ಬೆಂಗಳೂರು:ಜೂ-16: ಇಂದಿರಾ ಕ್ಯಾಂಟೀನ್ಗಳಿಗೆ ಬಳಸಲಾಗಿರುವ ಪ್ರಿ ಫ್ಯಾಬ್ರಿಕೇಟೆಡ್ ಸಾಮಗ್ರಿಗಳನ್ನು ಬಳಸಿ ನಿರಾಶ್ರಿತ ಕೇಂದ್ರಗಳನ್ನು ಸ್ಥಾಪಿಸಲು ಬಿಬಿಎಂಪಿ ನಿರ್ಧರಿಸಿದೆ.
ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಪಾಲಿಕೆ, ನಗರದಲ್ಲಿ 3 ಸಾವಿರಕ್ಕೂ ಅಧಿಕ ನಿರಾಶ್ರಿತರಿದ್ದು, ಅವರಿಗೆ ಕೇಂದ್ರಗಳನ್ನು ಸ್ಥಾಪಿಸುವ ಅವಶ್ಯಕತೆಯಿದೆ ಎಂದು ಕೋರಿದೆ. ಬೆಂಗಳೂರಿಗೆ ವಲಸೆ ಬಂದವರು, ರಾತ್ರಿ ಮಲಗಲು ಸ್ಥಳವಿಲ್ಲದವರಿಗೆ ಈ ಕೇಂದ್ರಗಳಿಂದ ಅನುಕೂಲವಾಗಲಿದೆ.
ಖಾಸಗಿ ಸಂಸ್ಥೆಯೊಂದು ಪ್ರಿಫ್ಯಾಬ್ರಿಕೇಟೆಡ್ ಎಲಿಮೆಂಟ್ ಬಳಸಿ ವಾರದೊಳಗೆ ನಿರಾಶ್ರಿತರ ಕೇಂದ್ರ ನಿರ್ವಿುಸಿಕೊಡುವುದಾಗಿ ಪ್ರಸ್ತಾವನೆ ಸಲ್ಲಿಸಿದೆ. ಆ ಹಿನ್ನೆಲೆಯಲ್ಲಿ ಪ್ರಾಯೋಗಿಕವಾಗಿ ಒಂದು ಕಡೆ ನಿರ್ವಿುಸಿ ಯಶಸ್ವಿಯಾದರೆ, ಪಾಲಿಕೆಯಿಂದ ನಿರ್ವಿುಸಲು ಉದ್ದೇಶಿಸಿರುವ ಕೇಂದ್ರಗಳನ್ನು ಪ್ರಿ ಫ್ಯಾಬ್ರಿಕೇಟೆಡ್ ಎಲಿಮೆಂಟ್ ಬಳಸಿಯೇ ನಿರ್ವಿುಸಲು ಯೋಜನೆ ರೂಪಿಸಿದೆ.
ನಗರದಲ್ಲಿರುವ ನಿರಾಶ್ರಿತರಿಗೆ ಅನುಗುಣವಾಗಿ 50 ನಿರಾಶ್ರಿತರ ಕೇಂದ್ರಗಳು ಅಗತ್ಯವಿದ್ದು, ನಲ್ಮ್ ಯೋಜನೆಯಡಿ ಪಾಲಿಕೆಯಿಂದ ನಿರ್ವಿುಸಲು ಉದ್ದೇಶಿಸಲಾಗಿದೆ. ಗೂಡ್ಶೆಡ್ ರಸ್ತೆ, ಮರ್ಫಿಟೌನ್ ಹಾಗೂ ವಿಜಯನಗರದ ನಿರಾಶ್ರಿತ ಕೇಂದ್ರಗಳು ಉತ್ತಮವಾಗಿ ನಿರ್ವಹಿಸುತ್ತಿದ್ದರೂ ಕಟ್ಟಡಗಳು ಹಳೆಯದಾಗಿವೆ. ಇನ್ನೂ ಕೆಲವು ಕಡೆಗಳಲ್ಲಿ ಬೆಡ್ಗಳು ಹಳೆಯದಾಗಿರುವುದರಿಂದ ಬದಲಾಗಿಸಬೇಕಾಗಿದೆ. ದೆಹಲಿ ಮಾದರಿಯ ಕೇಂದ್ರಗಳನ್ನು ಸ್ಥಾಪಿಸಲು ತೀರ್ವನಿಸಲಾಗಿದೆ ಎಂದು ವಿಶೇಷ ಆಯುಕ್ತ ರಣದೀಪ್ ಮಾಹಿತಿ ನೀಡಿದರು.
ಕೃಪೆ:ವಿಜಯವಾಣಿ