ಬೆಂಗಳೂರು,ಅಕ್ಟೋಬರ್,30,2020(www.justkannada.in): ಆರ್. ಆರ್ ನಗರ ಉಪಚುನಾವಣಾ ಆಖಾಡದಲ್ಲಿ ಪ್ರಚಾರದ ಭರಾಟೆ ಜೋರಾಗಿದ್ದು, ಈ ನಡುವೆ ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಕ್ಷೇತ್ರದಲ್ಲೊಬ್ಬ ವ್ಯಕ್ತಿ ಕೆಲಸ ಮಾಡದೇನೆ ಬಿಲ್ ಪಡೆದಿದ್ದಾನೆ. ಕಾಮಗಾರಿ ಹೆಸರಲ್ಲಿ ನೂರಾರು ಕೋಟಿ ಲೂಟಿ ಹೊಡೆದಿದ್ದಾರೆ. ಈ ಕ್ಷೇತ್ರದಲ್ಲಿ ಅಂತಹ ವ್ಯಕ್ತಿ ಹೋದದ್ದೇ ಒಳ್ಳೆಯದಾಯ್ತು. ಇಂತವರನ್ನು ಇಟ್ಟುಕೊಂಡು ರಾಜಕಾರಣ ಮಾಡಲು ಆಗಲ್ಲ ಎಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಿಡಿಕಾರಿದರು.
ಮಾಧ್ಯಮಗಳ ಜತೆ ಇಂದು ಮಾತನಾಡಿದ ಡಿ.ಕೆ ಶಿವಕುಮಾರ್, ಈ ಬಾರಿ ಹೆಣ್ಣುಮಗಳಿಗೆ ಅವಕಾಶ ನೀಡಿದ್ದೇವೆ. ಉಪಚುನಾವಣೆಗಳಲ್ಲಿ ಮತದಾರರು ಪಕ್ಷಗಳನ್ನ ಬಿಟ್ಟುಬಿಡಿ. ನೀಚ ರಾಜಕಾರಣ ಮಾಡುವವರ ವಿರುದ್ಧ ಮತ ನೀಡಿ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.
Key words: Bill –stolen- hundreds – crores- without- working-KPCC-president-DK Sivakumar –Muniratna