ದೀಪಾವಳಿ ಹಬ್ಬಕ್ಕೆ ಪಟಾಕಿ ನಿಷೇಧ : ಸರ್ಕಾರದ ನಿರ್ಧಾರಕ್ಕೆ ಪಟಾಕಿ ಮಾರಾಟಗಾರರ ಅಕ್ರೋಶ

ಮೈಸೂರು,ನವೆಂಬರ್,06,2020(www.justkannada.in) : ರಾಜ್ಯದಲ್ಲಿ ದೀಪಾವಳಿ ವೇಳೆ ಪಟಾಕಿ ನಿಷೇಧಿಸಿರುವ ಸರ್ಕಾರದ ನಿರ್ಧಾರಕ್ಕೆ ಪಟಾಕಿ ಮಾರಾಟಗಾರರು ಅಕ್ರೋಶ ಹೊರ ಹಾಕಿದ್ದಾರೆ. ಲಕ್ಷಾಂತರ ರೂಪಾಯಿ ಹಣಹೊಂದಿಸಿ ಪಟಾಕಿ ದಾಸ್ತಾನು ಮಾಡಿದ್ದೇವೆ. ಸರ್ಕಾರ ಏಕಾಏಕಿ ಈ ರೀತಿಯ ನಿರ್ಧಾರ ಮಾಡಿದ್ರೆ ನಾವು ಬೀದಿಗೆ ಬೀಳುತ್ತೇವೆಂದು ಆಕ್ರೋಶವ್ಯಕ್ತಪಡಿಸಿದ್ದಾರೆ.

jk-logo-justkannada-logo

ಸಾಲ ಮಾಡಿ ಬಂಡವಾಳ ಹಾಕಿದ್ದೇವೆ

ಈಗಾಗಲೇ ಮೈಸೂರಿನ ಜೆಕೆ ಮೈದಾನದಲ್ಲಿ ಮಳಿಗೆಗಳನ್ನು ನಿರ್ಮಿಸಿದ್ದ ಪಟಾಕಿ ವ್ಯಾಪಾರಸ್ಥರು. ನಿಗದಿತ ಸಮಯದಲ್ಲಿ ಪಟಾಕಿ ಮಾರಾಟ ಮಾಡಿ ಎಂದು ಆದೇಶ ಕೊಟ್ಟು ಈಗ ತಕ್ಷಣ ನಿಷೇದ ಹೇರಿರುವುದು ಅನ್ಯಾಯ. ಕೊರೊನಾ ಸಂಕಷ್ಟದಲ್ಲಿ ಸಾಲ ಮಾಡಿ ಬಂಡವಾಳ ಹಾಕಿದ್ದೇವೆ ಎಂದು ಪಟಾಕಿ ಮಾರಾಟಗಾರರು ಅಳಲು ತೋಡಿಕೊಂಡಿದ್ದಾರೆ.

100ಕ್ಕೂ ಹೆಚ್ಚು ಮಾರಾಟಗಾರರಿದ್ದೇವೆ 1ಸಾವಿರಕ್ಕೂ ಹೆಚ್ಚು ಕಾರ್ಮಿಕರಿದ್ದಾರೆ

ಮೈಸೂರಿನಲ್ಲಿ 100ಕ್ಕೂ ಹೆಚ್ಚು ಮಾರಾಟಗಾರರಿದ್ದೇವೆ 1ಸಾವಿರಕ್ಕೂ ಹೆಚ್ಚು ಕಾರ್ಮಿಕರಿದ್ದಾರೆ. ಈಗಾಗಲೇ ಪಾಲಿಕೆಗೆ ಹಣ ಕಟ್ಟಿ ಲೈಸೆನ್ಸ್ ಪಡೆದಿದ್ದೇವೆ. ಅಗ್ನಿಶಾಮಕದಳದಿಂದಲೂ ಅನುಮತಿ ಪಡೆದಿದ್ದೇವೆ ಎಂದು ಮಾಹಿತಿ ನೀಡಿದರು.

ಹಬ್ಬದ ನಾಲ್ಕು ದಿನಗಳ ಕಾಲ ಮಾರಾಟಕ್ಕೆ ಅನುವು ಮಾಡಿಕೊಡಿ

ಜೆ.ಕೆ.ಮೈದಾನದಲ್ಲಿ ಮಳಿಗೆಗಳ ನಿರ್ಮಾಣ ಮಾಡಲು ಹಣ ಕಟ್ಟಿದ್ದೇವೆ. ಆದರೆ, ಏಕಾಏಕಿ ಈ ನಿರ್ಧಾರ ನಮ್ಮನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸುತ್ತಿದೆ. ಸದ್ಯ ದಾಸ್ತಾನಿರುವ ಪಟಾಕಿಯನ್ನು ಮಾರಾಟ ಮಾಡಲು ಅವಕಾಶ ನೀಡಿ. ಹಬ್ಬದ ನಾಲ್ಕು ದಿನಗಳ ಕಾಲ ಮಾರಾಟಕ್ಕೆ ಅನುವು ಮಾಡಿಕೊಡಿ ಎಂದು ಸರ್ಕಾರಕ್ಕೆ ಪಟಾಕಿ ವ್ಯಾಪಾರಸ್ಥರ ಮನವಿ ಮಾಡಿದ್ದಾರೆ.

Fireworks-ban-Diwali-festival-Fireworks-vendor-outrage

key words : Fireworks-ban-Diwali-festival-Fireworks-vendor-outrage