಬಗ್ಗೆ ತಜ್ಞರಾದ ಲಕ್ಷ್ಮಣ್ ರಾವ್ ಸಮಿತಿಯ ವರದಿಯಲ್ಲಿ ಪ್ರಸ್ತಾಪ ಆಗಿದೆ , ಅವರ ವರದಿ ಸರ್ಕಾರದ ಬಳಿ ಇದೆ , ಇಂತಹ ಅನಾಹುತ ತಪ್ಪಿಸಲು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಸುಮ್ಮನೆ ಮೊಸಳೆ ಕಣ್ಣಿರು ಹಾಕುವ ಕೆಲಸ ಯಾರು ಮಾಡಬಾರದು, ಒತ್ತುವರಿ ಬಗ್ಗೆ ಸ್ವಲ್ಪ ಕಠಿಣ ನಿರ್ಧಾರ ಮಾಡಬೇಕಿದೆ ಎಂದು ಹೆಚ್.ಡಿ ದೇವೇಗೌಡರು ತಿಳಿಸಿದರು.
ಒತ್ತುವರಿ ವಿಚಾರದಲ್ಲಿ ಅನೇಕ ರಾಜಕಾರಣಿ ಗಳು ಇರಬಹುದು , ಕೆರೆಗಳ ಒತ್ತುವರಿ ಬಗ್ಗೆ ಸಹ ವರದಿಯಲ್ಲಿ ಪ್ರಸ್ತಾಪ ಆಗಿದೆ. ಕಂದಾಯ ಸಚಿವರು ಹೊಸ ಕಾಯ್ದೆ ತರುತ್ತೇನೆ ಅಂತ ಹೇಳ್ತಿದ್ದಾರೆ, ಹೀಗಾಗಿ ಬಿಜೆಪಿ, ಕಾಂಗ್ರೆಸ್ ಬಗ್ಗೆ ಆರ್ ಆರ್ ನಗರದ ಜನ ಯೋಚನೆ ಮಾಡಬೆಕಿದೆ.
ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನೆರೆ ಹಾವಳಿಗೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೆ , ರಾಜಕಾಲುವೆಗಳು ಒತ್ತುವರಿಯಾಗದಂತೆ ಕೆರೆಗಳ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದೆ , ಆದರೆ ಇಂದು ಎರಡು ರಾಷ್ಟೀಯ ಪಕ್ಷಗಳು ಒಬ್ಬರ ಮೇಲೊಬ್ಬರು ಟೀಕೆ ಮಾಡಿಕೊಳ್ಳುತ್ತಿದ್ದಾರೆ , ಇದೆಲ್ಲವನ್ನು ನೋಡಿದರೆ ಮನಸ್ಸಿಗೆ ತುಂಬಾ ನೋವುಂಟಾಗುತ್ತದೆ , ಜನರ ಸಮಸ್ಯೆ ಬಗ್ಗೆ ಇವರುಗಳಿಗೆ ಕಿಂಚಿತ್ತೂ ಕಾಳಜಿ ಇಲ್ಲ , ನಾನು ಈಗ ಇದರ ಬಗ್ಗೆ ಮಾತನಾಡೋದಿಲ್ಲ ಜನರೇ ತೀರ್ಮಾನ ಮಾಡಬೇಕಿದೆ.
