ಬೆಂಗಳೂರು,ನವೆಂಬರ್,3,2020(www.justkannada.in): ಡ್ರಗ್ಸ್ ದಂಧೆಗೆ ಸ್ಯಾಂಡಲ್ ವುಡ್ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ಹಾಗೂ ನಟಿ ಸಂಜನಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ಈ ನಡುವೆ ಪುತ್ರಿ ರಾಗಿಣಿ ಜಾಮೀನು ಅರ್ಜಿ ತಿರಸ್ಕಾರ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಕಣ್ಣೀರು ಹಾಕಿರುವ ರಾಗಿಣಿ ತಾಯಿ ರೋಹಿಣಿ ಅವರು, ನನ್ನ ಮಗಳು ಯಾವುದೇ ತಪ್ಪು ಮಾಡಿಲ್ಲ. ಅನ್ಯಾಯವಾಗಿ ಹೆಣ್ಣುಮಗಳನ್ನ ಬಲುಪಶು ಮಾಡಲಾಗುತ್ತಿದೆ. ನನ್ನ ಮಗಳ ಜೀವನ ಹಾಳು ಮಾಡಬೇಡಿ ಎಂದು ಕಣ್ಣೀರು ಹಾಕಿದ್ದಾರೆ.
ಪ್ರಕರಣದಲ್ಲಿ ರಾಜಕಾರಣಿಗಳ ಮಕ್ಕಳು, ದೊಡ್ಡ ದೊಡ್ಡ ಸ್ಟಾರ್ ಗಳ ಹೆಸರು ಕೇಳಿ ಬಂದಿದೆ. ಪೊಲೀಸರ ತನಿಖೆ ಬಗ್ಗೆ ಬೇಸರವಿದೆ. ನಿಜವಾದ ಆರೋಪಿಗಳನ್ನ ಬಂಧಿಸಲಾಗಿಲ್ಲ. ಸಿಸಿಬಿ ಅಧಿಕಾರಿಗಳಿಂದ ಅಧಿಕಾರ ದುರ್ಬಳಕೆಯಾಗುತ್ತಿದೆ. ಯಾವ ಆಧಾರದ ಮೇಲೆ ನನ್ನ ಮಗಳನ್ನ ಬಂಧಿಸಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಹಾಗೆಯೇ ರಾಜಕಾರಣಿಗಳು, ದೊಡ್ಡವರು ತಪ್ಪು ಮಾಡಿಲ್ವಾ ಎಂದು ಪ್ರಶ್ನಿಸಿರುವ ರೋಹಿಣಿ, ನನ್ನ ಮಗಳು ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದಾಳೆ. ನನ್ನ ಮನೆಯಲ್ಲಿ ಪೊಲೀಸರಿಗೆ ಏನೆಂದರೇ ಏನು ಸಿಕ್ಕಿಲ್ಲ. ರಾಗಿಣಿ ಅಮಾಯಕಿ. ಅವಳು ಯಾವುದೇ ತಪ್ಪು ಮಾಡಿಲ್ಲ. ನಮ್ಮ ಬಳಿ ದುಡ್ಡು ಇಲ್ಲ. ಮುಂದೆ ಏನು ಮಾಡಬೇಕೋ ಗೊತ್ತಿಲ್ಲ ಎಂದು ನಟಿ ರಾಗಿಣಿ ತಾಯಿ ರೋಹಿಣಿ ಹೇಳಿದ್ದಾರೆ.
Key words: sandalwood-drugs case- My daughter- no mistake -Actress Ragini’s -mother – tears.