ಮೈಸೂರು,ನವೆಂಬರ್,2,2020(www.justkannada.in): ನಗರದ ಟಿ.ಕೆ ಬಡಾವಣೆಯ ಗಣೇಶ ಭಂಡಾರ್ ಬಳಿ ಇರುವ ಚೆಫ್ಸ್ ದಿ ಕ್ಯೂಸಿನ್ ಹೋಟೆಲ್ ನಲ್ಲಿ ನವೆಂಬರ್ 1ರ ಕನ್ನಡ ರಾಜ್ಯೋತ್ಸವವನ್ನ ಸಂಭ್ರಮದಿಂದ ಆಚರಣೆ ಮಾಡಲಾಯಿತು.
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಬೆಳಗ್ಗೆ 7 ರಿಂದ ರಾತ್ರಿ 10 ಗಂಟೆಯವರೆಗೆ ಹೋಟೆಲ್ ನಲ್ಲಿ ಆಹಾರೋತ್ಸವ ಆಯೋಜಿಸಲಾಗಿತ್ತು. ಸಾಂಪ್ರದಾಯಿಕ ಕರ್ನಾಟಕ ಆಹಾರ ಪದಾರ್ಥ ತಿಂಡಿ ತಿನಿಸುಗಳನ್ನ ತಯಾರಿಸಿ ಗ್ರಾಹಕರಿಗೆ ಒದಗಿಸುವ ಮೂಲಕ ಚೆಫ್ ದಿ ಕ್ಯೂಸನ್ ಕನ್ನಡಾಭಿಮಾನ ತೋರ್ಪಡಿಸಿತು.
ಹಾಗೆಯೇ ಹೋಟೆಲ್ ನ ಮೆನುಕಾರ್ಡ್ ಪೋಸ್ಟರ್ ಕನ್ನಡ ಧ್ವಜದ ಬಣ್ಣದಿಂದಲೇ ಕೂಡಿತ್ತು. ಹೋಟೆಲ್ ನ ಸಿಬ್ಬಂದಿಗಳೆಲ್ಲರೂ ಕನ್ನಡ ಧ್ವಜದ ಬ್ಯಾಡ್ಜ್ ಧರಿಸಿ ಕೆಲಸ ನಿರ್ವಹಿಸುವ ಮೂಲಕ ಕನ್ನಡ ಪ್ರೇಮ ಮೆರೆದರು.
ಇನ್ನು ನಿನ್ನೆ ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆ ಅಂಗವಾಗಿ ಸಾಂಪ್ರದಾಯಿಕ ಕರ್ನಾಟಕ ತಿಂಡಿ ತಿನಸುಗಳಾದ ಕೊಟ್ಟೆ ಇಡ್ಲಿ, ಮಂಗಳೂರು ಶೈಲಿಯ ಗೋಲಿ ಬಜ್ಜಿ, ಅಪ್ಪಂ-ಕಡ್ಲೆಗಸಿ ವಿವಿಧ ರೀತಿಯ ರೈಸ್ ಬಾತ್, ಪಿಜ್ಜಾ ದೋಸಾ, ನೀರ್ ದೋಸಾ, ಟೊಮೊಟಾ ದೋಸಾ, ದಾವಣಗೆರೆ ಬೆಣ್ಣೆ ದೋಸೆ, ರಾಗಿ ಮುದ್ದೆ, ಸೊಪ್ಪಿನ ಸಾರು ಊಟ (ಮಧ್ಯಾಹ್ನ), ಮೈಸೂರು ಮಸಾಲಾ ದೋಸಾ, ಅಕ್ಕಿರೊಟ್ಟಿ-ಎಣ್ಣೆಗಾಯಿ, ಟೊಮೊಟೊ ಬಾತ್, ಇಡ್ಲಿ, ರವದೋಸೆ, ತುಪ್ಪದ ದೋಸೆ , ಗೋಧಿ ದೋಸೆ, ಹೆಸರುಕಾಳು ದೋಸೆ, ಬಿಸಿಬೆಳೆ ಬಾತ್, ಹಾಗೂ ಇನ್ನೀತರೆ ತಿನಿಸುಗಳನ್ನ ತಯಾರಿಸಿ ಗ್ರಾಹಕರಿಗೆ ಒದಗಿಸಲಾಗಿತ್ತು.
ಈ ಮಧ್ಯೆ ಹೋಟೆಲ್ ನಲ್ಲಿ ಆಯೋಜಿಸಲಾಗಿರುವ ಆಹಾರೋತ್ಸವವನ್ನು ನವೆಂಬರ್ 10ರವರೆಗೆ ವಿಸ್ತರಿಸುವಂತೆ ಗ್ರಾಹಕರ ಒತ್ತಾಯ ಕೇಳಿಬಂದಿದ್ದು ಈ ಹಿನ್ನೆಲೆ ಆಹಾರೋತ್ಸವವನ್ನ ವಿಸ್ತರಿಸಲಾಗಿದೆ. ಬೆಳಿಗ್ಗೆ 7ರಿಂದ 10 ಗಂಟೆವರೆಗೆ ಆಹಾರೋತ್ಸವದಲ್ಲಿ ರುಚಿಕರವಾದ ತಿಂಡಿ ತಿನಿಸುಗಳು ಊಟ ಲಭ್ಯವಿರಲಿದೆ.
Key words: Mysore -Chefs the cusin-Celebrate- Kannada Rajyotsava