ಬೆಂಗಳೂರು,ನವೆಂಬರ್,14,2020(www.justkannada.in) : ಇನ್ನೂ ಮೂರು ವಾರದೊಳಗೆ ಗ್ರಾಮಪಂಚಾಯತಿ ಚುನಾವಣಾ ದಿನಾಂಕದ ಪ್ರಕಟಿಸುವಂತೆ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ಸೂಚನೆ ಹಿನ್ನೆಲೆ ಲೋಕಲ್ ಪೈಟ್ ಗೆ ಸ್ಪರ್ಧಾಕಾಂಕ್ಷಿಗಳು ಸಿದ್ಧತೆ ನಡೆಸುತ್ತಿದ್ದಾರೆ.
ಇನ್ನೂ ಮೂರು ವಾರಗಳಲ್ಲಿ ಗ್ರಾಪಂ ಚುನಾವಣೆ ದಿನಾಂಕ ನಿಗದಿ ಮಾಡುವಂತೆ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ಸೂಚನೆ ನೀಡಿದ ಬೆನ್ನಲ್ಲೆ ಹಳ್ಳಿ,ಹಳ್ಳಿಗಳಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಸ್ಪರ್ಧಾಕಾಂಕ್ಷಿಗಳ ಮುಖದಲ್ಲಿ ಸಂತಸ ಮೂಡಿದೆ. ಇತ್ತ ತಮ್ಮ ಪಕ್ಷದ ಬೆಂಬಲಿಗರನ್ನು ಗೆಲ್ಲಿಸಿಕೊಳ್ಳಲು ಪ್ರಮುಖ ಪಕ್ಷಗಳ ಕಸರತ್ತು ನಡೆಸಿವೆ.
ಮತದಾರರನ್ನು ಸೆಳೆಯಲು ರಾಜಕೀಯ ತಂತ್ರಗಾರಿಕೆ
ಮತದಾರರನ್ನು ಸೆಳೆಯಲು ಸ್ಪರ್ಧಾಕಾಂಕ್ಷಿಗಳಿಂದ ರಾಜಕೀಯ ತಂತ್ರಗಾರಿಕೆ. ಪಕ್ಷಗಳು ಲೋಕ್ ಪೈಟ್ ಗೆ ಬೂತ್ ಮಟ್ಟದ ಮುಖಂಡರಿಗೆ ಜವಬ್ದಾರಿ ನೀಡಿದ್ದು, ನವೆಂಬರ್ ಅತ್ಯಂದ ವೇಳೆಗೆ ದಿನಾಂಕ ನಿಗದಿ ಸಾಧ್ಯತೆ ಹಿನ್ನೆಲೆ. ತಳಮಟ್ಟದ ಕಾರ್ಯಕರ್ತರನ್ನು ಒಗ್ಗೂಡಿಸಲು ಪಕ್ಷಗಳು ಮುಂದಾಗಿವೆ.
ಆಕಾಂಕ್ಷಿಗಳು ಈಗಾಗಲೆ, ಹೊಸ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡುತ್ತಿದ್ದಾರೆ. ಆ ಮೂಲಕ ಹೊಸ ಮತದಾರರನ್ನ ತಮ್ಮತ್ತ ಸೆಳೆಯುವ ಪ್ರಯತ್ನದಲ್ಲಿದ್ದಾರೆ.
key words : Grapam-Election-Date-publish-High-Court-notice-Preparing-contestants-local-pite