ಎರಡು ಕ್ಷೇತ್ರದಲ್ಲಿ ನಮ್ಮ ಹೋರಾಟ ಮುಂದುವರಿದಿದೆ. ಗೆಲ್ಲುವ ವಿಶ್ವಾಸವಿದೆ , ಪ್ರಜ್ವಲ್, ನಿಖಿಲ್, ಕುಮಾರಸ್ವಾಮಿ, ನಾನು ಮತ್ತು ಪಕ್ಷದ ಎಲ್ಲ ಮುಖಂಡರು ಪ್ತಚಾರ ಮಾಡ್ತ ಇದ್ದೀವಿ. ತುಮಕೂರು ಜಿಲ್ಲೆಯಲ್ಲಿ ಕೆಲಸ ಮಾಡಲು ನಮಗೆ ಏನೂ ತೊಂದರೆ ಇಲ್ಲ, ಬೇರೆಯವರು ಹಣ ಖರ್ಚು ಮಾಡುವ ಬಗ್ಗೆ ನಾನು ಮಾತಾನಾಡುವುದಿಲ್ಲ , ಅಂತವರ ವಿರುದ್ಧ ಜನರೇ ತಿರ್ಮಾನ ಮಾಡುತ್ತರೆ, ಮೈತ್ರಿ ಸರ್ಕಾರವನ್ನು ಯಾರು ಪತನಗೊಳಿಸಿದರು ಎಂಬುದು ಇಡಿ ರಾಜ್ಯಕ್ಕೆ ಗೊತ್ತಿದೆ , 16 ಶಾಸಕರನ್ನು ಯಾರು ಮುಂಬೈ ಗೆ ಕಳಿಸಿದರು ಎಂಬುದನ್ನು ಅಲ್ಲಿಗೆ ಹೋದ ಶಾಸಕರೇ ಹೇಳಿದ್ದಾರೆ. ಅವರೆಲ್ಲ ಮಾಧ್ಯಮಗಳಿಗೆ ಹೇಳಿಕೆಯನ್ನು ನೀಡಿದ್ದಾರೆ. ಕೆಲವರು ಮಾಧ್ಯಮಗಳ ಇಂಟರ್ ವ್ಯೂ ಅಲ್ಲಿ ಎಲ್ಲಾ ವಿಷಯ ಹೇಳಿದ್ದಾರೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಅವರ ಬಗ್ಗೆ ಬೇಸರ ವ್ಯಕ್ತ ಪಡಿಸಿದರು.
ಬಿಜೆಪಿ ಸರ್ಕಾರ ಹೇಗೆ ಬಂತು? ಯಾರು ಶಾಸಕರನ್ನ ಹೊರಗೆ ಕಳಿಸಿದ್ದು ನನಗೆ ಎಲ್ಲಾ ಗೊತ್ತಿದೆ. ಯಾರು ಸರ್ಕಾರ ಬೀಳಿಸಿದರು ಅಂತ ಜಗಜಾಹೀರಾತಾಗಿದೆ. ಅಂದು ಕಾಂಗ್ರೆಸ್ ಹೈ ಕಮಾಂಡ್ ಅವರ ಒತ್ತಾಯದ ಮೇರೆಗೆ ಕುಮಾರಸ್ವಾಮಿ ಅವರನ್ನ ಮೈತ್ರಿ ಸರ್ಕಾರ ಮಾಡಲು ಹೇಳಿದೆ
ಶಿರಾದಲ್ಲಿ ವಿಜಯೇಂದ್ರ ಚುನಾವಣಾ ತಂತ್ರ ವಿಚಾರ , ಅವರು ಚುನಾವಣೆ ನಡೆಸೋ ಬಗ್ಗೆ ನನಗೆ ಗೊತ್ತಿದೆ. ಅವರು ಯಾವ ರೀತಿ ಚುನಾವಣೆ ನಡೆಸ್ತಾರೆ ಎಂಬ ಬಗ್ಗೆ ವರದಿ ಕೂಡ ಇದೆ. ಪೊಲೀಸರ ಮೂಲಕ ದುಡ್ಡು ಹಂಚುತ್ತಿದ್ದಾರೆ ಎಂದು ಕೆಲವರು ಆರೋಪಿಸುತ್ತಿದ್ದಾರೆ ಈ ಬಗ್ಗೆ ಕೆಲವರು ದೂರು ಕೊಟ್ರು ಯಾವುದೇ ಕ್ರಮ ಜರುಗಿಸುತ್ತಿಲ್ಲ, ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೀನಿ ಇದರ ಬಗ್ಗೆ ಮಾತನಾಡುತ್ತಾ ಕೂತರೆ ಯಾವುದೇ ಉಪಯೋಗವಿಲ್ಲ ನೀವೇ ಹೇಳಿ ಈ ರಾಜ್ಯದಲ್ಲಿ ನಿಷ್ಪಕ್ಷಪಾತವಾದ ಚುನಾವಣೆ ನಡೆಸಲು ಸಾಧ್ಯವೆ ? ಯಾಕೆಂದರೆ ರಾಷ್ಟ್ರದಲ್ಲೇ ಆ ರೀತಿ ಆಗಿ ಹೋಗಿದೆ ಏನ್ ಮಾಡೋದು ? ಎಂದು ಹೆಚ್.ಡಿಡಿ ಪ್ರಶ್ನಿಸಿದರು.
