ಬೆಂಗಳೂರು,ನವೆಂಬರ್,10,2020(www.justkannada.in): ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಮಾರಪ್ಪನ ಪಾಳ್ಯ ದ ಅಶೋಕಪೂರದಲ್ಲಿ ಆಹಾರ ನಾಗರಿಕ ಪೂರೈಕೆ ಸಚಿವರಾದ ಕೆ ಗೋಪಾಲಯ್ಯ ಅವರು ಶಾಸಕರ ನಿಧಿಯಿಂದ ಸುಮಾರು ಐದು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅಂಬೇಡ್ಕರ್ ಭವನದ ಕಾಮಗಾರಿಯನ್ನು ವೀಕ್ಷಿಸಿದರು.
ನಂತರ ಮಾತನಾಡಿದ ಸಚಿವ ಗೋಪಾಲಯ್ಯ, ಆದಷ್ಟು ತ್ವರಿತವಾಗಿ ಪೂರ್ಣಗೊಳಿಸಲು ಸಂಬಂಧಪಟ್ಟ ಗುತ್ತಿಗೆದಾರರರಿಗೆ ಸೂಚಿಸಿದರು. ನಂತರ ನಗರೋತ್ಥಾನ ಯೋಜನೆಯಡಿ ಮಂಜೂರಾದ ಬೃಹತ್ ನೀರು ಕಾಲುವೆ ನಿರ್ಮಾಣ ಕಾಮಗಾರಿ ಕೈಗೊಂಡಿರುವ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದರು.
ಗುತ್ತಿಗೆದಾರ ಮುತ್ತಪ್ಪ ಅವರು ಸಚಿವ ಗೋಪಾಲಯ್ಯರಿಗೆ ಕಾಮಗಾರಿಯ ವಿವರ ನೀಡಿದರು. ಸಚಿವರ ಜೊತೆ ಬಿಜೆಪಿ ಮುಖಂಡರಾದ ಡಾಬಾ ಶ್ರೀನಿವಾಸ, ತೇಜೆಗೌಡ ಸಮಾಲೋಚಕರು,ಮನುಕುಮರ್ ಸೈಟ್ ಇಂಜಿನಿಯರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Key words: Minister –K. Gopalaiah- watched – work – Ambedkar Bhavan.