ಮೈಸೂರು, ನವೆಂಬರ್ 01, 2020 (www.justkannada.in): ಮೈಸೂರು ನಗರ ರಿಂಗ್ ರಸ್ತೆಯ ಒಳ ವ್ಯಾಪ್ತಿ ಹಾಗೂ ಹೊರವ್ಯಾಪ್ತಿಗಳಲ್ಲಿನ ಖಾಸಗಿ ಬಡಾವಣೆಗಳು ಹಾಗೂ ಗ್ರಾಮಪಂಚಾಯಿತಿಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸುವ ಬಗ್ಗೆ ಮಹಾನಗರ ಪಾಲಿಕೆಯು ಗುರುವಾರ ನಡೆಸಿದ ಕೌನ್ಸಿಲ್ ಸಭೆಯ ಕಾರ್ಯಸೂಚಿಯಲ್ಲಿ ಪ್ರಸ್ತಾವನೆ ಮಾಡದಿದ್ದನ್ನು ಮಾಜಿ ಪಾಲಿಕೆ ಸದಸ್ಯರಾದ ಜೆಎಸ್ ಜಗದೀಶ್ ತೀವ್ರವಾಗಿ ಖಂಡಿಸಿದ್ದಾರೆ.
ಮೈಸೂರಿನ ರಿಂಗ್ ರಸ್ತೆಯ ಒಳ ವ್ಯಾಪ್ತಿ ಹಾಗೂ ಹೊರ ವ್ಯಾಪ್ತಿಯಲ್ಲಿರುವ ಖಾಸಗಿ ಬಡಾವಣೆಗಳು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಜನರು ವಾಸವಿದ್ದು, ಅವರು ಮೂಲ ಭೂತಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಇಲ್ಲಿ ಮನೆಗಳಲ್ಲದೆ, ಮಹಾಮಳಿಗೆಗಳು, ಶಾಲೆಗಳು ಹಾಗೂ ಇನ್ನಿತರೆ ವಾಣಿಜ್ಯ ಕಟ್ಟಡಗಳು ಇವೆ. ಹಾಗಾಗಿ ಇವುಗಳನ್ನು ಪಾಲಿಕೆಯ ವ್ಯಾಪ್ತಿಗೆ ತೆಗೆದುಕೊಂಡರೆ ಜನರ ತೊಂದರೆಗಳು ಸ್ವಲ್ಪ ಮಟ್ಟಿಗಾದರೂ ನಿವಾರಣೆಯಾಗುವುದಲ್ಲದೆ ಪಾಲಿಕೆಯ ಆದಾಯವೂ ಹೆಚ್ಚುತ್ತದೆ.
ನಿವಾಸಿಗಳು ಮೂಲ ಭೂತ ಸೌಕರ್ಯಗಳಿಲ್ಲದೆ ಪರದಾಡುವಂತಾಗಿದೆ. ಅರಮನೆ ನಗರಿ, ಪೆಂಶನರ್ಸ್ಪ್ಯಾರಡೈಸ್, ಸಾಂಸ್ಕೃತಿಕ ನಗರಿ ಎಂದೆಲ್ಲಾ ಕರೆಸಿಕೊಳ್ಳುವ ನಮ್ಮ ಮೈಸೂರನ್ನು ಪ್ರತಿವರ್ಷ ವೂಸ್ವಚ್ಛನಗರಿ ಎಂಬಸರಕಾರದ ಅಧಿಕೃತಘೋಷಣೆಯು ಇನ್ನಷ್ಟು ಪ್ರಸಿದ್ಧಿಯಾಗಿಸಿದೆ. ಹೀಗಿರುವಾಗ ರಿಂಗ್ ರಸ್ತೆಯ ಒಳ ಹಾಗೂ ಹೊರವ್ಯಾಪ್ತಿಯಲ್ಲಿನ ಬಡಾವಣೆಗಳಲ್ಲಿ ಸರಿಯಾದ ಡಾಂಬರೀಕರಣವಾಗದೆ ಜನ ಓಡಾಡಲು ಹರಸಾಹಸಪಡುತ್ತಿದ್ದಾರೆ. ಮಳೆಯಿಂದಾಗಿ ಅಲ್ಲಲ್ಲಿ ಹೊಂಡಗಳಾಗಿವೆ. ಬೀದಿ ದೀಪಗಳನ್ನುಎಲ್ಲೆಡೆ ಅಳವಡಿಸಿಲ್ಲವಾದ್ದರಿಂದ ಹೆಂಗಸರುಮತ್ತುಮಕ್ಕಳು ಸೂರ್ಯಾಸ್ತದನಂತರ ಹೊರಬರಲು ಭಯಪಡುತ್ತಾರೆ. ಸ್ವಚ್ಛತೆಯವಿಷಯದಲ್ಲಂತೂ ಜನ ಹೈರಾಣಾಗಿದ್ದಾರೆ. ಬೀದಿಯ ಕೊನೆಯಿಲ್ಲ, ರಸ್ತೆಯ ಅಂಚಿಲ್ಲ ಎಂಬಂತೆಎಲ್ಲೆಂದರಲ್ಲಿ ಕಸವನ್ನು ಹಾಕಿರುತ್ತಾರೆ. ನಿವಾಸಿಗಳಿಗೆ ಕಸವಿಲೇವಾರಿ ವಿಷಯದಲ್ಲಿ ಸರಿಯಾದ ಬೆಂಬಲ ಸಿಗುತ್ತಿಲ್ಲ.
ಇವೆಲ್ಲದರ ಅವಶ್ಯಕತೆಯನ್ನು ಮನಗಂಡು ಖುದ್ದಾಗಿ ಶಾಸಕರು ಹಾಗೂ ಸಂಸದರು ಈಹಿಂದೆಯೇ ಪಾಲಿಕೆಯವರು ಇದರಬಗ್ಗೆ ಗಮನಹರಿಸಬೇಕೆಂದು ಕೋರಿ ಲಿಖಿತಪತ್ರವೊಂದನ್ನು ಪಾಲಿಕೆಗೆನೀಡಿದ್ದರೂ ಸಹ ಇದನ್ನು ಮೇಯರ್ ಕೌನ್ಸಿಲ್ ಸಭೆಯ ಕಾರ್ಯಸೂಚಿಯಲ್ಲಿ ತಾರದೆ ಅತ್ಯಂತ ಬೇಜವಾಬ್ದಾರಿತನವನ್ನು ವ್ಯಕ್ತಪಡಿಸಿದ್ದಲ್ಲದೆ ಅದಕ್ಕೆತರ್ಕಬದ್ಧವಲ್ಲದ ಉತ್ತರವನ್ನುನೀಡಿದ್ದಾರೆ. ವಿಷಯವನ್ನು ಕಾರ್ಯಸೂಚಿಯಲ್ಲಿತರುವ ಮುನ್ನವೇ ಮುಂಬರುವ ಅಡೆತಡೆಗಳ ಬಗ್ಗೆ ಮಾತನಾಡುವುದು ಸರಿಯಲ್ಲ. ಅಲ್ಲದೇ ಶಾಸಕರು ಹಾಗೂ ಸದಸ್ಯರುಗಳು ಸಭೆಯಲ್ಲಿ ಉಪಸ್ಥಿತರಿರುವಾಗಲೇ ಅವರ ಕೋರಿಕೆಯ ವಿಷಯವನ್ನು ಪ್ರಸ್ತಾಪಿಸದೆ ಇರುವುದು ಗಣ್ಯರಿಗೆ ಅಗೌರವ ತರುವ ವಿಷಯವಾಗುತ್ತದೆ. ಮೊದಲು ಎಲ್ಲಾ ಪಾಲಿಕೆ ಸದಸ್ಯರು, ಶಾಸಕರು ಹಾಗೂ ಸಂಸದರನ್ನೊಳಗೊಂಡ ಸಭೆಯನ್ನು ನಡೆಸಿ ಅದರ ಆಗುಹೋಗುಗಳನ್ನು ಕೂಲಂಕುಷವಾಗಿ ಚರ್ಚಿಸಿ ಪಾಲಿಕೆಯವರು ಯೋಜನಾಬದ್ಧರಾಗಿ ಇದಕ್ಕೆಅನುಮೋದನೆ ನೀಡಬೇಕೆಂದು ಆಗ್ರಹಿಸಿದ್ದಾರೆ.