ಸರ್ಕಾರಗಳು ಡಾ.ಸರೋಜಿನಿ ಮಹಿಷಿ ವರದಿ ಅನುಷ್ಠಾನಗೊಳಿಸುವತ್ತ ಗಮನಹರಿಸುತ್ತಿಲ್ಲ : ಕೆ.ಟಿ.ಶ್ರೀಕಂಠೇಗೌಡ ಬೇಸರ

ಮಂಡ್ಯ,ನವೆಂಬರ್,02,2020(www.justkannada.in) : ಕನ್ನಡಿಗರಿಗೆ ಅನುಕೂಲವಾಗುವ ಡಾ.ಸರೋಜಿನಿ ಮಹಿಷಿ ವರದಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸರ್ಕಾರಗಳು ಗಮನಹರಿಸುತ್ತಿಲ್ಲ. ಇನ್ನಾದರೂ ಈ ಬಗ್ಗೆ ಕ್ರಮ ವಹಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಬೇಸರವ್ಯಕ್ತಪಡಿಸಿದರು.

jk-logo-justkannada-logoಜಿಲ್ಲಾ ಕಸಾಪದಿಂದ ನಗರದ ಲಕ್ಷ್ಮೀ ಜನಾರ್ಧನ ಶಿಕ್ಷಣ ಸಂಸ್ಥೆಯ ಬಯಲು ರಂಗಮಂದಿರದಲ್ಲಿ ಭಾನುವಾರ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಒದಗಿಸುವ ಡಾ.ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

 

ಗಡಿ ಪ್ರದೇಶದ ಕನ್ನಡ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಮುಂದಾಗಲಿ

ಗಡಿ ಪ್ರದೇಶದಲ್ಲಿರುವ ಕನ್ನಡ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕು. ಬೇರೆ ರಾಜ್ಯದಲ್ಲಿ ಗಡಿ ಶಾಲೆಗಳಿಗೆ ಹೆಚ್ಚಿನ ಸೌಲಭ್ಯ ನೀಡಲಾಗುತ್ತದೆ. ಆದರೆ, ನಮ್ಮಲ್ಲಿ ಈ ಸೌಲಭ್ಯವಿಲ್ಲ. ಆದ್ದರಿಂದ ಈ ಬಗ್ಗೆ ರಾಜ್ಯ ಸರ್ಕಾರ ಗಮನಹರಿಸಿ, ಅಗತ್ಯ ಸೌಲಭ್ಯ ಒದಗಿಸುವ ಮೂಲಕ ಕನ್ನಡ ಶಾಲೆಗಳ ಬೆಳವಣಿಗೆಗೆ ಸಹಕರಿಸಬೇಕು ಎಂದರು.

 

ವಿವಿಧ ಕ್ಷೇತ್ರದ 75 ಸಾಧಕರಿಗೆ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ

ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಕಾರ್ಯಕ್ರಮ ಉದ್ಘಾಟಿಸಿ, ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ 75 ಜನರಿಗೆ ಎಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದರು.Governments,not,looking,implementing,Dr.Sarojini Mahshi Report,K.T.Srikanthegowda,bored

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು

ಡಾ.ಹೇಮರವೀಶ್(ವೈದ್ಯಕೀಯ ಕ್ಷೇತ್ರ), ಡಾ.ಎಸ್.ಶ್ರಿಕಂಠಸ್ವಾಮಿ(ಆಡಳಿತ ಕ್ಷೇತ್ರ), ಡಾ.ಕೆ.ವೈ.ಶ್ರೀನಿವಾಸ್ ಕ್ಯಾತನಹಳ್ಳಿ(ವೈದ್ಯಕೀಯ ಕ್ಷೇತ್ರ), ಡಾ.ಎಂ.ಸಿ.ಪದ್ಮ(ತಾಂತ್ರಿಕ ಶಿಕ್ಷಣ), ಎಚ್.ಜೆ.ಚಂದ್ರು ಬಿ ಹೊಸಹಳ್ಳಿ(ಸಹಕಾರ ಕ್ಷೇತ್ರ), ಕೆ.ರುದ್ರೇಶ್(ತೋಟಗಾರಿಕೆ ಕ್ಷೇತ್ರ), ಎಚ್.ಎಸ್.ಅಶ್ವಥ್ ಹನಕೆರೆ(ಸಮಾಜಸೇವೆ ಕ್ಷೇತ್ರ), ವಿ.ಫಿಲಿಪ್ ಜೇಮ್ಸ್(ಜೀವವಿಮಾ ಕ್ಷೇತ್ರ), ಡಿ.ಎಸ್.ದೇವರಾಜು( ತಾಂತ್ರಿಕ ಸೇವೆ) ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದರು.

 

ಜಿಲ್ಲಾ ಕಾಂಗ್ರೆಸ್ ಮಹಿಳಾಧ್ಯಕ್ಷೆ ಅಂಜನಾ ಶ್ರೀಕಾಂತ್, ಕಸಾಪ ಮಾಜಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ, ಕಸಾಪ ಜಿಲ್ಲಾಧ್ಯಕ್ಷ ಸಿ.ಕೆ.ರವಿಕುಮಾರ ಚಾಮಲಾಪುರ, ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಡಾ.ಈ.ಸಿ.ನಿಂಗರಾಜ್ ಗೌಡ, ಕೃಷಿ ಮಾರಾಟ ಇಲಾಖೆ ನಿದೇರ್ಶಕ ಸಿ.ಎಸ್.ಕರೀಗೌಡ ಹಾಜರಿದ್ದರು.

key words : Governments-not-looking-implementing-Dr.Sarojini Mahshi Report-K.T.Srikanthegowda-bored