ವಾಷಿಂಗ್ಟನ್, ನವೆಂಬರ್,4,2020(www.justkannada.in): ಇಡೀ ವಿಶ್ವದ ಗಮನವನ್ನು ಸೆಳೆದಿರುವ ಅಮೆರಿಕಾದ ಅಧ್ಯಕ್ಷೀಯ ಚುನಾವಣಾ ಫಲಿತಾಂಶ ಹೊರ ಬೀಳುತ್ತಿದ್ದು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡೆನ್ ಮುನ್ನಡೆ ಸಾಧಿಸಿದ್ದಾರೆ.
ಹಾಲಿ ಅಧ್ಯಕ್ಷರಾಗಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹಾಗೂ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡೆನ್ ನಡುವೆ ತೀವ್ರ ಪೈಪೊಟಿ ಎದುರಾಗಿದೆ. ಜೋ ಬೈಡೆನ್ ಅವರಿಗೆ 209 ಎಲೆಕ್ಟ್ರೋಲ್ ಮತಗಳನ್ನ ಪಡೆದಿದ್ದು ಮುನ್ನಡೆ ಸಾಧಿಸಿದರೇ ಡೊನಾಲ್ಡ್ ಟ್ರಂಪ್ 118 ಎಲೆಕ್ಟ್ರೋಲ್ ಮತಗಳನ್ನ ಪಡೆದಿದ್ದಾರೆ.
50 ರಾಜ್ಯಗಳ 538 ಪ್ರತಿನಿಧಿಗಳನ್ನ ಹೊಂದಿದ್ದು ಅಧ್ಯಕ್ಷರಾಗಲು 270 ಎಲೆಕ್ಟ್ರೋಲ್ ಮತಗಳು ಬೇಕಾಗುತ್ತದೆ. ಪ್ರಮುಖವಾಗಿ ಬಿಡೆನ್ ಅವರು ನ್ಯೂಯಾರ್ಕ್, ಲಾಸ್ ಏಂಜಲೀಸ್ ಸೇರಿದಂತೆ ಪ್ರಮುಖ ನಗರಗಳಲ್ಲಿ ತಮ್ಮ ಜಯ ದಾಖಲಿಸಿದ್ದಾರೆ. ಎರಡನೆ ಅವಧಿಯ ಅಧ್ಯಕ್ಷರಾಗುವ ಕನಸು ಹೊತ್ತಿದ್ದ ಡೊನಾಲ್ಡ್ ಟ್ರಂಪ್ಗೆ ನಿರಾಸೆಯಾಗುತ್ತಿದೆ.
Key words: America-Presidential Election –Outcome- Joe Biden-donald trump