ಡಿಕೆಶಿ ಅವರ ಜಾತಿ ರಾಜಕಾರಣದ ವಿಚಾರ , ಜಾತಿ ರಾಜಕಾರಣ ಹೊಸದೇನಲ್ಲ ಬಿಡಿ, ನನ್ನನ್ನ 1989ರಲ್ಲಿ ಪಕ್ಷದಿಂದ ಹೊರಹಾಕಿದ್ರು, ಆಗ ನನ್ನ ಜೊತೆಗೆ ಬಂದವರು ದತ್ತಾ, ಬಿ.ಎಲ್.ಶಂಕರ್ , ಆಗ ಏನೇನ್ ಆಯ್ತು ಅದು ಎಲ್ಲರಿಗೂ ಗೊತ್ತಿದೆ. ಆಗಿನಿಂದಲೂ ಕೆಲವರು ಜಾತಿ ರಾಜಕಾರಣ ಮಾಡಿಕೊಂಡೆ ಬಂದಿದ್ದಾರೆ , ಜಾತಿರಾಜಕಾರಣದ ಬಗ್ಗೆ ಮಾತಾಡೋದಲ್ಲ ಅಭಿವೃದ್ಧಿ ಬಗ್ಗೆ ಮಾತಾಡಲಿ, ಜಾತಿ ರಾಜಕಾರಣದ ಬಗ್ಗೆ ಮಾತಾನಾಡೊದು ಮೊದಲು ಬಿಡಲಿ
ಸಮ್ಮಿಶ್ರ ಸರ್ಕಾರದಲ್ಲಿ ಡಿಕೆಶಿ ಅವರು ಹೆಚ್ ಡಿಕೆ ಅವರ ಬೆಂಬಲಕ್ಕೆ ನಿಂತಿದ್ರಾ ಎಂಬ ಚರ್ಚೆ ವಿಚಾರ. ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ದೇವೇಗೌಡರು, ಕುಮಾರಸ್ವಾಮಿ ಮತ್ತು ಜೆಡಿಎಸ್ ಪಕ್ಷದ ಬೆಂಬಲಕ್ಕೆ ನಿಂತಿದ್ದೆ ಅಂತ ಅವರು ಹೇಳಿಕೊಳ್ತಿದ್ದಾರೆ ಆದರೆ ಈಗ ಅವರು ಒಂದು ರಾಷ್ಟ್ರೀಯ ಪಕ್ಷದ ರಾಜ್ಯದ ಅಧ್ಯಕ್ಷರು ಅವರು , ಅವರ ಕೆಲಸವನ್ನು ಅವರು ಮಾಡ್ತಿದ್ದಾರೆ ಕುಮಾರಸ್ವಾಮಿ ಏನ್ ರಾಜಕೀಯ ಮಾಡಬೇಕು ಅದನ್ನ ಕುಮಾರಸ್ವಾಮಿ ಮಾಡ್ತಿದ್ದಾರೆ, ಮೊದಲಿನಿಂದಲೂ ಕುಮಾರಸ್ವಾಮಿ ರಾಜಕೀಯ ಹೋರಾಟ ಮಾಡ್ತಿದ್ದಾರೆ , ಯಾರು ಯಾರ ಬೆಂಬಲಕ್ಕೆ ನಿಂತಿದ್ದರು ಎಂದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ತಿಳಿಸಿದರು.
Key words: caste -politics –former pm- HD Deve Gowda –dk shivakumar