ಬೆಂಗಳೂರು,ಅಕ್ಟೋಬರ್,31,2020(www.justkannada.in) : ದೇಶದ ಏಕತೆ ಮತ್ತು ಅಖಂಡತೆಗಾಗಿ ಪ್ರಾಣವನ್ನೇ ಬಲಿದಾನ ಮಾಡಿದ್ದವರು ಮಾಜಿ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರು. ಅವರ ಬದುಕು, ಸಾಧನೆ ಮತ್ತು ತ್ಯಾಗ ನಮಗೆಲ್ಲ ಸ್ಪೂರ್ತಿಯಾಗಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸ್ವಾಭಿಮಾನಿ ಭಾರತದ ರೂವಾರಿ ಇಂದಿರಾಗಾಂಧಿ
ಇಂದಿರಾಗಾಂಧಿಯವರ ಪುಣ್ಯಸ್ಮರಣೆ ದಿನದಂದು ಅವರನ್ನು ಸ್ಮರಿಸಿದ್ದು, ಸಶಕ್ತ ಸಮೃದ್ಧ, ಸ್ವಾವಲಂಬಿ, ಸ್ವಾಭಿಮಾನಿ ಭಾರತದ ರೂವಾರಿ ಇಂದಿರಾಗಾಂಧಿಯವರಾಗಿದ್ದು, ಅವರ ಬದುಕು, ಸಾಧನೆ ಮತ್ತು ತ್ಯಾಗ ನಮಗೆಲ್ಲ ಸ್ಪೂರ್ತಿಯಾಗಲಿ ಎಂದು ಟ್ವೀಟ್ ಮಾಡಿದ್ದಾರೆ.
ಭಾರತೀಯರ ಆಕಾಂಕ್ಷೆಗಳನ್ನು ಈಡೇರಿಸುವ ಧೈರ್ಯ ಮತ್ತು ಬದ್ಧತೆಯು ನಮ್ಮನ್ನು ಬಲವಾದ ಸ್ಥಾನದಲ್ಲಿರಿಸಿತು. ಸಾರ್ವಭೌಮತ್ವ ಮತ್ತು ಸ್ವಾವಲಂಬನೆ ನಿಜವಾಗಿಯೂ ಅರ್ಥವೇನೆಂದು ಇಂದಿರಾಗಾಂಧಿ ಅವರು ಭಾರತಕ್ಕೆ ತೋರಿಸಿದರು ಎಂದು ಸ್ಮರಿಸಿದ್ದಾರೆ.
ಇಂದಿರಾಗಾಂಧಿ ಕೊಡುಗೆ ಮತ್ತು ತ್ಯಾಗವನ್ನು ದೇಶ ಎಂದೆಂದಿಗೂ ಸ್ಮರಿಸುತ್ತದೆ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭಾರತದ ಉಕ್ಕಿನ ಮಹಿಳೆ ಇಂದಿರಾಗಾಂಧಿ ರಾಷ್ಟ್ರ ನಿರ್ಮಾಣಕ್ಕೆ ನೀಡಿದ ಕೊಡುಗೆ ಮತ್ತು ದೇಶದ ಸಾರ್ವಭೌಮತ್ವವನ್ನು ರಕ್ಷಿಸಲು ಅವರು ಮಾಡಿದ ತ್ಯಾಗವನ್ನು ಭಾರತ ಎಂದೆಂದಿಗೂ ನೆನಪಿಸಿಕೊಳ್ಳುತ್ತದೆ ಎಂದು ಟ್ವೀಟ್ ಮೂಲಕ ಸ್ಮರಿಸಿದ್ದಾರೆ.
key words : Indira Gandhi-life-achievement-sacrifice-inspire- not-Former-CM Siddaramaiah-tweeted