ಚಾಮರಾಜನಗರ,ನವೆಂಬರ್,12,2020(www.justkannada.in): ರೈತ ಜಮೀನು ವೀಕ್ಷಣೆ ಮಾಡಲು ಹೋಗಿದ್ದಾಗ ಜಮೀನಿನಲ್ಲಿ ಭಾರಿ ಗಾತ್ರದ ಹೆಬ್ಬಾವು ಪ್ರತ್ಯಕ್ಷವಾಗಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ತಾಲ್ಲೂಕಿನ ಹೊಂಡರಬಾಳು ಗ್ರಾಮದಲ್ಲಿ ನಡೆದಿದೆ.
ಹೊಂಡರಬಾಳು ಗ್ರಾಮದ ಸಿದ್ದರಾಜು ಎಂಬುವರು ಜಮೀನಿನಲ್ಲಿ ಹೆಬ್ಬಾವು ಪ್ರತ್ಯಕ್ಷವಾಗಿದೆ. ಜೋಳದ ಜಮೀನಿನಲ್ಲಿ 15 ಅಡಿ ಉದ್ದದ 48 ಕೆಜಿ ತೂಕದ ಬಾರಿ ಗಾತ್ರದ ಹೆಬ್ಬಾವು ಪ್ರತ್ಯಕ್ಷವಾಗಿದ್ದು ಹೆಬ್ಬಾವು ಕಂಡು ರೈತ ಸಿದ್ದರಾಜು ಬೆಚ್ಚಿಬಿದಿದ್ದಾರೆ.
ಕೂಡಲೇ ಉರಗ ಸಂರಕ್ಷಕ ರಘು ಹಾಗೂ ಅರಣ್ಯ ಇಲಾಖೆಗೆ ಈ ಕುರಿತು ಮಾಹಿತಿ ನೀಡಿದ್ದು ಬಳಿಕ ಸ್ಥಳಕ್ಕಾಗಮಿಸಿದ ಉರಗ ಸಂರಕ್ಷಕ ರಘು ಹೆಬ್ಬಾವನ್ನು ಸಂರಕ್ಷಿಸಿ ಬಿಆರ್ ಟಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.
Key words: Huge –snake- farm-bewildered- farmer-kollegal